ಮನೋರಂಜನೆ

ತಂದೆಗಾಗಿ ಪತ್ರವೊಂದನ್ನು ಬರೆದ ನಟಿ ಶ್ರುತಿ ಪುತ್ರಿ!

Pinterest LinkedIn Tumblr


ಸ್ಯಾಂಡಲ್ ವುಡ್ ನ ಖ್ಯಾತ ನಟಿ ಶೃತಿ ಸಿಂಗಲ್ ಪೇರೆಂಟ್​​. ದಾಂಪತ್ಯ ಬದುಕಿನಲ್ಲಿ ಸಾಮರಸ್ಯ ಕಳೆದುಕೊಂಡ ಶೃತಿ ನಿರ್ದೇಶಕ ಎಸ್.ಮಹೇಂದ್ರರಿಂದ ವಿಚ್ಛೇಧನ ಪಡೆದಿದ್ದಾರೆ. ಆದರೆ ತಂದೆ-ತಾಯಿ ಬೇರೆಯಾಗಿ ಬದುಕುತ್ತಿದ್ದರೂ ಶ್ರುತಿ ಪುತ್ರಿ ಗೌರಿ ತಂದೆಯೊಂದಿಗಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ತಂದೆಯನ್ನು ಅತಿಯಾಗಿ ಪ್ರೀತಿಸುವ ಗೌರಿ ತಂದೆಯ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ್ದು, ಇದೀಗ ಫುಲ್ ವೈರಲ್​ ಆಗಿದೆ.

ಕನ್ನಡ ಚಲನಚಿತ್ರ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಶೃತಿ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. 1998ರಲ್ಲಿ ನಿರ್ದೇಶಕ ಎಸ್.ಮಹೇಂದರ್ ಜೊತೆ ಹಸೆಮಣೆ ಏರಿದ್ದರು. ಅಲ್ಲದೇ ಇಬ್ಬರು ಗಟ್ಟಿಮೇಳ ಎಂಬ ಚಿತ್ರದಲ್ಲಿ ಒಂದಾಗಿ ಆಭಿನಯಿಸಿದ್ದರು. ಆದರೆ ವೈಯಕ್ತಿಕ ಬದುಕಿನಲ್ಲಿ ಸಾಮರಸ್ಯ ಮೂಡದ ಹಿನ್ನೆಲೆಯಲ್ಲಿ 2009ರಲ್ಲಿ ಪತಿಯಿಂದ ವಿಚ್ಚೇದನ ಪಡೆದು ದೂರ ಆಗಿದ್ದರು. ಹಾಗೂ ಸುಮಾರು 11ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡ ಶೃತಿ ತಮ್ಮ ಮಗಳು ಗೌರಿ ಜೊತೆ ಏಕಾಂಗಿ ಜೀವನ ನಡೆಸುತ್ತಿದ್ದಾರೆ.

ಸದ್ಯ ಶೃತಿ ಪುತ್ರಿಗೆ ಅಪ್ಪನನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದು, ತಂದೆಯೊಂದಿಗೆ ಇರುವ ಪೋಟೋವೊಂದನ್ನು ತಮ್ಮ ಇನ್ಸ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಪ್ಪನ ಹುಟ್ಟುಹಬ್ಬಕ್ಕೆ ವಿಶ್​ ಮಾಡಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀನು ಯಾವಾಗಲು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕ. ನನ್ನ ನಿಮ್ಮ ನಡುವೆ ಇರುವ ಪ್ರೀತಿ ಮತ್ತು ಬಾಂಧವ್ಯವನ್ನು ಯಾರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮತ್ತೆ ನಿನ್ನ ಜೊತೆ ಹೆಚ್ಚು ಕಾಲ ಕಳೆಯುವಂತಹ ಅವಕಾಶವನ್ನು ಈ ಬದುಕು ಒದಗಿಸಿಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಪದಗಳಲ್ಲಿ ಹೇಳದಷ್ಟು ನಿನ್ನನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅತೀ ಶೀಘ್ರದಲ್ಲೆ ನಿಮ್ಮೊಂದಿಗೆ ಕಾಲ ಕಳೆಯಲು ಕಾಯುತ್ತೀದ್ದೀನಿ ಅಂತ ಗೌರಿ ಬರೆದುಕೊಂಡಿದ್ದಾರೆ.

ಸಧ್ಯ ಎಸ್.ಮಹೇಂದ್ರ ಯಶೋಧಾ ಎಂಬಾಕೆಯನ್ನು ಮರುಮದುವೆಯಾಗಿದ್ದು, ಮೈಸೂರಿನಲ್ಲಿ ಆಕೆಯೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಶ್ರುತಿ ಪುತ್ರಿ ಗೌರಿ ಮಾತ್ರ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Comments are closed.