ಮನೋರಂಜನೆ

100 ಕೋಟಿ ಬಜೆಟ್​​ನ ಚಿತ್ರಕ್ಕೆ ಮತ್ತೆ ಡೈರೆಕ್ಟರ್​ ಆಗ್ತಿದ್ದಾರೆ ಶೆಟ್ರು!

Pinterest LinkedIn Tumblr


ಒಂದಲ್ಲ, ಎರಡಲ್ಲ ಸತತ ಐದು ವರ್ಷವೇ ಆಯ್ತು. ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಿರ್ದೇಶನಕ್ಕೆ ಧುಮುಕದೇ. ಆದ್ರೀಗ ರಕ್ಷಿತ್​ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರಂತೆ. ಅಷ್ಟಕ್ಕೂ ರಕ್ಷಿತ್ ನಿರ್ದೇಶಿಸ್ತಿರೋ ಹೊಸ ಸಿನಿಮಾ ಯಾವುದು..? ಏನ್ ಕಥೆ..? ಎಲ್ಲಾ ಹೇಳ್ತೀವಿ ಜಸ್ಟ್ ವಾಚ್​..

ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಸಿಂಪಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಸ್ಯಾಂಡಲ್ ವುಡ್ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತ್ತು.ಚಿತ್ರದಲ್ಲಿ ಡೈಲಾಗ್ ಮತ್ತು ಡಿಫರೆಂಟ್ ನಟನೆಯಿಂದ ರಕ್ಷಿತ್ ಶೆಟ್ಟಿ ‘ಸಿಂಪಲ್ ಸ್ಟಾರ್’ ಅಂತ್ಲೇ ಫೇಮಸ್ ಆದ್ರು.

ಯಾವಾಗ ರಕ್ಷಿತ್​​ ನಟನಾಗಿ ಫೇಮಸ್​ ಆದ್ರೋ ಆಗ ಸ್ಯಾಂಡಲ್​ವುಡ್​ ಡೈರೆಕ್ಟರ್​ ರಕ್ಷಿತ್​ನನ್ನು ಮಿಸ್​ ಮಾಡ್ಕೊಂಡಿತ್ತು. ಯಾಕಂದ್ರೆ ರಕ್ಷಿತ್​ ಆ್ಯಕ್ಷನ್​ ಕಟ್​ ಹೇಳಿದ್ದು ಒಂದೇ ಚಿತ್ರಕ್ಕೆ. ಅದು ಉಳಿದವರು ಕಂಡಂತೆ. ಆದ್ರೆ ಆ ಸಿನಿಮಾದ ಕನ್ನಡದ ಪಾಳಿಗೆ ಹೊಸ ಸಾಧ್ಯತೆಗಳನ್ನು ತೆರಿದಿಟ್ಟ ಸಿನಿಮಾ. ಹೀಗಾಗಿ ರಕ್ಷಿತ್​ ಡೈರೆಕ್ಷನ್​ಗೆ ಕಾಯ್ತಾ ಇರೋ ದೊಡ್ಡ ಬಳವೇ ಇದೆ.

ಸದ್ಯ ರಕ್ಷಿತ್ ಶೆಟ್ಟಿ ಸದ್ಯ ಅವನೇ ಶ್ರೀಮನ್ನಾರಾಯಣ ಮತ್ತು ಚಾರ್ಲಿ 777 ಸಿನಿಮಾಗಳಲ್ಲಿ ಬ್ಯಸಿ ಇದ್ದಾರೆ. ಅವನೇ ಶ್ರೀಮನ್ನಾರಾಯಣ ಟೀಸರ್​ ಮೂಲಕೇ ಭಾರೀ ಸೌಂಡ್​ ಮಾಡಿದೆ. ಚಾರ್ಲಿ 777 ಕೂಡ ಪೋಸ್ಟರ್​ ಮೂಲಕ ಕುತೂಹಲ ಹುಟ್ಟಿಸಿದೆ.

ಅಂದಹಾಗೆ ಈ ಎರಡು ಸಿನಿಮಾಗಳ ಗ್ಯಾಪ್​ನಲ್ಲಿ ಕರ್ಣ ನಿರ್ದೇಶನಕ್ಕೆ ರೆಡಿ ಮಾಡ್ತಾ ಇದ್ದಾರೆ. ಅದು ಭಾರೀ ಬಜೆಟ್ ಸಿನಿಮಾವಂತೆ. ಹೆಚ್ಚುಕಡಿಮೆ 100 ಕೋಟಿಯಲ್ಲಿ ಈ ಸಿನಿಮಾ ತಯಾರಾಗಲಿದೆ. ಅಂದಹಾಗೆ ಈ ಹೈ ಬಜೆಟ್ ಸಿನಿಮಾವೇ ಪುಣ್ಯಕೋಟಿ.

ಸತತ ಎರಡು, ಮೂರು ವರ್ಷಗಳಿಂದ ಈ ಸಿನಿಮಾಕ್ಕೆ ರಕ್ಷಿತ್ ಪ್ರಿಪರೇಷನ್ ಮಾಡ್ಕೊಳ್ತಿದ್ದಾರಂತೆ. ಅಲ್ಲದೇ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗ್ತಿದ್ದಂತೆ ಪುಣ್ಯಕೋಟಿ ಟೇಕಾಫ್​ ಆಗಲಿದೆ. ಅಲ್ಲಿಗೆ 5 ವರ್ಷಗಳ ಬಳಿಕ ಕಿರಿಕ್​ ಹುಡ್ಗ ಡೈರೆಕ್ಟರ್​ ಸೀಟ್​​ನಲ್ಲಿ ಕೂರಲಿದ್ದಾರೆ.

ಈ ಸಿನಿಮಾಕ್ಕೆ ಬೃಹತ್ ಸೆಟ್ ಹಾಕಲಾಗ್ತಿದೆ. ಈಗಾಗ್ಲೇ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಅದರಂತೆ ಪುಣ್ಯಕೋಟಿ ಸಿನಿಮಾ ಕೂಡ ಬಹುಭಾಷಾ ಸಿನಿಮಾ.
ಒಟ್ನಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಡೈರೆಕ್ಟರ್​​ ಕ್ಯಾಪ್​​​ ತೊಡೋಕೆ ರಡಿಯಾಗಿರೋದು ಫ್ಯಾನ್ಸ್​​ಗೆ ಖುಷಿಯ ವಿಚಾರ.

Comments are closed.