ಮನೋರಂಜನೆ

ಗಣಿತ ಶಾಸ್ತ್ರಜ್ಞನಾಗಿ ಹೃತಿಕ್ ರೋಶನ್​! ಕುತೂಹಲ ಮೂಡಿಸಿದ ಹೊಸ ಚಿತ್ರ!!

Pinterest LinkedIn Tumblr


ಬಾಲಿವುಡ್​ ನಟ ಹೃತಿಕ್ ರೋಷನ್ ಆ್ಯಕ್ಟ್​ ಮಾಡಿರೋ ಸೂಪರ್​ – 30 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬಾಲಿವುಡ್​​ನ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು ಖ್ಯಾತ​ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಜೀವನಾಧಾರಿತ ಕಥೆ ಹೊಂದಿದೆ.

ಬಿಹಾರ ಮೂಲದ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಸ್ಥಾಪಿಸಿದ ಸೂಪರ್ 30 ಎಂಬ ಐಐಟಿ ಶಿಕ್ಷಣ ಕೇಂದ್ರದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ವಿಕಾಸ್ ಬೆಹೆಲ್ ನಿರ್ದೇಶಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಹೃತಿಕ್ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿ ವರ್ಷ 30 ಮಂದಿ ಉತ್ತಮ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಐಟಿ-ಜೆಇಇ ಕೋಚಿಂಗ್ ನೀಡುತ್ತಾರೆ. ಈ ಪ್ರಯಾಣದಲ್ಲಿ ಅವರಿಗೆ ಎದುರಾಗುವ ಘಟನೆಗಳ ಆಧಾರವಾಗಿ ಸಿನಿಮಾವನ್ನು ತೆರೆಗೆ ತರಲಾಗಿದೆ. ಟ್ರೇಲರ್ ನೋಡುತ್ತಿದ್ದರೆ ಸಿನಿಮಾ ಬಗ್ಗೆ ಕುತೂಹಲ ಕೆರಳಿಸುತ್ತದೆ.

ವಿಕಾಸ್ ಕೌಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೂಪರ್​ 30 ಸಿನಿಮದಲ್ಲಿ ಬಾಲಿವುಡ್ ಗ್ರೀಕ್ ಗಾಡ್ ನಟ ಹೃತಿಕ್ ರೋಷನ್ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಲ್ದೇ ಸಿನಿಮಾದಲ್ಲಿ ಪಂಕಜ್​ ತ್ರಿಪಾಟಿ, ಮೃನಲ್ ಠಾಕೂರ್​ ಆ್ಯಕ್ಟ್ ಮಾಡಿದ್ದಾರೆ. ಜುಲೈ 12ರಂದು ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

Comments are closed.