ಅಂತರಾಷ್ಟ್ರೀಯ

ಇಲ್ಲಿ ಒಂದು ಬರ್ಗರ್​ಗೆ 3 ಲಕ್ಷ, ಪಿಜ್ಜಾ ​ 1.5 ಲಕ್ಷ ರೂಪಾಯಿ!

Pinterest LinkedIn Tumblr


ಒಂದು ಬರ್ಗರ್​ ಬೆಲೆ ಅಬ್ಬಬ್ಬಾ ಎಂದ್ರೇ ಎಷ್ಟಿರಬಹುದು 500, 600 ಅಥವಾ ಒಂದು ಸಾವಿರ. ಆದರೇ ಇಲ್ಲೊಂದು ಬರ್ಗರ್​ ಬೆಲೆ ಕೇಳಿದ್ರೆ ನಿಮ್ಮ ಪರ್ಸ್​​ ಗೆ ಬೆಂಕಿ ಬೀಳೋದು ಗ್ಯಾರಂಟಿ. ಹೌದು ಈ ಬರ್ಗರ್​ ನ ಬೆಲೆ ಬರೋಬ್ಬರಿ 3 ಲಕ್ಷ ರೂಪಾಯಿ. ಅದೆಲ್ಲಿದೆ ಇಂಥ ಕ್ವಾಸ್ಟ್ಲಿ ಬರ್ಗರ್ ಅಂದ್ರಾ ಈ ಸ್ಟೋರಿ ಓದಿ.

ಸ್ವಾಮಿ ಇಲ್ಲೊಂದು ಬರ್ಗರ್ ಬೆಲೆ ಬರೋಬ್ಬರಿ 3 ಲಕ್ಷ. ಜಗತ್ತಿನ ಅತ್ಯಂತ ದುಬಾರಿ ಹ್ಯಾಮ್​​ ಬರ್ಗರ್​​ನ ಬೆಲೆ 5 ಸಾವಿರ ಡಾಲರ್​ ಅಂದ್ರೆ ಅಂದಾಜು 3.5 ಲಕ್ಷ ರೂಪಾಯಿ. ಇದನ್ನ 2500 ಡಾಲರ್​ ಮೊತ್ತದ ವೈನ್​ ಬಾಟಲಿಯೊಂದಿಗೆ ಸರ್ವ್​​ ಮಾಡಲಾಗುತ್ತದೆ. ಅಯ್ಯೋ ತಿನ್ನುವುದಕ್ಕೆ ಇಷ್ಟು ಲಕ್ಷನಾ ಎಂದು ಯೋಚಿಸುತ್ತಿದ್ದೀರಾ, ಕೇವಲ ಇದೊಂದೆ ಜಗತ್ತಿನಲ್ಲಿ ತುಂಬಾ ಕಾಸ್ಟ್​​ಲೀ ಫುಡ್​ ಅಲ್ಲ. ಜಗತ್ತಿನ ಟಾಪ್ 10 ಅತೀ ದುಬಾರಿ ಫುಡ್​​ ಐಟಮ್​​ಗಳು ಕೂಡ ಇಲ್ಲಿವೆ. ಅದು ಯಾವುದಪ್ಪಾ ಅಂತೀರಾ ಇಲ್ಲಿದೆ ಡಿಟೇಲ್ಸ್​.

1. ಲಿಂಡೆತ್​ ಹೋವಿ ಪುಡಿಂಗ್ ಬೆಲೆ ಬರೋಬ್ಬರಿ ₹23 ಲಕ್ಷ, ಇದಕ್ಕೆ ಬೆಲ್ಜಿಯನ್ ಚಾಕ್ಲೆಟ್​, ಕೇವಿಯರ್​, ಚಿನ್ನದ ಪದರ​ವನ್ನ ಈ ಪುಡಿಂಗ್​​ನಲ್ಲಿ ಬಳಸಲಾಗಿದ್ದು, ಇದರಲ್ಲಿ ಎರಡು ಕ್ಯಾರೆಟ್​​ನ ಡೈಮಂಡ್​ ಕೂಡ ಉಪಯೋಗಿಸಲಾಗಿದೆ. ಇನ್ನೂ ಇದರ ಬೆಲೆ 34 ಸಾವಿರ ಡಾಲರ್ (ಅಂದಾಜು ₹23 ಲಕ್ಷ).

2. ದಿ ಫ್ಲ್ಯೂರ್​ ಬರ್ಗರ್​​​ ಇದರ ಬೆಲೆ ಬರೋಬ್ಬರಿ ₹3.5 ಲಕ್ಷ. ಸುಮಾರು 5 ಸಾವಿರ ಡಾಲರ್ಸ್ ಬೆಲೆಯ ಈ ದುಬಾರಿ ಬರ್ಗರ್​ನಲ್ಲಿ ಟ್ರಫಲ್ಸ್​ ಹಾಗೂ ಫೋಯ್​ ಗ್ರಾಸ್​ ಸಾಮಾಗ್ರಿಗಳನ್ನು ಬಳಸಲಾಗಿದೆ. ಫೋಯ್​ ಗ್ರಾಸ್​​ ಅಂದ್ರೆ ಬಾತುಕೋಳಿಯ ಲಿವರ್​​​ ಬಳಸಿ ಮಾಡೋ ಒಂದು ಉತ್ಪನ್ನವಾಗಿದ್ದು, ಹಾಗೇ ಟ್ರಫಲ್ಸ್​ ಕೂಡ ಒಂದು ರೀತಿಯ ಫಂಗಸ್​. ಇವೆರಡು ಐಟಮ್​ಗಳು ತುಂಬಾ ಕಾಸ್ಟ್​​ಲೀ. ಜೊತೆಗೆ ಈ ಬರ್ಗರ್​ ಜೊತೆ 1995ರ ಶಾಟೋಪೆಟ್ರಸ್​​ 5000 ವೈನ್​​ ನೀಡಲಾಗುತ್ತದೆ. ಈ ವೈನ್ ಬೆಲೆಯೇ ಸುಮಾರು 2500 ಡಾಲರ್ಸ್​

3. ದಿ ಝಿಲಿಯನ್ ಡಾಲರ್​ ಲಾಬ್​​ಸ್ಟರ್​​ ಫ್ರಿಟಾಟಾ ಬೆಲೆಯು ₹1.3 ಲಕ್ಷವಾಗಿದ್ದು, ಈ ಡಿಶ್​​ನಲ್ಲಿ ಸುಮಾರು 300 ಗ್ರಾಂನಷ್ಟು ಕೇವಿಯರ್(ಮೀನಿನ ಮೊಟ್ಟೆಗಳು)​ ಬಳಸಲಾಗಿದ್ದು, ಸುಮಾರು 2 ಸಾವಿರ ಡಾಲರ್ಸ್​ ಕಾಸ್ಟ್​ಲೀ ಬೆಲೆಯಾಗಿದೆ.

4. ಯೂರೋಪಿಯನ್ ವೈಟ್​ ಟ್ರಫಲ್ಸ್​ ಇದರ ಬೆಲೆ ಒಂದು ಪೌಂಡ್​ಗೆ ಅಂದರೆ ₹2.5 ಲಕ್ಷ ಆಗಿದೆ. ಭೂಮಿಯ ಕೆಳಗೆ ಬೆಳೆಯೋ ಈ ಫಂಗಸ್​​, ಫ್ರಾನ್ಸ್​ ಹಾಗೂ ಇಟಲಿಯಲ್ಲಿ ಸಿಗುತ್ತದೆ. ಒಂದು ಪೌಂಡ್​ಗೆ 3600 ಡಾಲರ್​ ಬೆಲೆ. ಇದನ್ನು ಯಾವುದೇ ಆಹಾರದಲ್ಲಿ ಬಲಸಿದರು ಅದರ ಬೆಲೆ ಏರಿಕೆ ಮಾಡಲಾಗುತ್ತದೆ.

5. ದಿ 777 ಬರ್ಗರ್​ ಈ ಬರ್ಗರ್​ ಬೆಲೆ 777 ಡಾಲರ್ಸ್​ ಆಗಿದ್ದು, ಇದರಲ್ಲಿ ಕೋಬ್​ ಬೀಫ್​, ಲಾಬ್​​ಸ್ಟರ್​, ಫೋಯಿ ಗ್ರಾಸ್​ ಹಾಗೂ 100 ವರ್ಷ ಹಳೆಯ ಬಾಲ್ಸಾಮಿಕ್ ವಿನೆಗರ್​ ಬಳಸಲಾಗುತ್ತದೆ.

6. ದಿ ವೆಸ್ಟಿನ್ ಹೋಟೆಲ್ ಬೇಗಲ್ ಇದರ ಬೆಲೆ ₹69 ಸಾವಿರ ಆಗಿದೆ. ಜೊತೆಗೆ ಇದರ ಮೇಲಿನ ಟಾಪಿಂಗ್ಸ್​ ತುಂಬಾ ಕಾಸ್ಟ್​ಲೀ ಆಗಿದ್ದು, 1000 ಡಾಲರ್​ ಬೆಲೆಯ ಈ ಬೇಗಲ್​​​ನಲ್ಲಿ ಟ್ರಫಲ್​ ಕ್ರೀಮ್​ ಚೀಸ್​ ಹಾಕಿ, ಅದರ ಮೇಲೆ ಚಿನ್ನದ ಎಲೆಗಳನ್ನ ಹಾಕಿ ಮತ್ತೆ ಟ್ರಫಲ್​ನಿಂದ ಅಲಂಕರಿಸಲಾಗುತ್ತದೆ.

7. 24 ಕ್ಯಾರೆಟ್​​ ಚಿನ್ನದ ಪಿಜ್ಜಾ ಇದರ ಬೆಲೆ ₹1.3 ಲಕ್ಷ ಆಗಿದೆ. ಈ ಪಿಜ್ಜಾದಲ್ಲಿ ಬಳಸೋ ಅಷ್ಟೂ ಸಾಮಗ್ರಿಗಳನ್ನ ಪಡೆಯೋಕೆ 48 ಗಂಟೆ ಬೇಕಾಗುತ್ತದೆ. ಪಿಜ್ಜಾ ಮೇಲೆ ಚಿನ್ನದ ಎಲೆ ಹಾಕಲಾಗುತ್ತದೆ. ಇದರ ಬೆಲೆ 2 ಸಾವಿರ ಡಾಲರ್​​

8. ಬೆರ್ಕೋಸ್​ ಬಿಲಿಯನ್ ಡಾಲರ್​ ಪಾಪ್ಕಾರ್ನ್​​​ ಬರೊಬ್ಬರಿ ಬೆಲೆ ₹1.7 ಲಕ್ಷ ಆಗಿದ್ದು, 10-20 ರೂಪಾಯಿಗೂ ಪಾಪ್​​ಕಾರ್ನ್​​ ಈ ಪಾಪ್​​ಕಾರ್ನ್​​ ಸಿಗುತ್ತದೆ. ಆದರೆ ಈ ಪಾರ್ಪ್​ಕಾರ್ನ್​ ಎಷ್ಟು ಸ್ಪೇಷಲ್ ಲೊ ಇದರ ಬೆಲೆನೂ ಅಷ್ಟೇ ಸ್ಪೆಷಲ್. ಇದರ ಒಂದು ಹರಳು ಪಾರ್ಪ್​ಕಾರ್ನ್​ಗೆ 5 ಡಾಲರ್( ಅಂದಾಜು ₹350), ಫುಲ್ ಬ್ಯಾಗ್ ಪಾಪ್​ಕಾರ್ನ್​ಗೆ 2500 ಡಾಲರ್​. ಇದರಲ್ಲಿ ಆರ್ಗ್ಯಾನಿಕ್ ಸಕ್ಕರೆ, ವೆರ್ಮಾಂಟ್​​ ಬೆಣ್ಣಡ ಹಾಗೂ ಬೋರ್ಬನ್​​ ವೆನಿಲ್ಲಾ ಬಳಸಲಾಗುತ್ತದೆ. ಜೊತೆಗೆ ಹಗತ್ತಿನ ಅತೀ ದುಬಾರಿ ಉಪ್ಪು ಇದಕ್ಕೆ ಬಳಕೆಯಾಗುತ್ತದೆ.

9. ವಾಗ್ಯೂ ಬೀಫ್​​ ಇದರ ಬೆಲೆ (ಒಂದು ಪೌಂಡ್​ಗೆ) ಅಂದರೆ ₹20 ಸಾವಿರ. ಈ ಬೀಫ್​​​​​ ಜಪಾನ್​​ನಲ್ಲಿ ಸಿಗುತ್ತದೆ. ವಿಶ್ವದ ಬೇರೆ ಕಡೆಗಳಲ್ಲಿ ರಿಯಲ್ ಆದ ವಾಗ್ಯೂ ಬೀಫ್​ ಸಿಗೋದು ತುಂಬಾನೆ ಕಡಿಮೆ. ಇನ್ನೂ ಇದರ ಬೆಲೆ ಒಂದು ಪೌಂಡ್​ಗೆ 300 ಡಾಲರ್​.

10. ಐಸ್​​ಕ್ರೀಮ್ ಇದರ ಬೆಲೆ ₹69 ಸಾವಿರ ಆಗಿದ್ದು, ಇದರಲ್ಲಿ ತಾಹಿಟಿಯನ್ ವೆನಿಲ್ಲಾ ಬೀನ್​​ ಐಸ್​​ಕ್ರೀಮ್​​​​ ಜೊತೆಗೆ, ತಿನ್ನಬಹುದಾದ ಚಿನ್ನದ ಎಲೆ​​​ಯನ್ನ ಹಾಕಿ ಕೊಡಲಾಗುತ್ತದೆ. ಇದನ್ನು ತಿನ್ನಬೇಕು ಅಂದ್ರೆ 48 ಗಂಟೆ ಮೊದಲೇ ಆರ್ಡರ್​ ಮಾಡಬೇಕು. ಇನ್ನೂ ಇದಕ್ಕೆ ವಿಶ್ವದ ವಿವಿಧ ಮೂಲೆಗಳಿಂದ ಸಾಮಗ್ರಿಗಳನ್ನು ಬಳಸಲಾಗಿದ್ದು, ಇನ್ನೂ ಈ ಐಸ್ ಕ್ರೀಂ ಬೆಲೆ 1000 ಡಾಲರ್ಸ್​ ಆಗಿದೆ.

Comments are closed.