ಸ್ಯಾಂಡಲ್ ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಐ ಲವ್ ಯೂ ಚಿತ್ರ ನೆನ್ನೆ ರಾಜ್ಯದ್ಯಾಂತ ತೆರೆ ಕಂಡಿದ್ದು, ತೆರೆಗೆ ಬಂದ ಒಂದೇ ದಿನದಲ್ಲಿ ಚಿತ್ರ ಸ್ಯಾಂಡಲ್ ವುಡ್ ನ ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡುತ್ತಿದೆ.
ಹೌದು ನಿನ್ನೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕ ಕಾಲಕ್ಕೆ ಆಯ್ ಲವ್ ಯೂ ಚಿತ್ರ 1000ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ತೆರೆಗೆ ಬಂದಿದೆ. ಬಹುಕಾಲದ ಬಳಿಕ ಉಪೇಂದ್ರ ನಾಯಕರಾಗಿ ಮತ್ತೆ ತೆರೆ ಮೇಲೆ ಅಬ್ಬರಿಸಿದ ಐ ಲವ್ ಯೂ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದು ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ. ಇನ್ನೂ ಗಾಂಧಿನಗರದ ಪ್ರಕಾರ ಐ ಲವ್ ಯೂ ಸಿನಿಮಾ ಮೊದಲ ದಿನದಲ್ಲಿಯೇ 5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನನ್ನು ಕೊಳ್ಳೆ ಹೊಡೆದಿದೆ.
ಜೊತೆಗೆ ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್ ಚಿತ್ರ 2010ರಲ್ಲಿ 50 ಕೋಟಿ ಗಳಿಸುವ ಮೂಲಕ ಬಾಕ್ಸ ಆಫೀಸ್ ನಲ್ಲಿ ಸೌಂಡ್ ಮಾಡಿತ್ತು. ಇದೀಗಾ ಐ ಲವ್ ಯೂ ಚಿತ್ರ ಉಪ್ಪಿಯ ಹಳೆಯ ಚಿತ್ರಗಳ ದಾಖಲೆಗಳನ್ನು ಸಹ ಬದಿಗೊತ್ತಿ ಮುನ್ನುಗ್ಗುತ್ತಿರುವ ಸ್ಯಾಂಡಲ್ ವುಡ್ ನ ಈ ವರ್ಷದ 2ನೇ ಚಿತ್ರವಾಗಿದೆ.
ಇನ್ನೂ ನಿರ್ದೇಶಕ ಚಂದ್ರು ಸಿನಿಮಾವನ್ನು ಸ್ಕ್ರೀನ್ ನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದು, ರಚಿತಾ ರಾಮ್ ಬೋಲ್ಡ್ ಅಭಿನಯಕ್ಕೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾರೆ. ರಾಜ್ಯದಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.