ಮನೋರಂಜನೆ

ನಟ ಸುದೀಪ್ ಅಭಿನಯದ ಪೈಲ್ವಾನ್​ ಬಾಕ್ಸಿಂಗ್ ಪೋಸ್ಟರ್​​ ​​​​ಕೂಡ ಕಾಪಿನಾ..?

Pinterest LinkedIn Tumblr


ಬೆಂಗಳೂರು: ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಬಾಕ್ಸಿಂಗ್​ ಪೋಸ್ಟರ್​ಅನ್ನು ಭರ್ಜರಿಯಾಗಿ ಬರ ಮಾಡಿಕೊಂಡರು. ಟ್ವಿಟರ್​ನಲ್ಲಿ ಸುಮಾರು 24 ಗಂಟೆಗಳ ಕಾಲ ಟ್ರೆಂಡಿಂಗ್​ನಲ್ಲಿ ಇರುವಂತೆ ನೋಡಿಕೊಂಡರು.

ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಲೈಕ್​, ಶೇರ್​, ರೀ-ಟ್ವೀಟ್ ಮಾಡಿ ಅಭಿಮಾನಿಗಳು ಸ್ಯಾಂಡಲ್​​ವುಡ್​​ ನಟ-ನಟಿಯರು ಸಂಭ್ರಮಿಸಿದರು. ರೋಷ ತುಂಬಿದ ಕಣ್ಣುಗಳು, ಮುಖದಲ್ಲಿ ಸೋರುತ್ತಿರುವ ರಕ್ತ, ಕೊಬ್ಬಿದ ತೋಳಿನ ಗುದ್ದು, ಎದುರಾಳಿ ಸುಸ್ತು. ಮೈಯಿಂದ ಚಿಮ್ಮಿದ ಬೆವರು, ಟೋಟಲಿ ಬಾಕ್ಸರ್​​​​​​ ಕಿಚ್ಚನ ಖಡಕ್ ಪೋಸ್ಟರ್​​ ಸುದೀಪಿಯನ್ಸ್​​ಗೆ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿದೆ.

ರಾಬರ್ಟ್​, ಅವನೇ ಶ್ರೀಮನ್ನಾರಾಯಣ ಪೋಸ್ಟರ್​ಗಳ ಮಾದರಿಯಲ್ಲೇ ಪೈಲ್ವಾನ್​ ಪೋಸ್ಟರ್ ಕೂಡ ಕಾಪಿ ಅಂತ ಕೆಲವರು ಮಾತನಾಡೋಕ್ಕೆ ಶುರು ಮಾಡಿದ್ದಾರೆ. 1975ರಲ್ಲಿ ಬಂದ ಹಾಲಿವುಡ್​​ನ ಹಾರ್ಡ್​ ಟೈಮ್ಸ್​​​​ ಚಿತ್ರದ ಪೋಸ್ಟರ್ ಅನ್ನ ಕೊಂಚ ಮಟ್ಟಿಗೆ ಪೈಲ್ವಾನ್​ ಪೋಸ್ಟರ್ ಹೋಲುವಂತಿದೆ. ಆ್ಯಕ್ಷನ್​​​​ ದೃಶ್ಯವೊಂದರಲ್ಲಿ ಚಾರ್ಲ್ಸ್​​ ಬ್ರೋನ್​ಸನ್​​ ಎದುರಾಳಿ ಜೊತೆ ಕಾದಾಡುವಾಗ ಕ್ಲಿಕ್​ ಮಾಡಿರೋ ಫೋಟೋ ಇದು. ಆದರೆ, ಇದನ್ನೇ ಕೆಲವರು ಪೈಲ್ವಾನ್ ಪೋಸ್ಟರ್​ ಜೊತೆ ಹೋಲಿಸಿ ನಕಲು ಅಂತಿದ್ದಾರೆ. ಆದರೆ, ಬಹುಶಃ ಇದು ಕಾಕತಾಳೀಯವೂ ಆಗಿರಬಹುದು.

ಇಂಟರ್​ನೆಟ್​ ಜಮಾನದಲ್ಲಿ ನಮ್ಮ ಪ್ರೇಕ್ಷಕರು ದೇಶ-ವಿದೇಶದ ಸಿನಿಮಾಗಳನ್ನ ನೋಡುತ್ತಿದ್ದಾರೆ. ಹಾಗಾಗಿ ಎಲ್ಲೋ ನೋಡಿದ ಪೋಸ್ಟರ್​​​ ಅಥವಾ ದೃಶ್ಯವನ್ನು ನಮ್ಮ ಸಿನಿಮಾಗಳಲ್ಲಿ ಕಂಡ ಮಾತ್ರಕ್ಕೆ ಅದನ್ನ ಕಾಪಿ ಅನ್ನೋದು ತಪ್ಪಾಗತ್ತೆ. ಬಾಹುಬಲಿ, ಕಬಾಲಿ, ಸಾಹೋ ಸಿನಿಮಾ ಪೋಸ್ಟರ್ಸ್​​​​​​​ ಬಂದಾಗಲೂ ಇದೇ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದ್ದವು.

ಅಷ್ಟೇ ಅಲ್ಲದೇ ಇದು ಇನ್​ಸ್ಪಿರೇಷನ್​ ಅನ್ನೋ ಚರ್ಚೆ ಕೂಡ ಶುರುವಾಗಿತ್ತು. ಎಷ್ಟೋ ಸಲ ಅದು ಕಾಕತಾಳೀಯವೂ ಆಗಿರುತ್ತೆ ಅಥವಾ ಇಬ್ಬರು ನಿರ್ದೇಶಕರ ಆಲೋಚನೆ ಒಂದೇ ಆಗಿರಬಹುದು. ಸೋ ಇಂತಹ ಹೋಲಿಕೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಒಳ್ಳೆ ಸಿನಿಮಾಗಳನ್ನ ನೋಡಿ ಪ್ರೇಕ್ಷಕರು ಪ್ರೋತ್ಸಾಹಿಸಬೇಕು.

Comments are closed.