ರಾಷ್ಟ್ರೀಯ

ನೀರು ಕೇಳಲು ಬಂದ ಮಹಿಳೆಗೆ ಕಾಲಿನಿಂದ ಒದ್ದ ಬಿಜೆಪಿ ಶಾಸಕ!

Pinterest LinkedIn Tumblr


ನೀರು ಕೇಳಲು ಬಂದ ಮಹಿಳೆ ಮೇಲೆ ಬಿಜೆಪಿ ಶಾಸಕನೊರ್ವ ಅಟ್ಟಹಾಸ ಮೆರೆದು ಹಲ್ಲೆ ಮಾಡಿದ ಘಟನೆ ನಡೆದಿದೆ. ಬಿಜೆಪಿ ಶಾಸಕನ ಈ ವರ್ತನೆ ವಿಡಿಯೋ ಸಖತ್ ವೈರಲ್​ ಆಗಿದ್ದು, ಜನರ ಬಿಜೆಪಿ ಶಾಸಕನ ದರ್ಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜರಾತ್​ನ ಬಿಜೆಪಿ ಶಾಸಕ ಬಲರಾಮ್ ತಾವನಿ ಈ ರೀತಿ ದರ್ಪ ಮೆರೆದು ಸುದ್ದಿಯಾಗಿದ್ದಾರೆ. ಅಹಮದಬಾದ್ ನರೋಡದಲ್ಲಿ ಮಹಿಳೆಯೊಬ್ಬಳು ತಮ್ಮ ಪ್ರದೇಶದಲ್ಲಿನ ನೀರಿನ ಸಮಸ್ಯೆ ವಿಚಾರವಾಗಿ ಮಾತನಾಡಲು ಶಾಸಕ ಬಲರಾಮ್ ಬಳಿ ಹೋಗಿದ್ದರು. ಈ ವೇಳೆ ಸಿಟ್ಟಿಗೆದ್ದ ಬಲರಾಮ್, ಆಕೆಗೆ ನಡುರಸ್ತೆಯಲ್ಲೇ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ.

ನರೋಡದಲ್ಲಿ ನಡೆಯುತ್ತಿದ್ದ ನೀರಿನ ಪ್ರತಿಭಟನೆ ವೇಳೆ ಎನ್ಸಿಪಿ ನಾಯಕಿ ನೀತು ತೇಜಸ್ವಿನಿ ತಮ್ಮ ಪ್ರದೇಶದ ಸಮಸ್ಯೆ ಕುರಿತಾಗಿ ಬಿಜೆಪಿ ಪ್ರತಿನಿಧಿ ಬಲರಾಮ್ ತಾವನಿ ಬಳಿ ಮಾತನಾಡಲು ಹೋದಾಗ ಆತ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟಲ್ಲದೆ ಆಕೆ ಅಂಗಲಾಚಿ ಬೇಡಿಕೊಂಡರು ಕೂಡ ಬಿಡದಂತೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಬಂದು ಆತನನ್ನು ಎಳೆದು ನಿಲ್ಲಿಸಿ ತೇಜಸ್ವಿನಿಯನ್ನು ರಕ್ಷಿಸಿದ್ದಾರೆ.

ಈ ಘಟನೆ ಕುರಿತಾಗಿ ಮಾತನಾಡಿದ ಎನ್ಸಿಪಿ ನಾಯಕಿ ನೀತು ತೇಜಸ್ವಿನಿ ತಮ್ಮ ಪ್ರದೇಶದಲ್ಲಿನ ನೀರಿನ ಸಮಸ್ಯೆ ಬಗ್ಗೆ ಮಾತನಾಡಲು ನಾನು ಬಾಲರಾಮ್ ಅವರನ್ನು ಭೇಟಿಯಾಗಲು ಹೋಗಿದ್ದೆ. ಮಾತನಾಡುವುದಕ್ಕೂ ಮುನ್ನವೇ ಅವರು ನನ್ನ ಕೆನ್ನೆಗೆ ಹೊಡೆದು, ತಳ್ಳಿದರು. ಇದನ್ನು ಕಂಡ ತಕ್ಷಣ ನನ್ನ ಗಂಡ ನನ್ನ ರಕ್ಷಣೆಗೆ ಮುಂದಾದರು. ತಕ್ಷಣಕ್ಕೆ ಬಾಲರಾಮ್ ಬೆಂಬಲಿಗರು ಬಂದು ನನ್ನ ಗಂಡನಿಗೆ ಕೋಲಿನಿಂದ ಹೊಡೆಯಲು ಶುರುಮಾಡಿದರು. ನನ್ನ ಜೊತೆ ಪ್ರತಿಭಟನೆ ಮಾಡುತ್ತಿದ್ದ ಮಹಿಳೆ ಮೇಲೆ ಕೂಡ ಬಾಲರಾಮ್ ಬೆಂಬಲಿಗರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ . ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಾಲರಾಮ್ ಕಳೆದ 22 ವರ್ಷಗಳಿಂದ ರಾಜಕೀಯ ಜೀವನದಲ್ಲಿ ನಾನಿದ್ದೇನೆ. ಒಮ್ಮೆಯೂ ಈ ರೀತಿ ತಪ್ಪನ್ನು ನಾನು ಮಾಡಿಲ್ಲ, ಕಚೇರಿಯಲ್ಲಿ ಮೊದಲು ನನ್ನ ಮೇಲೆ ಹಲ್ಲೆ ನಡೆಸಲಾಯಿತು. ನನ್ನ ರಕ್ಷಣೆಗೆ ಮುಂದಾಗಿ ನಾನು ಸಹ ಹಲ್ಲೆ ನಡೆಸಿದ್ದೇನೆ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ.ಪರಿಸ್ಥಿತಿ ಒತ್ತಡದಿಂದಾಗಿ ಈ ರೀತಿಯ ಘಟನೆ ನಡೆದಿದೆ. ನನಗೆ ನನ್ನ ತಪ್ಪಿನ ಅರಿವಾಗಿದೆ ಈ ಕುರಿತು ಮಹಿಳೆಯ ಕ್ಷಮೆಯಾಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು. ಅಲ್ಲದೆ ಘಟನೆ ಕುರಿತು ಮಹಿಳೆಯನ್ನು ಕ್ಷಮೆಯಾಚಿಸುವಂತೆ ಕಾಂಗ್ರೆಸ್ ನಾಯಕರು ಕೂಡ ಒತ್ತಾಯಿಸಿದ್ದಾರೆ. ಎಂದರು

Comments are closed.