ಮನೋರಂಜನೆ

ಸಮಂತಾ ಅಕ್ಕಿನೇನಿ ಈಗ ಬೇಬಿ ಅಕ್ಕಿನೇನಿ..?!

Pinterest LinkedIn Tumblr

ಮ್ಯಾರೇಜ್​ ನಂತ್ರ ಸಮಂತಾ ಅಕ್ಕಿನೇನಿ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚ್ತಿದ್ದು, ಒಂದಕ್ಕಿಂತ ಒಂದು ಡಿಫ್​ರೆಂಟ್​ ರೋಲ್​ಗಳನ್ನ ಪ್ಲೇ ಮಾಡ್ತಿದ್ದಾರೆ.. ಸ್ಯಾಮ್​​ ನಟಿಸಿದ ಸಿನಿಮಾಗಳೆಲ್ಲಾ ಸಕ್ಸಸ್ ಕಾಣ್ತಿದ್ದು, ಮಜಿಲಿ ಸಕ್ಸಸ್ ಬೆನ್ನಲ್ಲೇ ಹೊಸ ಅವತಾರ ತಾಳಿದ್ದಾರೆ..

ಓ ಬೇಬಿ.. ಟಾಲಿವುಡ್​ ಚೆಲುವೆ ಸಮಂತಾ ಅಕ್ಕಿನೇನಿ ಅಭಿನಯದ ಹೊಸ ಸಿನಿಮಾ.. ಬಿ. ವಿ ನಂದಿನಿ ರೆಡ್ಡಿ ಅಭಿನಯದ ಈ ಫ್ಯಾಂಟಸಿ ಕಾಮಿಡಿ ಎಂಟ್ರಟ್ರೈನರ್​​ನಲ್ಲಿ ಒಂದು ವಿಭಿನ್ನ ಪಾತ್ರವನ್ನ ಸ್ಯಾಮ್ ಪ್ಲೇ ಮಾಡಿದ್ದಾರೆ.. 70 ವರ್ಷದ ಅಜ್ಜಿಯಯ ಜೀವನದಲ್ಲಿ ನಡೆದ ಒಂದು ಚಮತ್ಕಾರವೇ ಓ ಬೇಬಿ ಸಿನಿಮಾ ಕಥೆ.. ಫೋಟೋ ಸ್ಟುಡಿಯೋದಲ್ಲಿ ಅಜ್ಜಿ, ಫೋಟೋ ಹಿಡಿತ್ತಿದಂತೆ ಆಕೆ 24 ವರ್ಷದ ಯುವತಿಯಾಗಿ ಬದಲಾಗಿಬಿಡ್ತಾಳೆ.. ಅದ್ಯಾಕೆ..? ಅನ್ನೋದನ್ನ ತೆರೆಮೇಲೆ ನೋಡ್ಬೇಕು..

70 ವರ್ಷದ ಅಜ್ಜಿ ಬೇಬಿ ಪಾತ್ರದಲ್ಲಿ ಜ್ಯೂಲಿ ಲಕ್ಷ್ಮೀ ಬಣ್ಣ ಹಚ್ಚಿದ್ದು, ಆಕೆ ಯುವತಿಯಾಗಿ ಬದಲಾದಾಗ ಸಮಂತಾ ಆ ಪಾತ್ರವನ್ನ ನಿಭಾಯಿಸಿದ್ದಾರೆ.. ಸ್ವಾತಿ ರೆಡ್ಡಿ ಅಲಿಯಾಸ್​​​ ಬೇಬಿ ಪಾತ್ರದಲ್ಲಿ ಸ್ಯಾಮ್​​​ ಮೋಡಿ ಮಾಡುವ ಸುಳಿವು ಸಿಕ್ತಿದೆ.. ಸಮಂತಾ 70 ವರ್ಷದ ಅಜ್ಜಿಯಾಗಿ ನಟಿಸಿದ್ದಾರೆ, ಅನ್ನೋದಕ್ಕಿಂತ 70 ವರ್ಷ ಅನುಭವದ ನಟಿಯಾಗಿ ಮಿಂಚಿದ್ದಾರೆ ಅನ್ಬೋದು..

ಅಜ್ಜಿ ಇದ್ದಕ್ಕಿದಂತೆ ಯುವತಿ ರೂಪ ತಾಳಿದ್ರೆ, ಏನೆಲ್ಲಾ ಫಜೀತಿ ಆಗುತ್ತೆ, ಅನ್ನೋದು ಈ ಚಿತ್ರದ ಹೂರಣ.. ಆ ಫಜೀತಿ ಯಾವ ಹಂತಕ್ಕೆ ಹೋಗತ್ತೆ ಅಂದ್ರೆ, ಮೊಮ್ಮಗನೇ ತನಗೆ ಗೊತ್ತಿಲ್ಲದೇ ಅಜ್ಜಿಗೆ ಲೈನ್​ ಹೊಡೆಯೋ ಹಂತಕ್ಕೆ..

ಇಡೀ ಸಿನಿಮಾ ಸಮಂತಾ ಪಾತ್ರದ ಸುತ್ತಾ ಸುತ್ತುವಂತಿದ್ದು, ನಾಗಶೌರ್ಯ ನಾಯಕನಾಗಿ ಸಾಥ್ ಕೊಟ್ಟಿದ್ದಾರೆ.. ಹಿರಿಯ ನಟ ರಾಜೇಂದ್ರ ಪ್ರಸಾದ್, ರಾವು ರಮೇಶ್, ಊರ್ವಶಿ ‘ಓ ಬೇಬಿ’ ಚಿತ್ರದ ಪ್ರಧಾನ ಪಾತ್ರವರ್ಗದಲ್ಲಿದ್ದಾರೆ.. ಅಂದ ಹಾಗೆ 2014ರಲ್ಲಿ ಬಂದ ‘ಮಿಸ್ ಗ್ರಾನಿ’ ಅನ್ನೋ ಕೊರಿಯನ್ ಸಿನಿಮಾದಿಂದ ಇನ್​ಸ್ಪೈರ್ ಆಗಿ ಓ ಬೇಬಿ ಸಿನಿಮಾ ಮಾಡಲಾಗಿದೆ.. ಸಮಂತಾ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು, ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ..

ಫೀಪಲ್ಸ್ ಮೀಡಿಯಾ ಫ್ಯಾಕ್ಟರಿ ಮತ್ತು ಸುರೇಶ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಓ ಬೇಬಿ ಸಿನಿಮಾ ನಿರ್ಮಾಣವಾಗಿದೆ.. ತೆಲುಗು ಮಾತ್ರವಲ್ಲದೇ ಈ ಸಿನಿಮಾ ತಮಿಳಿಗೂ ಡಬ್ ಆಗಿ ರಿಲೀಸ್ ಆಗ್ತಿದೆ.. ಕಾಮಿಡಿ ಜೊತೆಗೆ ಎಮೋಷನ್ ಮಿಕ್ಸ್​ ಮಾಡಿ ಕಟ್ ಮಾಡಿರೋ ಓ ಬೇಬಿ, ಟ್ರೈಲರ್​​ನ ಸೌತ್ ಸೂಪರ್ ಸ್ಟಾರ್ಸ್ ಮೆಚ್ಚಿಕೊಂಡಿದ್ದಾರೆ.. ಜುಲೈ 5ಕ್ಕೆ ಚಿತ್ರವನ್ನ ತೆರೆಗೆ ತರೋ ಪ್ರಯತ್ನ ನಡೀತಿದೆ..

Comments are closed.