ಮಂಡ್ಯ : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ನೀಡುತ್ತಿದ್ದಂತೆ ಜೆಡಿಎಸ್ ನ ಮತ್ತೋರ್ವ ನಾಯಕ ಹುದ್ದೆ ತೊರೆದಿದ್ದಾರೆ.
ಕೆ.ಆರ್.ನಗರದ ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ರಾಜೀನಾಮೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ.
ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸಬೇಕಿದೆ. ಯುವಕರಿಗೆ ಆದ್ಯತೆ ನೀಡಲು ರಾಜೀನಾಮೆ ನೀಡಿದ್ದೇನೆ. ತಮ್ಮ ರಾಜೀನಾಮೆ ಹಿಂದೆ ಪುರಸಭಾ ಚುನಾವಣೆಯ ಸೋಲಿನ ಹೊರತಾದ ಮತ್ತಾವುದೇ ಕಾರಣವಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಹದಿನೇಳು ವರ್ಷಗಳ ಕಾಲ ತಾಲೂಕು ಜೆಡಿಎಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರವಾಸೋದ್ಯಮ ಸಾ.ರಾ. ಮಹೇಶ್, ಪಕ್ಷದ ತಾಲೂಕು ಮುಖಂಡರು, ಕಾರ್ಯಕರ್ತರು ಮತ್ತು ತಮ್ಮ ಹಿತೈಷಿಗಳಿಗೆ ಕೃತಜ್ಞತೆ ಎಂದು ಚಂದ್ರಶೇಖರ್ ಹೇಳಿದರು.
ಮೋದಿ ಪ್ರಮಾಣ ವಚನಕ್ಕೆಂದು ಯಡಿಯೂರಪ್ಪನವರು ದಿಲ್ಲಿಗೆ ಬಂದಿಳಿದಾಗ ಖುಷಿಯಲ್ಲಿದ್ದರು. ಸಂಸದರು ಹಾಗೂ ಬೆಂಬಲಿಗರಿಂದ ತಮ್ಮ ಕೋಣೆ ತುಂಬಿ ತುಳುಕುತ್ತಿದ್ದರೂ ತಾವೇ ಹಾಸ್ಯ ಮಾಡುತ್ತಿದ್ದ ಬಿಎಸ್‌ವೈ, ಪತ್ರಕರ್ತರಿಗೆ ಬಲವಂತವಾಗಿ ಮಾಡಿ ಊಟ ಮಾಡಿಸಿ ಟೇಬಲ್ ಮೇಲೆ ಸಾಕಷ್ಟು ನಕ್ಕರು.
ಅವರು ಬಾಯ್ಬಿಟ್ಟು ಹೇಳದಿದ್ದರೂ, ಅವರ ಆಪ್ತರು ಒಂದು ಲಿಂಗಾಯತ ಕೋಟಾದಿಂದ ಉದಾಸಿ, ಬಸವರಾಜ್ ಅಥವಾ ಕರಡಿ ಸಂಗಣ್ಣ, ಇನ್ನೊಂದು ಒಕ್ಕಲಿಗ ಕೋಟಾದಿಂದ ಶೋಭಾ ಕರಂದ್ಲಾಜೆ ಮಂತ್ರಿ ಆಗಬಹುದು. ಒಬ್ಬ ದಲಿತ, ಜೊತೆಗೆ ಬ್ರಾಹ್ಮಣ-ಆರ್‌ಎಸ್‌ಎಸ್ ಕೋಟಾದಲ್ಲಿ ಜೋಶಿ ಮಂತ್ರಿಯಾಗುವುದು ಪಕ್ಕಾ ಎನ್ನುತ್ತಿದ್ದರು. ಆದರೆ ದಿಲ್ಲಿಯಲ್ಲಿ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಏನಿದ್ದರೂ ಲಿಂಬಾವಳಿ ಮೂಲಕವೇ ಅವರು ದಿಲ್ಲಿ ನಾಯಕರಿಗೆ ಹೆಸರು ಕೊಟ್ಟಿದ್ದು ಅಷ್ಟೆ.
ಬಿಎಸ್‌ವೈ ಎಷ್ಟರವರೆಗೆ ಹಾಸ್ಯದ ಮೂಡ್‌ನಲ್ಲಿ ಇದ್ದರೆಂದರೆ, ಪತ್ರಕರ್ತರು ಶೋಭಾ ಮುಂದಿನ ಮಂತ್ರಿ ಎಂದು ಚಟಾಕಿ ಹಾರಿಸಿದಾಗ ತಾವೂ ಕೂಡ ‘ಬೆಳಗ್ಗೆ ಫೋನ್ ಬಂದರೆ ನಮಗೂ ಹೇಳಿ ಮೇಡಂ’ ಎಂದು ಶೋಭಾಗೆ ಹೇಳಿದರು.
ಶೋಭಾ ‘ಏನ್ ಸರ್ ನಾನೆಲ್ಲಿ ಮಂತ್ರಿ ಆಗುತ್ತೇನೆ. ಡಿವಿಎಸ್ ಇದ್ದಾರೆ ನಮಗಿಂತ ದೊಡ್ಡವರು’ ಎಂದು ಹೇಳಿ ನಗುತ್ತಾ ಹೋದರು. ಆದರೆ ಮರುದಿನ ಜಗದೀಶ್ ಶೆಟ್ಟರ್ ಬೀಗ ಸುರೇಶ್ ಅಂಗಡಿ, ಆರ್‌ಎಸ್‌ಎಸ್ ಹೆಸರು ಹೇಳಿದ ಪ್ರಹ್ಲಾದ್ ಜೋಶಿ ಮತ್ತು ತಮ್ಮ ಸ್ಪರ್ಧಿ ಡಿವಿಎಸ್ ಹೆಸರು ಬಂದ ನಂತರ ಯಡಿಯೂರಪ್ಪ ಅವರ ಮುಖದಲ್ಲಿ ಮೊದಲಿನ ಲವಲವಿಕೆ ಇರಲಿಲ್ಲ. ಆದರೂ ಬೇಸರ ನುಂಗಿಕೊಂಡು ಟೀವಿ ಚಾನಲ್ಲುಗಳಿಗೆ ಬೈಟ್ ಕೊಟ್ಟು ರಾಷ್ಟ್ರಪತಿ ಭವನದ ಕಡೆ ತೆರಳಿದರು. ಯಡಿಯೂರಪ್ಪ ಬಿಡಿ, ಅಮಿತ್ ಶಾ ಕರ್ನಾಟಕದ ವಿಚಾರದಲ್ಲಿ ಸಂತೋಷ್ ಜೊತೆಗೂ ಚರ್ಚೆ ಮಾಡಿಲ್ಲ. ಎಲ್ಲವೂ ಮೋದಿ, ಶಾ ಇಬ್ಬರ ನಿರ್ಧಾರ ಅಷ್ಟೆ.