ಕ್ರೀಡೆ

ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡಿದ ಸಚಿನ್!

Pinterest LinkedIn Tumblr

ಲಂಡನ್‌: ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೆಟ್‌ನಲ್ಲಿ ಬೌಲಿಂಗ್‌ ಮಾಡಿದ ತೆಂಡೂಲ್ಕರ್‌…

 

ಇದು ಅಚ್ಚರಿಯಾದರೂ ಸತ್ಯ ಸಂಗತಿ. ಆದರೆ, ಇವರು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅಲ್ಲ, ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌.

 

ಮಂಗಳವಾರ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ತಂಡಗಳ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಇದಕ್ಕಾಗಿ ಸೋಮವಾರ ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್ ಮೈದಾನದಲ್ಲಿ ಅಭ್ಯಾಸ ನಡೆಸಿದರು. ಈ ಗುಂಪಿನೊಳಗೆ ಅರ್ಜುನ್‌ ತೆಂಡೂಲ್ಕರ್‌ ಕಂಡುಬಂದರು. ನೆಟ್‌ ಬೌಲರ್‌ ರೂಪದಲ್ಲಿ ಇಂಗ್ಲೆಂಡ್‌ನ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡಿ ಗಮನ ಸೆಳೆದರು.

 

ಕಿತ್ತಳೆ ಬಣ್ಣದ ಟೀಶರ್ಟ್‌ ಧರಿಸಿದ್ದ ಅರ್ಜುನ್‌ ತೆಂಡೂಲ್ಕರ್‌, ಇಂಗ್ಲೆಂಡ್‌ನ ಸ್ಪಿನ್‌ ಬೌಲಿಂಗ್‌ ಕೋಚ್‌ ಸಕ್ಲೇನ್‌ ಮುಷ್ತಾಕ್‌ ಅವರ ಮುಂದಾಳತ್ವದಲ್ಲಿ ಬೌಲಿಂಗ್‌ ಮಾಡಿದರು.

 

ಇಂಗ್ಲೆಂಡ್‌ ತಂಡದ ನೆಟ್‌ನಲ್ಲಿ ಅರ್ಜುನ್‌ ಬೌಲಿಂಗ್‌ ಮಾಡಿದ್ದು ಇದೇ ಮೊದಲಲ್ಲ. 2015ರಲ್ಲಿ ಆ್ಯಶಸ್‌ ಟೆಸ್ಟ್‌ ಸರಣಿಯ ಪೂರ್ವದಲ್ಲೂ ನೆಟ್‌ನಲ್ಲಿ ನೆರವು ನೀಡಿದ್ದರು. ಆ ವೇಳೆ ಅವರಿಗೆ ಕೇವಲ 15 ವರ್ಷವಾಗಿತ್ತು. 19 ವರ್ಷದ ಅರ್ಜುನ್‌ ಕಳೆದ ವಾರ ಎಂಸಿಸಿ ಯಂಗ್‌ ಕ್ರಿಕೆಟ್‌ ತಂಡದ ಪರವಾಗಿ ಸರ್ರೆ ಸೆಕೆಂಡ್‌ ಲೆವೆನ್‌ ತಂಡದ ವಿರುದ್ಧ ಆಡಿದ್ದರು.

 

Comments are closed.