
ಹರಿಪ್ರಿಯಾ… ಸ್ಯಾಂಡಲ್ವುಡ್ನ ಕ್ವೀನ್…. ಚಂದನವನದ ಸಿನಿ ರಸಿಕರ ನಿದ್ದೆ ಕದಿಯುತ್ತಿರೋ ಬ್ಯೂಟಿ.. ಸಧ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಲೀಡ್ನಲ್ಲಿರೋ ನಟಿ ಮಣಿಯರ ಪೈಕಿ ಹರಿಪ್ರಿಯಾ ಕೂಡ ಒನ್ನಾಫ್ ದಿ ಹಿರೋಯಿನ್…
ಈ ಸ್ಯಾಂಡಲ್ವುಡ್ ಡಾಲ್ ಹೋಮ್ಲಿ ಲುಕ್ಗೂ ಸೈ ಹಾಟ್ ಅವತಾರಕ್ಕೂ ಜೈ ಅನ್ನೋ ಹುಡುಗಿ. ರಿಕ್ಕಿ ಸಿನಿಮಾದ ಡಿ ಗ್ಲ್ಯಾಮರ್ ಕ್ಯಾರೆಕ್ಟರ್ನಲ್ಲಿ ಮತ್ತು ನೀರ್ದೋಸೆಯ ವೇಶ್ಯೆಯ ಪಾತ್ರದಲ್ಲಿ ಹರಿಪ್ರಿಯಾ ಅದನ್ನು ತೋರಿಸಿ ಕೊಟ್ಟಿದ್ದಾರೆ.
ಆಫ್ಟರ್ ನೀರ್ದೋಸೆ ಹರಿಪ್ರಿಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಅಲ್ಲದೆ ಒಂದೊಂದು ಸಿನಿಮಾಗಳಲ್ಲಿ ಹೊಸ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ರು. ವಿಭಿನ್ನ ಪಾತ್ರದಲ್ಲಿ ಮಿಂಚಿದ್ದ ಹರಿಪ್ರಿಯಾ ಪಾತ್ರವನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದರು.
ಅಲ್ಲದೆ 2019 ನಟಿ ಹರಿಪ್ರಿಯಾ ಪಾಲಿಗೆ ಅದೃಷ್ಟದ ವರ್ಷ. ‘ಬೆಲ್ ಬಾಟಮ್’, ‘ಸೂಜಿದಾರ’ ಹಾಗೂ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾಗಳು ಈ ವರ್ಷದ ಮೊದಲಾರ್ಧದಲ್ಲಿ ತೆರೆಗೆ ಬಂದಿವೆ. ಈ ಎಲ್ಲಾ ಸಿನಿಮಾಗಳಿಗೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ ನಾಲ್ಕೈದು ಚಿತ್ರಗಳು ಅವರ ಕೈಯಲ್ಲಿವೆ.
ಈ ನಡುವೆ ಚಿತ್ರರಂಗಕ್ಕೆ ಹರಿಪ್ರಿಯಾ ತಾತ್ಕಾಲಿಕ ಟಾಟಾ ಬೈ ಬೈ ಹೇಳಿದ್ದಾರೆ. ಹರಿಪ್ರಿಯಾ ನಿರ್ಗಮನಕ್ಕೆ ಕಾರಣವೇನು? ಅವರು ವಾಪಾಸು ಚಿತ್ರರಂಗಕ್ಕೆ ಕಾಲಿಡುವುದು ಯಾವಾಗ? ಎಂಬಿತ್ಯಾದಿ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೂ ಉತ್ತರವಿದೆ.
ಹೌದು.. ಹರಿಪ್ರಿಯಾ ಸಿನಿಮಾರಂಗದಿಂದ ದೂರವಾಗ್ತಿಲ್ಲ. ಸತತ ಶೂಟಿಂಗ್ನಿಂದ ಸುಸ್ತಾಗಿರೋ ನೀರ್ದೋಸೆ ಬೆಡಗಿ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಾನು ಕೈಗೆತ್ತಿಕೊಂಡಿದ್ದ ‘ಬಿಚ್ಚುಗತ್ತಿ’, ‘ಕನ್ನಡ್ ಗೊತ್ತಿಲ್ಲಾ’, ‘ಕುರುಕ್ಷೇತ್ರ’, ‘ಎಲ್ಲಿದ್ದೆ ಇಲ್ಲಿತನಕ’ ಮತ್ತು ‘ಕಥಾಸಂಗಮ’ ಸಿನಿಮಾದ ಶೂಟಿಂಗ್ ಹಾಗೂ ಡಬ್ಬಿಂಗ್ ಕೆಲಸವನ್ನು ಪೂರ್ಣಗೊಳಿಸಿದ್ದೇನೆ. ಇದನ್ನು ಪ್ರೇಕ್ಷಕರಿಗೆ ತೋರಿಸಲು ತುದಿಗಾಲಲ್ಲಿ ನಿಂತಿದ್ದೇನೆ. ಪ್ರತಿ ಸಿನಿಮಾದಲ್ಲೂ ನನ್ನ ಪಾತ್ರ ಭಿನ್ನವಾಗಿದೆ ಎಂದು ಬರೆದುಕೊಂಡಿದ್ದಾರೆ.
ನಾನು ಚಿಕ್ಕ ಬ್ರೇಕ್ ತೆಗೆದುಕೊಂಡು ಪ್ರವಾಸ ಹೋಗುತ್ತಿದ್ದೇನೆ. ಪ್ರವಾಸ ಮುಗಿಸಿ ಬಂದ ನಂತರ ಹೊಸ ಕಥೆ ಹಾಗೂ ತಂಡದ ಬಗ್ಗೆ ಮಾಹಿತಿ ನೀಡುತ್ತೇನೆ. ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ. ಹೊಸ ತಂಡದೊಂದಿಗೆ ಬರುತ್ತೇನೆ” ಎಂದು ಹೇಳಿದ್ದಾರೆ.
ಈ ಮೂಲಕ ಹೊಸ ಸಿನಿಮಾಗಳನ್ನು ಒಪ್ಪಿಕೊಂಡ ಸೂಚನೆ ನೀಡಿದ್ದಾರೆ. ಹರಿಪ್ರಿಯಾ ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ‘ಬೆಲ್ ಬಾಟಂ-2’ ಸಿನಿಮಾ ಕೂಡ ಬರ್ತಿದೆ ಅಂತ ಹೇಳಲಾಗುತ್ತಿತ್ತು. ಹಾಗಾಗಿ ಮತ್ತೆ ಕುಸುಮ ಆಗಿ ಕಾಣಿಸಿಕೊಳ್ತಾರಾ ಎನ್ನುವುದು ಸಧ್ಯದಲ್ಲೇ ಗೊತ್ತಾಗಲಿದೆ. ಒಟ್ನಲ್ಲಿ ಸ್ಯಾಂಡಲ್ವುಡ್ನ ಹಾಟ್ ಬ್ಯೂಟಿ ವೆಕೇಷನ್ ಮೂಡ್ನಲ್ಲಿದ್ದಾರೆ.
Comments are closed.