ಮನೋರಂಜನೆ

ದಾರಿ ತೋರಿಸಿದವರನ್ನೇ ಮರೆತ ರಶ್ಮಿಕಾ ಮಂದಣ್ಣ

Pinterest LinkedIn Tumblr


ಕಳೆದ ವರ್ಷ ರಕ್ಷಿತ್​ ಶೆಟ್ಟಿ ಜನ್ಮ ದಿನದಂದು ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡುವ ಮೂಲಕ ಇಬ್ಬರ ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರವನ್ನು ಅಧಿಕೃತ ಮಾಡಿದ್ದರು. ಆದರೆ, ಅವರ ಸಂಬಂಧ ಮುರಿದು ಬಿದ್ದಿತ್ತು. ನಂತರ ಇಬ್ಬರೂ ಬೇರೆ ಬೇರೆ ಆಗಿದ್ದರು. ಆದರೆ, ಅಭಿಮಾನಿಗಳು ಮಾತ್ರ ಈ ವಿಚಾರವನ್ನು ಬಿಟ್ಟಂತೆ ಕಾಣುವುದಿಲ್ಲ. ಈಗ ರಕ್ಷಿತ್​ ಜನ್ಮದಿನಕ್ಕೆ ರಶ್ಮಿಕಾ ಮಂದಣ್ಣ ವಿಶ್​ ಮಾಡದೆ ಇರುವದಕ್ಕೆ ಅನೇಕರು ರಶ್ಮಿಕಾ ಮೇಲೆ ಸಿಟ್ಟಾಗಿದ್ದಾರೆ!

ರಶ್ಮಿಕಾ-ರಕ್ಷಿತ್​ ಸಂಬಂಧ ಮುರಿದು ಬಿದ್ದ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈ ವಿಚಾರದಲ್ಲಿ ಏನನ್ನು ಕೇಳಬೇಡಿ ಎಂದು ಮಾಧ್ಯಮದ ಜೊತೆ ಮಾತನಾಡುವಾಗ ರಶ್ಮಿಕಾ ಸೂಚ್ಯವಾಗಿ ಹೇಳಿದ್ದರು. ಇವರ ಸಂಬಂಧ ಅಂತ್ಯವಾಗಲು ರಶ್ಮಿಕಾ ಕಾರಣ ಎಂದು ರಕ್ಷಿತ್​ ಅಭಿಮಾನಿಗಳು ಕಿಡಿಕಾಡಿದ್ದರು. ಇದಕ್ಕೆ ಬೇಸರಗೊಂಡಿದ್ದ ರಕ್ಷಿತ್​, ‘ರಶ್ಮಿಕಾ ಏನೆಂದು ನನಗೆ ಗೊತ್ತು’ ಎನ್ನುವ ಮೂಲಕ ರಶ್ಮಿಕಾ ಪರ ಬ್ಯಾಟ್​ ಬೀಸಿದ್ದರು.

ಹೀಗಿದ್ದರೂ ರಕ್ಷಿತ್​ ಹುಟ್ಟು ಹಬ್ಬಕ್ಕೆ ರಶ್ಮಿಕಾ ವಿಶ್​ ಮಾಡದೆ ಇರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ. ರಶ್ಮಿಕಾಗೆ ಹಿಟ್​ ಕೊಟ್ಟ ಚಿತ್ರ ಕಿರಿಕ್​ ಪಾರ್ಟಿ. ಈ ಚಿತ್ರಕ್ಕೆ ಅವರನ್ನು ಕರೆತಂದಿದ್ದು ರಕ್ಷಿತ್​. ಈಗ ಅವರ ಕೆರಿಯರ್​ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವ ರಕ್ಷಿತ್​ ಅವರನ್ನೇ ಮರೆತಿದ್ದು ಎಷ್ಟು ಸರಿ ಎಂಬುದು ಅಭಿಮಾನಿಗಳ ಪ್ರಶ್ನೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಮಂದಣ್ಣ ‘ಡಿಯರ್​ ಕಾಮ್ರೇಡ್​’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು ಶೀಘ್ರವೇ ತೆರೆಗೆ ಬರುತ್ತಿದೆ. ‘ಗೀತ ಗೋವಿಂದಂ’ ತೆರೆಕಂಡ ನಂತರ ವಿಜಯ್​ ದೇವರಕೊಂಡ-ರಶ್ಮಿಕಾ ಮಂದಣ್ಣ ಈ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ.ಬಳ್ಳಾರಿ ಪ್ರವೇಶ ಮಾಡಲು ಜನಾರ್ಧನ ರೆಡ್ಡಿಗೆ ಸುಪ್ರೀಂ ಗ್ರೀನ್ ಸಿಗ್ನಲ್
ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬಳ್ಳಾರಿ ಜಿಲ್ಲೆಗೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೋರಿ ಜನಾರ್ದನ ರೆಡ್ಡಿಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ರಜಾ ಕಾಲದ ಪೀಠ, ಜೂನ್‌ 8 ರಿಂದ 2 ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ ನೀಡಿದೆ. ಆದರೆ, ಈ ಭೇಟಿ ವೇಳೆ ತಮ್ಮ ವಿರುದ್ಧ ಸಾಕ್ಷ್ಯಗಳ ನಾಶಪಡಿಸುವ ಪ್ರಯತ್ನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸದಂತೆ ಷರತ್ತು ವಿಧಿಸಲಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜನಾರ್ದನರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್‌ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಆದರೆ, ತಮ್ಮ ಮಾವ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬಳ್ಳಾರಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಾಗಾಗಿ ಬಳ್ಳಾರಿಗೆ ಹೋಗಲು ಅನುಮತಿ ನೀಡಬೇಕೆಂದು ಕೋರಿ ಜನಾರ್ಧನ ರೆಡ್ಡಿ ಮನವಿ ಸಲ್ಲಿಸಿದ್ದರು.

Comments are closed.