ಸ್ಯಾಂಡಲ್ ವುಡ್ ನ ಅದ್ಭುತ ಪ್ರತಿಭೆ ಗಾಯಕ ವಿಜಯ್ ಪ್ರಕಾಶ್ ಇದೀಗಾ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಸಹ ಮಿಂಚುತ್ತಿದ್ದಾರೆ.
ಹೌದು ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹೆಸರಿನಲ್ಲಿ ಅಮೇರಿಕಾದ ನಾರ್ತ್ ಕರೋಲಿನಾ ಮೇ 12ನ್ನು ವಿಜಯ್ ಪ್ರಕಾಶ್ ಡೇ ಅಂತಾ ಆಚರಿಸಲಾಗುತ್ತಿದೆ. ಇದು ಕನ್ನಡಿಗರಿಗೊಬ್ಬರಿಗೆ ಸಿಕ್ಕ ಬಹುದೊಡ್ಡ ಸನ್ಮಾನ.
ಮೇ 12ರಂದು ವಿಜಯ್ ಪ್ರಕಾಶ್ ನಾರ್ತ್ ಕರೋಲಿನಾದಲ್ಲಿ ಮ್ಯೂಸಿಕ್ ಶೋ ನಡೆಸಿದ್ದರು. ಈ ಶೋ ಅಮೇರಿಕಾದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಜೊತೆಗೆ ಈ ಸಮಾರಂಭಕ್ಕೆ ಮೇಯರ್ ಆಓರ್ ದಿ ಸಿಟಿ ಆಫ್ ಕಾಂಕರ್ಡ್ರವರು ಭಾಗವಹಿಸಿದ್ದರು.
ವಿಜಯ್ ಪ್ರದರ್ಶನ ನೀಡಿದ ಪರಿ ಕಂಡು ಖುಷಿಯಾದ ಅಮೇರಿಕಾ ಜನತೆ ಈ ಮೂಲಕ ಅವರಿಗೆ ಅಚ್ಚಳಿಯದೆ ಉಳಿದಿರೋ ಗಿಫ್ಟ್ವೊಂದನ್ನು ನೀಡಿದ್ದಾರೆ. ಅದೇ ಮೇ 12ನ್ನು ವಿಜಯ್ ಪ್ರಕಾಶ್ ಡೇ ಅಂತಾ ಆಚರಿಸಲು ಮೇಯರ್ ಅಧಿಕೃತ ಘೋಷಣೆ ಮಾಡಿದ್ದಾರೆ.