ಮನೋರಂಜನೆ

ರಣಂ ಚಿತ್ರ ದುರಂತಕ್ಕೆ ಹೊಸ ತಿರುವು​​! ಇಬ್ಬರು ಸಾವಿಗೆ ಕಾರಣವಾದ ಪೊಲೀಸಪ್ಪನ ಧನದಾಹ!

Pinterest LinkedIn Tumblr


ರಣಂ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣ ಇದೀಗಾ ಟ್ವಿಸ್ಟ್​​​​​ ಪಡೆದುಕೊಂಡಿದೆ. ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.

ಬೆಂಗಳೂರಿನ ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ಮಾರ್ಚ್​​ 29 ರಂದು ‘ರಣಂ’ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಸುಬೇನಾ ಹಾಗೂ ಮಕ್ಕಳು ತೆರಳಿದ್ದುರು. ಇದೇ ವೇಳೆ ಸಾಹಸ ದೃಶ್ಯದ ಶೂಟಿಂಗ್​ಗಾಗಿ ಇಟ್ಟಿದ್ದ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಸುಬೇನಾ ಹಾಗೂ ಮಗಳು ಅಯೇರಾ ಸಾವನ್ನಪ್ಪಿದ್ದರು.

ಶೂಟಿಂಗ್​​​ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಕಾನ್ಸ್​ಟೇಬಲ್​​​​​​ ​​​​​​​​ಭೀಮಾಶಂಕರ್​​​ ಶೂಟಿಂಗ್ ಮಾಡಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಶೂಟಿಂಗ್ ನಡೆಸುವ ಮುನ್ನ ಚಿತ್ರ ನಿರ್ದೇಶಕ ಅನುಮತಿ ಕೋರಿ ಯಲಹಂಕ ಎಸಿಪಿ ಕಚೇರಿಗೆ ತೆರಳಿದ್ರು. ಆದರೆ, ಯಲಹಂಕ ಎಸಿಪಿ ಎಂಎಸ್ ಶ್ರೀನಿವಾಸ್ ಸೂಕ್ತ ದಾಖಲೆ ನೀಡುವವರೆಗೂ ಅನುಮತಿ ಇಲ್ಲ ಎಂದಿದ್ದರು. ಇದೇ ಸಮಯ ದುರುಪಯೋಗ ಪಡಿಸಿಕೊಂಡಿದ್ದ ಕಾನ್​ಸ್ಟೇಬಲ್​ ಭೀಮಾ ಶಂಕರ್ ಕರ್ತವ್ಯ ಲೋಪ ಎಸಗಿ ಚಿತ್ರೀಕರಣ ನಡೆಸಲು ಕುಮ್ಮಕ್ಕು ನೀಡಿದ್ದರು ಎನ್ನಲಾಗಿದೆ.
ಇದೀಗಾ ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ ಎಂದು ಹೆಚ್ಚುವರಿ ಅಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

Comments are closed.