ಮನೋರಂಜನೆ

ಸಂಗೀತ ನಿರ್ದೇಶಕ, ನಟ, ನಿರ್ದೇಶಕ ಸಾಧುಕೋಕಿಲಾ ನನ್ನ ಗುರುಗಳು: ಬಾಲಸುಬ್ರಮಣ್ಯಂ..!

Pinterest LinkedIn Tumblr


ಸಂಗೀತ ನಿರ್ದೇಶಕ, ನಟ, ನಿರ್ದೇಶಕ ಸಾಧುಕೋಕಿಲ. ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭೆ. ಎಷ್ಟೆ ಸಿನಿಮಾಗಳಿಗೆ ಕೆಲಸ ಮಾಡಿದ್ರು, ಸಾಧುಕೋಕಿಲಗೆ ಒಂದು ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಮಾಡಬೇಕು ಅನ್ನೋ ಕನಸ್ಸಿತ್ತು. ಲೂಪ್​ ಎಂಟ್ರಟ್ರೈನ್​ಮೆಂಟ್ ಸ್ಟುಡಿಯೋದಿಂದ ಆ ಕನಸು ಈಡೇರಿದೆ. ಖ್ಯಾತ ಗಾಯಕ ಎಸ್​. ಪಿ ಬಾಲಸುಬ್ರಮಣ್ಯಂ ಈ ಸ್ಟುಡಿಯೋವನ್ನ ಉದ್ಘಾಟನೆ ಮಾಡಿದ್ದು ವಿಶೇಷ.

ನಾಗರಬಾವಿ ಸರ್ಕಲ್​ನಲ್ಲಿ ಮೂರು ಅಂತಸ್ತಿನ ಸಾಧುಕೋಕಿಲ ಒಡೆತನದ ಅದ್ದೂರಿ ಸ್ಟುಡಿಯೋ ಎದ್ದು ನಿಂತಿದೆ. ಈ ಸ್ಟುಡಿಯೋಗಾಗಿ ಸುಮಾರು ಒಂದು ವರ್ಷಗಳ ಪರಿಶ್ರಮ ಹಾಕಿ ಕೆಲ ಮಾಡಿದ್ದು, ಗ್ರಾಫಿಕ್ಸ್, ಡಬ್ಬಿಂಗ್, ಮಿಕ್ಸಿಂಗ್ ಅಂಡ್ ಮಾಸ್ಟರಿಂಗ್, ಎಡಿಟಿಂಗ್ ಸಾಂಗ್ ರೆಕಾರ್ಡಿಂಗ್ ಹೀಗೆ ಸಿನಿಮಾಗೇ ಸಂಬಂಧಪಟ್ಟ ಎಲ್ಲಾ ಕೆಲಸಗಳಿಗೂ ಈ ಸ್ಟುಡಿಯೋ ನೆರವಾಗಲಿದೆ.

ಲೂಪ್ ಸ್ಟುಡಿಯೋ ಸಾಧು ಕೋಕಿಲ ಅವರ ಬಹುದಿನಗಳ ಕನಸು. ಇಂತಹ ಸ್ಟುಡಿಯೋವನ್ನ ಎಸ್​. ಪಿ ಅವರಿಂದ ಉದ್ಘಾಟನೆ ಆಗಬೇಕು ಅನ್ನೋದು ಸಾಧು ಆಸೆಯಾಗಿತ್ತು. ಅದರಂತೆ ಇದೀಗ ಎಸ್​ಪಿಬಿ ಅವರೇ ಸ್ಟುಡಿಯೋವನ್ನ ಲೋಕಾರ್ಪಣೆ ಮಾಡಿದ್ದಾರೆ.. ಈ ಸ್ಟುಡಿಯೋ ಹೊಸ ಪ್ರತಿಭೆಗಳಿಗೆ ವೇದಕೆಯಾಗಲಿದೆ ಅಂದ್ರು.

ಸಾಧು ಕೋಕಿಲ ಮಹಾನ್ ಸಂಗೀತ ನಿರ್ದೇಶಕ. ಅವರು ಇತ್ತೀಚೆಗೆ ಹೆಚ್ಚು ಅಭಿನಯಕ್ಕೆ ಒತ್ತು ಕೊಡ್ತಿದ್ದಾರೆ. ಇನ್ಮುಂದೆ ಅವರು ಹೆಚ್ಚು ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಬೇಕು. ನನಗೆ ಹಾಡೋ ಅವಕಾಶ ಕೊಡುವ ಎಲ್ಲರೂ ನನಗೆ ಗುರುಗಳ ಸಮಾನ. ಹಾಗಾಗಿ ಸಾಧು ಕೋಕಿಲ ನನ್ನ ಗುರುಗಳು ಅಂತ ಎಸ್​​. ಪಿ ಬಾಲಸುಬ್ರಮಣ್ಯಂ ಹೇಳಿದ್ರು.

ಒಟ್ಟಾರೆ ಸಾಧುಕೋಕಿಲ ಮಾಲೀಕತ್ವದ ಲೂಪ್ ಎಂಟ್ರಟ್ರೈನ್​ಮೆಂಟ್ ಸ್ಟುಡಿಯೋ ದೊಡ್ಡ ಮಟ್ಟದಲ್ಲಿ ಬೆಳೆಯಲಿ, ಸಿನಿಮಾ ಮೇಕರ್ಸ್ ಅದರ ಅನುಕೂಲ ಪಡೆಯಲಿ. ಸಾಧುಕೋಕಿಲ ಮತ್ತು ಎಸ್​ಪಿಬಿ ಕಾಂಬಿನೇಷನ್​​ನಲ್ಲಿ ಮತ್ತಷ್ಟು ಸೂಪರ್ ಹಿಟ್ ಸಾಂಗ್ಸ್ ಬರಲಿ ಅಂತ ಹಾರೈಸೋಣ.

Comments are closed.