
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪ್ರೊಫೆಷನಲ್ ಲೈಫ್ ಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಪ್ರಾಮುಖ್ಯತೆ ತಮ್ಮ ಪರ್ಸನಲ್ ಲೈಫ್ ಗೂ ಕೊಡುತ್ತಾರೆ. ಅಷ್ಟಕ್ಕೂ ನಾವು ಹೇಳಲು ಹೊರಟಿರುವ ವಿಷಯವಾದರೂ ಏನೂ ಎಂದು ಯೋಚಿಸುತ್ತಿದ್ದೀರಾ ಹಾಗಾದರೆ ಈ ಸ್ಟೋರಿ ಓದಿ.
ನಾಳೆ ವಿಶ್ವವೇ ತುದಿಗಾಲಿನಲ್ಲಿ ಕಾದು ಕೂತಿರುವ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಪಾಕ್ ಹಾಗೂ ಭಾರತ ಮುಖಾಮುಖಿಯಾಗಲಿದೆ. ಹೀಗಾಗಿ ಇಂಥ ವೇಳೆಯಲ್ಲಿ ಪತಿಯನ್ನು ಚಿಯರ್ ಅಪ್ ಮಾಡಲು ಅನುಷ್ಕಾ ಶರ್ಮಾ ಇಂಗ್ಲೆಂಡ್ನತ್ತ ಪ್ರಯಾಣ ಬೆಳೆಸಿದ್ದಾರೆ.
ಸದ್ಯ ಬೆಲ್ಜಿಯಂನ ಬೃಸ್ಸೆಲ್ ನ ಜಾಹೀರಾತು ಶೂಟಿಂಗ್ ವೊಂದರಲ್ಲಿ ಬ್ಯುಸಿಯಾಗಿದ್ದ ಅನುಷ್ಕಾ ಇದೀಗ ಪತಿ ವಿರಾಟ್ ಕೋಹ್ಲಿ ಹಾಗೂ ಟೀಂ ಇಂಡಿಯಾಗೆ ವಿಶ್ವಕಪ್ ಪಂದ್ಯದಲ್ಲಿ ಸಪೋರ್ಟ್ ಮಾಡಲು ಲಂಡನ್ಗೆ ತೆರಳಿದ್ದಾರೆ. ಜೊತೆಗೆ ಬಿಸಿಸಿಐ ಪ್ರಮುಖ ಟೂರ್ನಿಯ ವೇಳೆ ಆಟಗಾರರು ತಮ್ಮ ಪತ್ನಿಯರ ಜೊತೆ 15 ದಿನಗಳ ಕಾಲ ಇರಲು ಅನುಮತಿ ನೀಡಿದ್ದಾರೆ. ಹೀಗಾಗಿ ಇಂಗ್ಲೆಂಡಿನಲ್ಲಿ ಅನುಷ್ಕಾ, ಪತಿ ವಿರಾಟ್ ಕೊಹ್ಲಿ ಕಾಲ ಕಳೆಯಲು ನಿರ್ಧರಿಸಿದ್ದಾರೆ.
ಹೀಗೆ ಅನುಷ್ಕಾ ಶರ್ಮಾ ತಮ್ಮ ಸಿನಿ ಬ್ಯುಸಿ ಶೆಡ್ಯುಲ್ ಜೊತೆ ಜೊತೆಗೆ ಫ್ಯಾಮಿಲಿಗೂ ಸಹ ಸಮಯ ಕೊಡುತ್ತಾ ಎರಡನ್ನು ಸಮನಾಗಿ ಹೇಗೆ ಬ್ಯಾಲೆನ್ಸ್ ಮಾಡಬೇಕೆಂಬುವುದನ್ನು ಅರಿತು ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ.
Comments are closed.