ಮನೋರಂಜನೆ

ಜಾಗ್ವಾರ್, ಸೀತಾರಾಮ ಕಲ್ಯಾಣ ಸಿನಿಮಾಗಳ ನಂತರ ಹೊಸ ಚಿತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್..!!

Pinterest LinkedIn Tumblr


ಜಾಗ್ವಾರ್, ಸೀತಾರಾಮ ಕಲ್ಯಾಣ ಸಿನಿಮಾಗಳಿಂದ ಅಭಿಮಾನಿಗಳನ್ನ ರಂಜಿಸಿದ, ನಿಖಿಲ್​​ ಕುಮಾರಸ್ವಾಮಿ ರಾಜಕೀಯರಂಗಕ್ಕೆ ಜಿಗಿದಿದ್ರು..ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ, ಸೋಲು ಅನುಭವಿಸಿದ್ರು, ಜಗ್ಗದೇ ಜನರ ಸೇವೆ ಮಾಡೋ ಪಣ ತೊಟ್ಟಿದ್ದಾರೆ.. ಹಾಗಾದ್ರೆ, ನಿಖಿಲ್ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಅಂದ್ರೆ ನೋ ಅನ್ನೋ ಉತ್ತರ ಬರುತ್ತೆ.. ಸದ್ದಿಲ್ಲದೇ ಹೊಸ ಚಿತ್ರಕ್ಕೆ ಸಿದ್ಧತೆ ಶುರುವಾಗಿದೆ..

ಕಳೆದ ಎರಡು ತಿಂಗಳಿನಿಂದ ಮಂಡ್ಯ ಲೋಕಸಭಾ ಅಖಾಡ ರಂಗೇರಿದ್ದು, ಅಬ್ಬರದ ಪ್ರಚಾರ.. ಮತದಾನ.. ಫಲಿತಾಂಶ.. ಎಲ್ಲವೂ ಮುಗಿದಿದೆ.. ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್​, ನಟ ನಿಖಿಲ್​ ಕುಮಾರ್ ವಿರುದ್ಧ ಜಯ ಗಳಿಸಿ ಸಂಸತ್ ಪ್ರವೇಶಿಸಿದ್ದಾರೆ.. ಇತ್ತ ನಿಖಿಲ್ ಕುಮಾರಸ್ವಾಮಿ ಕೂಡ ತಾವೇ ಸೋಲಿನ ಹೊಣೆ ಹೊತ್ತು, ಸೋತರೂ ಮಂಡ್ಯ ಬಿಡುವುದಿಲ್ಲ ಅಂದಿದ್ದಾರೆ.. ಮಂಡ್ಯದಲ್ಲಿ ತೋಟ ಮಾಡಿಕೊಂಡು ಇರ್ತೀನಿ ಅಂತ ಹೇಳಿದ್ದಾರೆ..

ನಿಖಿಲ್​​ ಪಕ್ಷ ಸಂಘಟನೆ ಮಾಡೋದೇನೋ ಸರಿ, ಹಾಗಾದ್ರೆ ಸಿನಿಮಾಗಳ ಕಥೆ ಏನು..? ಚಿತ್ರರಂಗಕ್ಕೆ ಅವರು ಬೈ ಹೇಳಿ ಕಂಪ್ಲೀಟ್ ಆಗಿ ರಾಜಕೀಯರಂಗದಲ್ಲೇ ಗುರ್ತಿಸಿಕೊಳ್ತಾರಾ ಅನ್ನೋ ಪ್ರಶ್ನೆ ಮೂಡೋದು ಸಹಜ.. ನಿಖಿಲ್ ಚುನಾವಣೆಗೆ ಸ್ಪರ್ಧಿಸಿದಾಗಲೇ ಸಿನಿಮಾಗಳಿಂದ ದೂರಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.. ಈಗಾಗಲೇ ಜಾಗ್ವಾರ್ ಮತ್ತು ಸೀತಾರಾಮ ಕಲ್ಯಾಣ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿರೋ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯುವಾಗಿ ಬಣ್ಣ ಹಚ್ಚಿದ್ದಾರೆ.. ಕುರುಕ್ಷೇತ್ರ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ..

ಸಿನಿಮಾಗಾಗಿ ಪಾಲಿಟಿಕ್ಸ್​​ನ ಪಾಲಿಟಿಕ್ಸ್​ಗಾಗಿ ಸಿನಿಮಾವನ್ನ ಬಿಡಬಾರದು ಅಂತ ಮನಸ್ಸು ಮಾಡಿರೋ ನಿಖಿಲ್, ಪಕ್ಷ ಸಂಘಟನೆಯ ಜೊತೆಜೊತೆಗೆ ಸಿನಿಮಾಗಳಲ್ಲಿ ನಟಿಸೋ ಮನಸ್ಸು ಮಾಡಿದ್ದಾರೆ.. ಸೀತಾರಾಮ ಕಲ್ಯಾಣ ಸಿನಿಮಾ ಸಮಯದಲ್ಲೇ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್​​ನಲ್ಲಿ ನಿಖಿಲ್ ನಟಿಸೋ ಸುದ್ದಿ ಬಂದಿತ್ತು.. ಸದ್ದಿಲ್ಲದೇ ಆ ಚಿತ್ರದ ಕೆಲಸಗಳು ಶುರುವಾಗಿತ್ತು.. ಅಷ್ಟರಲ್ಲೇ ಲೋಕಸಭೆ ಚುನಾವಣೆ ಕಾವು ಶುರುವಾಗಿತ್ತು.. ಸದ್ಯ ಚುನಾವಣೆ ಮುಗಿದಿದ್ದು, ನಿಖಿಲ್ ಸಿನಿಮಾ ವಿಚಾರ ಮುನ್ನಲೆಗೆ ಬಂದಿದೆ..

ಸೌತ್​ ಸಿನಿದುನಿಯಾದಲ್ಲಿ ಕತ್ತಿ, 2.0, ವಡಾ ಚೆನ್ನೈ ರೀತಿಯ ಬಹುಕೋಟಿ ವೆಚ್ಚದ ಸಿನಿಮಾಗಳನ್ನ ನಿರ್ಮಾಣ ಮಾಡ್ತಿರೋ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್.. ಸದ್ಯ ರಜಿನಿಕಾಂತ್- ದರ್ಬಾರ್, ಸೂರ್ಯ- ಕಾಪ್ಪಾನ್, ಕಮಲ್ ಹಾಸನ್-​​ ಇಂಡಿಯನ್-2 ಸಿನಿಮಾಗಳನ್ನ ಈ ಸಂಸ್ಥೆ ನಿರ್ಮಾಣ ಮಾಡ್ತಿದೆ.. ಇದೇ ಸಂಸ್ಥೆಯ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಮುಂದಿನ ಚಿತ್ರ ಶುರುವಾಗಲಿದೆ.. ಶೀಘ್ರದಲ್ಲೇ ಈ ಬಗ್ಗೆ ಅಫೀಷಿಯಲ್ ನ್ಯೂಸ್​ ಸಿಗಲಿದೆ.. ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಚಿತ್ರ ನಿರ್ಮಾಣವಾಗೋ ಸಾಧ್ಯತೆಯಿದೆ..

ತೆಲುಗಿನ ಲೆಜೆಂಡ್ರಿ ಡೈರೆಕ್ಟರ್,​ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ನಿಖಿಲ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನಲಾಗ್ತಿದೆ.. ಈಗಾಗಲೇ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಶುರುವಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್ ಮಾಡೋ ತಯಾರಿ ನಡೆದಿದೆ.. ಒಟ್ಟಾರೆ ನಿಖಿಲ್ ಮತ್ತೆ ಸಿನಿಮಾಗಳಲ್ಲಿ ನಟಿಸ್ತಿರೋದು ಅವ್ರ ಅಭಿಮಾನಿಗಳಿಗೆ ಸಂತಸ ತಂದಿದೆ..

Comments are closed.