ಮನೋರಂಜನೆ

ಇದು ಪವನ್‌ ಒಡೆಯರ್ ರ ಮುಂದಿನ ಸಿನಿಮಾ

Pinterest LinkedIn Tumblr


ಸ್ಯಾಂಡಲ್​ವುಡ್​ನಲ್ಲಿ 6 ವರ್ಷಗಳ ಲಾಂಗ್​ ಗ್ಯಾಪ್​ ನಂತ್ರ ಮತ್ತೊಮ್ಮೆ ,ಲವ್​ ಸ್ಟೋರಿ ಹೇಳೋಕ್ಕೆ ರೆಡಿಯಾಗಿದ್ದಾರೆ ನಿರ್ದೇಶಕ ಪವನ್ ಒಡೆಯರ್.. ವಿಭಿನ್ನ ಪ್ರೇಮ್​ ಕಹಾನಿ ಜೊತೆಗೆ ಫ್ರೆಶ್​ ಪೇರ್​ವೊಂದನ್ನ ಕೂಡ ಇಂಟ್ರಡ್ಯೂಸ್ ಮಾಡ್ತಿದ್ದಾರೆ..

ಲವ್​ ಸ್ಟೋರಿ, ಕಾಮಿಡಿ, ಹಾರರ್, ಸಸ್ಪೆನ್ಸ್​ ಥ್ರಿಲ್ಲರ್​​ನಂತಹ ವಿಭಿನ್ನ ತರಹದ ಸಿನಿಮಾಗಳನ್ನ ಮಾಡಿ ಗೆದ್ದಿರೋ ನಿರ್ದೇಶಕ ಪವನ್ ಒಡೆಯರ್.. 2013ರಲ್ಲಿ ರಾಕಿಂಗ್​ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಸಿನಿಮಾ ನಂತ್ರ ನಿರ್ದೇಶಕ ಪವನ್ ಒಡೆಯರ್ ಮತ್ಯಾವ ಲವ್​ ಸ್ಟೋರಿಗಳನ್ನ ಕೈಗೆತ್ತಿಕೊಂಡಿಲಿಲ್ಲ..ಇದೀಗ ಲಾಂಗ್​ ಗ್ಯಾಪ್​ ನಂತ್ರ ಮತ್ತೊಮ್ಮೆ ಪ್ರೇಮಕಥೆ ಹೇಳೋಕ್ಕೆ ರೆಡಿಯಾಗಿದ್ದಾರೆ..

ನಟಸಾರ್ವಭೌಮ ಚಿತ್ರದ ನಂತ್ರ ಪವನ್​ ಒಡೆಯರ್​ ಏನ್​ ಮಾಡ್ತಿದ್ದಾರೆ ಅನ್ಕೊಳ್ತಿದ್ದ ಹಾಗೇ ಪವನ್​ ಅಡ್ಡದಿಂದ ಈ ಸುದ್ದಿ ಹೊರಬಂದಿದೆ.. ಒಂದು ರೊಮ್ಯಾಂಟಿಕ್ ಆ್ಯಕ್ಷನ್​​​ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳೋಕ್ಕೆ ಸಜ್ಜಾಗಿದ್ದಾರೆ..ಈಗಾಗ್ಲೇ ಕಥೆ-ಚಿತ್ರಕಥೆ ಸಂಭಾಷಣೆ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಚಿತ್ರೀಕರಣ ಶುರುಮಾಡಬೇಕಿದೆ..ವಿಶೇಷ ಅಂದ್ರೆ ಈ ಹೊಸ ಪ್ರೇಮಕಥೆಗೆ ಹೊಸ ಜೋಡಿಯೂ ಸಿಕ್ಕಿದೆ..

ಅಂದ್ಹಾಗೇ ಪವನ್​ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಇನ್ನು ಟೈಟಲ್​ ಫಿಕ್ಸ್​ ಆಗದಿದ್ರೂ, ನಾಯಕ-ನಾಯಕಿಯ ಆಯ್ಕೆಯಂತೂ ಆಗಿದೆ… ಈ ಹಿಂದೆ ಪೂರಿ ಜಗನ್ನಾಥ್​ ನಿರ್ದೇಶನದ ರೋಗ್​ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಇಶಾನ್​ ಈ ಚಿತ್ರದಲ್ಲಿ ಲವರ್​ಬಾಯ್​ ಆಗಿ ಮಿಂಚಿದ್ರೆ, ಚುಟುಚುಟು ಬೆಡಗಿ ಆಶಿಕಾ ರಂಗನಾಥ್​ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.. ಈ ಜೋಡಿ ಮೋಡಿ ಮಾಡೋ ಸುಳಿವು ಸಿಕ್ತಿದೆ..

ಇಶಾನ್​ ರೋಗ್​ ಚಿತ್ರದ ನಂತ್ರ ಬಹಳಷ್ಟು ಗ್ಯಾಪ್​ ತಗೊಂಡಿದ್ದು, ಈ ಚಿತ್ರದ ಕಂಪ್ಲೀಟ್ ಡಿಫ್ರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.. ಇಶಾನ್ ಸಂಬಂಧಿ, ದಿ ವಿಲನ್ ಸಿನಿಮಾ ನಿರ್ಮಾಪಕರಾದ ಸಿ. ಆರ್ ಮನೋಹರ್​​​ ಈ ಚಿತ್ರಕ್ಕೂ ಬಂಡವಾಳ ಹಾಕ್ತಿದ್ದಾರೆ.. ವಿಶೇಷ ಅಂದ್ರೆ ಈ ಚಿತ್ರವನ್ನ ಫಾರಿನ್​ ಲೋಕೇಷನ್​ಗಳಲ್ಲೇ ಶೂಟ್​​​ ಮಾಡೋ ಪ್ಲಾನ್​ನಲ್ಲಿದ್ದು, ಲಂಡನ್, ಸಿಂಗಾಪೂರ್​​ನಲ್ಲಿ ಚಿತ್ರೀಕರಣ ನಡೆಯಲಿದೆಯಂತೆ..

ಇನ್ನು ಹೆಸರಿಡದ ಈ ಲವ್​ ಸ್ಟೋರಿಯಲ್ಲಿ ಇಶಾನ್,​ ಆಶಿಕಾರನ್ನ ಹೊರತುಪಡಿಸಿ, ಇನ್ನಷ್ಟೇ ಉಳಿದ ಕಲಾವಿದರ ಆಯ್ಕೆಯಾಗಬೇಕಾಗಿದೆ.. ಚಿತ್ರದಲ್ಲಿ ಮ್ಯೂಸಿಕ್​ಗೆ ಹೆಚ್ಚು ಪ್ರಾಧಾನ್ಯತೆ ಇದ್ದು, ಅರ್ಜುನ್​ ಜನ್ಯಾ ಸಂಗೀತ ಸಂಯೋಜನೆ ಮಾಡ್ತಿದ್ದಾರೆ.. ಸದ್ಯ ಪ್ರಿ ಪ್ರೊಡಕ್ಷನ್​ ವರ್ಕ್​ ನಡೀತಿದ್ದು, ಜುಲೈ ನಲ್ಲಿ ಸಿನಿಮಾ ಸೆಟ್ಟೇರಲಿದೆ..

Comments are closed.