ಮನೋರಂಜನೆ

ಜಾಲತಾಣದಲ್ಲಿ ಐರಾಳದ್ದೇ ಹವಾ: ‘ಐರಾ ಯಶ್’ ಹೆಸರಿನ ರಹಸ್ಯವೇನು?

Pinterest LinkedIn Tumblr

ಸ್ಯಾಂಡಲ್​ವುಡ್​​​ ರಾಕಿಂಗ್​ ಜೋಡಿಯ ರಾಕಿಂಗ್​ ರಾಜಕುಮಾರಿಯ ಹೆಸರೇನು..? ಅನ್ನೋ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ​ ಸಿಕ್ಕಿದೆ.. ತಮ್ಮದೇ ಉಸಿರಿನ ಮಗಳೆಂಬ ಕನಸನ್ನ, ಮಿಸ್ಟರ್ ಅಂಡ್​ ಮಿಸ್ಸೆಸ್​ ಯಶ್​​, ಐರಾ ಅಂತ ಕರೆದಿದ್ದಾರೆ..

 

ಯಶ್​​ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳಿಗೆ ಅಭಿಮಾನಿಗಳು ಸೂಚಿಸಿದ ಹೆಸ್ರು ಒಂದಾ ಎರಡಾ.. ರಿತಿಕ್ಷಾ, ಯಶಿಕಾ, ರಾಧ್ಯಾ, ರಾಶಿ, ರಿಯಾ, ರಶಿಕಾ, ಬೇಬಿ ಸಿಂಡ್ರೆಲಾ ಹೀಗೆ ಹೇಳ್ತಾ ಹೋದ್ರೆ ಲೀಸ್ಟ್ ಬೆಳೆಯುತ್ತಾ ಹೋಗುತ್ತೆ.. ಯಶ್​​- ರಾಧಿಕಾ ಹೆಸರಿನಿಂದ ಒಂದೊಂದು ಅಕ್ಷರವನ್ನ ಸೇರಿಸಿ, ಒಂದೊಳ್ಳೆ ಅರ್ಥ ಬರುವಂತೆ ಸಾಕಷ್ಟು ಹೆಸರುಗಳನ್ನ ಅಭಿಮಾನಿಗಳು ಸಜೆಸ್ಟ್ ಮಾಡಿದ್ರು.. ಅದ್ರಲ್ಲೂ ಯಶಿಕಾ ಅನ್ನೋ ಹೆಸರು ಕೊಂಚ ಜೋರಾಗಿಯೇ ಸೌಂಡ್ ಮಾಡಿಬಿಡ್ತು.. ಬಟ್ ಫೈನಲಿ ಬೇಬಿ ವೈಆರ್​​​ ನೇಮ್​ ರಿವೀಲ್ ಆಗಿದೆ..

 

ಕಳೆದ ಡಿಸೆಂಬರ್ 2ರಂದು ರಾಕಿಂಗ್ ಸ್ಟಾರ್ ಯಶ್ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿತ್ತು.. ರಾಧಿಕಾ ಪಂಡಿತ್​​ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು..ಅಂದಿನಿಂದ್ಲೇ ಬೇಬಿ ಸಿಂಡ್ರೆಲಾ ಹೇಗಿದ್ದಾಳೆ..? ಅವಳ ಹೆಸರೇನು..? ಅನ್ನೋ ಪ್ರಶ್ನೆ ಅಭಿಮಾನಿಗಳನ ಕಾಡ್ತಿತ್ತು.. ಅಕ್ಷಯ ತೃತಿಯ ದಿನದಂದು ಬೇಬಿ ವೈಆರ್​ ದರ್ಶನವಾಗಿತ್ತು.. ಸೋಷಿಯಲ್​ ಮೀಡಿಯಾದಲ್ಲಿ ಸಿಂಗಲ್​​ ಪಿಕ್​ನಿಂದ ಶುರುವಾದ ಸೆನ್ಸೇಷನ್ ಒಂದೊಂದೋ ಫೋಟೋ, ವೀಡಿಯೋದಿಂದ ಹೆಚ್ಚಾಗ್ತಾ ಹೋಯ್ತು..

 

ಕ್ಯೂಟ್​​​​ ಬೇಬಿ ವೈಆರ್​​ ಫೋಟೋ, ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗೋಕ್ಕೆ ಶುರುವಾಯ್ತು.. ಅದೇ ರೀತಿ ಈ ರಾಜಕುಮಾರಿಯ ಹೆಸರೇನಪ್ಪಾ..? ಅನ್ನೋ ಕ್ಯೂರಿಯಾಸಿಟಿ ಕೂಡ ಹೆಚ್ಚಾಗ್ತಾ ಬಂತು.. ಕೊನೆಗೂ ಬೇಬಿ ಡಾಲ್ ಹೆಸರು ಬಹಿರಂಗವಾಗಿದ್ದು, ರಾಕಿಂಗ್​ ಜೋಡಿ ತಮ್ಮ ಮಗಳನ್ನ ಐರಾ ಯಶ್ ಅಂತ ಕರೆದಿದ್ದಾರೆ.. ನಿನ್ನೆ ಬೆಳಗ್ಗೆ11 ಗಂಟೆಯಿಂದ ಶತಭಿಷಾ ನಕ್ಷತ್ರ, ಸಿಂಹ ಲಗ್ನದಲ್ಲಿ ನಾಮಕರಣ ಮಾಡಿ ಸಂಭ್ರಮಿಸಿದ್ದಾರೆ.. ಸಂಜೆ ವೇಳೆಗೆ ಐರಾಳ ನಾಮಕರಣದ ಸುಂದರ ಕ್ಷಣಗಳ ವೀಡಿಯೋ ಹೊರ ಬಂತು..

 

ತಮ್ಮ ನೆಚ್ಚಿನ ತಾರಾ ಜೋಡಿಯ ಮಗಳ ಹೆಸ್ರು ಐರಾ ಅಂತ ಗೊತ್ತಾಗ್ತಿದಂತೆ ಅಭಿಮಾನಿಗಳು ಖುಷಿಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ರು.. ಆದ್ರೆ ಕೆಲವರು ಐರಾ ಅಂದ್ರೆ ಏನಪ್ಪಾ ಅರ್ಥ ಅಂತ ಗೂಗಲ್ ಮಾಡೋಕ್ಕೆ ಶುರು ಮಾಡಿದ್ರು.. ಇನ್​​ ಕೆಲವರು ಅರೇ ಇದು, ಮುಸ್ಲಿಂ ಹೆಸ್ರು ಇದ್ದಂಗಿದೆ ಅಂತ ತಲೆ ಕೆಡಿಸಿಕೊಂಡಿದ್ರು..

 

ಐರಾ ಪದದ ಮೂಲ ಅರೇಬಿಕ್​​​ ಭಾಷೆ.. ಅರೇಬಿಕ್‌ನಲ್ಲಿ ’ಐರಾ’ ಎಂದರೆ ‘ಕಣ್ಣು ತೆರೆಸುವವರು’ ಅಥವಾ ‘ಗೌರವಾನ್ವಿತರು’ ಎಂದರ್ಥ.. ಸಂಸ್ಕೃತದಲ್ಲಿ ಐರಾ ಅಂದ್ರೆ ‘ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ’ ಎಂದರ್ಥ .. ಲಕ್ಷ್ಮೀಗೆ ರಕ್ಷಕನಾಗಿರುವವನನ್ನ ಐರಾವತ ಅಂತ ಕರೀತಾರೆ.. ಮನೆಗೆ ಸಂತಸ ತುಂಬಿದ ಲಕ್ಷ್ಮೀಯನ್ನ ಮಾಡ್ರನ್​​​ ಆಗಿ ಐರಾ ಅಂತ ಕ್ಯೂಟ್​​​​ ಆಗಿ ಕರೆದಿದ್ದಾರೆ ಯಶ್​ ಮತ್ತು ರಾಧಿಕಾ..

 

ಐರಾ ಅಂದ್ರೆ ದಿ ಬಿಗಿನಿಂಗ್, ದಿ ಪ್ರಿನ್ಸಿಪಲ್, ದಿ ಬ್ರೀತ್ ಆಫ್ ಲೈಫ್​​ ಅನ್ನೋ ಅರ್ಥವೂ ಇದೆ.. ಈ ಹಿಂದೆ ಮಗಳನ್ನ ಬೇಬಿ ವೈಆರ್​ ಅಂತ ಕರೆದಾಗಲೇ ತಮ್ಮದೇ ಅದೆರಡು ಅಕ್ಷರಗಳಲ್ಲೇ ಮಗಳ ಹೆಸರಿದೆ ಅನ್ನೋ ಸುಳಿವು ಸಿಕ್ಕಿತ್ತು.. ಐರಾ ಪದದ ಮಧ್ಯದಲ್ಲಿ ಯಶ್​ ಹೆಸರಿನ ಮೊದಲ ಅಕ್ಷರ ವೈ ಮತ್ತು ರಾಧಿಕಾ ಹೆಸರಿನ ಮೊದಲ ಅಕ್ಷರ ಆರ್​ ಇದೆ..

 

ಅಂದಹಾಗೆ ಯಶ್​ ಮತ್ತು ರಾಧಿಕಾ ಪಂಡಿತ್ ದಂಪತಿಗೆ ನಗರದ ತಾಜ್ ವೆಸ್ಟೆಂಡ್ ಹೋಟೆಲ್​ ಲಕ್ಕಿ.. 2016ರಲ್ಲಿ ರಾಕಿಂಗ್​ ಜೋಡಿ ಅದೇ ಹೋಟೆಲ್ ಆವರಣದಲ್ಲಿ ಹಸೆಮಣೆ ಏರಿದ್ರು.. ರಾಧಿಕಾ ಸೀಮಂತ ಅಲ್ಲೇ ನಡೆದಿತ್ತು.. ಇದೀಗ ತಮ್ಮ ಮುದ್ದಿನ ಮಗಳ ನಾಮಕರಣ ಮಹೋತ್ಸವವನ್ನ ಅಲ್ಲೇ ನೆರವೇರಿಸಿದ್ದಾರೆ.. ಸದ್ಯ ಐರಾ ನೇಮಿಂಗ್ ಸೆರಮನಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ..

 

Comments are closed.