ಇದು ಐದು ವರ್ಷದ ಹಿಂದೆ ನಡೆದ ಕಥೆ. ಇಂದು ಸ್ಯಾಂಡಲ್ವುಡ್ ನ ಜೋಡೆತ್ತುಗಳು ಎಂದು ಅಭಿಮಾನದಿಂದ ಕರೆಸಿಕೊಳ್ಳುತ್ತಿರುವ, ಶಾನ್ಧಾರ್ ನಟರಿಬ್ಬರು ಪ್ರಶಾಂತ್ ನೀಲ್ ಒಳಗಿರುವ ಪ್ರತಿಭೆಯನ್ನು ನಾಡಿನ ಜನತೆಯ ಮುಂದೆ ಹೆಮ್ಮಯಿಂದ ಹೇಳಿದ ಕಥೆ ಇದು.
ರೋರಿಂಗ್ ಸ್ಟಾರ್ ಶ್ರೀಮುರಳಿ ಗೆಲುವಿಗಾಗಿ ಪಣತೊಟ್ಟು ‘ಉಗ್ರಂ’ ಅವತಾರ ತಾಳಿ , ಸೋಲನ್ನು ಸದೆ ಬಡೆದು , ಗೆಲುವಿನ ಮಾಲೆಯನ್ನು ಕೊರಳಿಗೆ ಹಾಕಿಕೊಂಡ ಕಾಲ. ಈ ಗೆಲುವಿನ ಸಂಭ್ರಮವನ್ನು ಚಿತ್ರರಂಗದ ಬಂಧು ಬಾಂಧವರರೊಟ್ಟಿಗೆ ಕಳೆಯಲು ನಿರ್ಧರಿಸಿದರು. ಸ್ಯಾಂಡಲ್ವುಡ್ ಸ್ಕ್ರೀನ್ ಮೇಲೆ ಮಿನುಗೋ ತಾರೆಯರಿಂದ ಹಿಡಿದು ,ತೆರೆಯ ಹಿಂದೆ ದುಡಿಯುವ ಸ್ಟಾರ್ ಮೇಕರ್ ತನಕ ‘ಉಗ್ರಂ’ ಸೆಲಬ್ರಿಟಿ ಶೋಗೆ ಬಂದಿದರು. ಅದರಲ್ಲಿ ನಾಡು ಮೆಚ್ಚುವ ನಟರಿಬ್ಬರು ಕೂಡ ಬಂದಿದ್ದರು. ಅವರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್.
ಅವತ್ತು ‘ಉಗ್ರಂ’ ಸೆಲಬ್ರಿಟಿ ಶೋ ನಡೆದಾಗ ಆಲ್ ಮೊಸ್ಟ್ ಆಲ್ ಎಲ್ಲಾ ನಟ ನಟಿಯರು ‘ಉಗ್ರಂ’ ಸಿನಿಮಾ ನೋಡಿ ಸೂಪರ್ ವಂಡರ್ ಫುಲ್ ಅಂತೆಲ್ಲ ಕಾಮೆಂಟ್ಸ್ಗಳನ್ನು ಹೊಡೆದರು.. ಆದರೆ ಉಗ್ರಂ ಸಿನಿಮಾ ರಿಲೀಸ್ ಮಾಡೋಷ್ಟರಲ್ಲಿ ಪ್ರಶಾಂತ್ ನೀಲ್ ಆಂಡ್ ಟೀಮ್ ಪಟ್ಟ ಕಷ್ಟ ಇದಿಯಲ್ಲ ಅದು ಅಷ್ಟಿಷ್ಟಲ್ಲ. ಇನ್ನೇನು ಸಿನಿಮಾ ರಿಲೀಸ್ ಆಗಬೇಕು ಅನ್ನೋಷ್ಟರಲ್ಲಿ ಪ್ರಶಾಂತ್ ನೀಲ್ಗೆ ಆ್ಯಕ್ಸಿಡೆಂಟ್ ಆಗಿ ಆಡ್ಮಿಟ್ ಆಗೋ ಹಾಗೆ ಆಯ್ತು. ಈ ವಿಚಾರವನ್ನು ಡಿ ಬಾಸ್ ದರ್ಶನ್ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವಾಗ ಹೇಳಿಕೊಂಡಿದ್ದಾರೆ.
ಕಷ್ಟ ಪಟ್ಟು , ಇಷ್ಟ ಪಟ್ಟು ಮಾಡಿದಕ್ಕೆ ಉಗ್ರಂ ಸಿನಿಮಾ ಸೂಪರ್ ಸಕ್ಸಸ್ ಆಯ್ತು. ತನ್ನ ಭಾವ ಶ್ರೀಮುರಳಿಗಾಗಿ ಪ್ರಶಾಂತ್ ನೀಲ್ ಕೊಟ್ಟ ಉಡುಗೊರೆ ಉಗ್ರಂ. ಅಂದಿನಿಂದ ಇಂದಿನ ತನಕ ಉಗ್ರಂ ವೀರ , ರೋರಿಂಗ್ ಸ್ಟಾರ್ ಶ್ರೀಮುರಳಿ ಹಿಂದಿರುಗಿ ನೋಡಲೇ ಇಲ್ಲ, ಉಗ್ರಂ ನೋಡಿದ ಅನೇಕ ತಾರೆಯರು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲರಂತೆ ಶ್ರೀಮುರಳಿ ಕರೆಗೆ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಉಗ್ರಂ ಸೆಲಬ್ರಿಟಿ ಶೋಗೆ ಬಂದಿದರು.. ಆಗತಾನೆ ಗಜಕೇಸರಿ ಶೂಟಿಂಗ್ ಮುಗಿಸಿಕೊಂಡಿದ್ದರು.. ಉಗ್ರಂ ಚಿತ್ರದ ನರೆಷನ್, ಆ್ಯಕ್ಷನ್, ಡೈರೆಕ್ಷನ್ ಎಲ್ಲವನ್ನೂ ಮೆಚ್ಚಿಕೊಂಡು ಫುಲ್ ಮಾರ್ಕ್ಸ್ ಕೊಟ್ಟರು. ಜೊತೆಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಮನಸು ಕೊಟ್ಟರು.
ಹೀಗೆ ಹಾಯ್ ಬಾಯ್ ಫ್ರೆಂಡ್ಸ್ ಆದ ಪ್ರಶಾಂತ್ ಮತ್ತು ಯಶ್ ಮುಂದೊಂದಿನ ಸಿನಿಮಾ ಮಾಡ್ತಾರೆ ಎಂದು ಅವತ್ತು ಯಾರು ಎಣಿಸಿರಲಿಲ್ಲ, 2015ರ ಕೊನೆಯಲ್ಲಿ ಯಶ್ _ ಪ್ರಶಾಂತ್ ಜೋಡಿ ಕೆಜಿಎಫ್ ಚಿತ್ರಕ್ಕೆ ಓಂಕಾರ ಹಾಕೆ ಬಿಡ್ತು, ಯಶ್ ದೂರದೃಷ್ಟಿ , ಪ್ರಶಾಂತ್ ದಿಗ್ದರ್ಶನ ಎರಡು ಮಿಕ್ಸ್ ಆಗಿ, ಜಗ ಮೆಚ್ಚುವ , ಚಿತ್ರ ಪ್ರೇಮಿಗಳು ಕೊಂಡಾಡುವ ಕೆಜಿಎಫ್ ಅನ್ನು ತೆರೆಗೆ ತಂದೆ ಬಿಟ್ಟರು.
ಒಂದು ಆಕಸ್ಮಿಕ ಪರಿಚಯ ಎಲ್ಲಿಗೆ ತಂದು ನಿಲ್ಲಿಸಿ ಬಿಡುತ್ತೆ ನೋಡಿ, ತನ್ನ ಜೊತೆಗೆ ಚಿತ್ರರಂಗವನ್ನು ಬೆಳೆಸಬೇಕು ಅನ್ನೋ ಯಶ್ ಭಾವನೆ , ಏನೇ ಮಾಡಿದರು ಔಟ್ ಆಫ್ ದಿ ಬಾಕ್ಸ್ ಮಾಡಬೇಕು ಅನ್ನೋ ಪ್ರಶಾಂತ್ ನೀಲ್ ಚಿಂತನೆ ಇಂದು ಕೆಜಿಎಫ್-ಚಾಪ್ಟರ್-2 ತನಕ ಬಂದು ನಿಲ್ಲಿಸಿದೆ. ಅದಷ್ಟು ಬೇಗ ಕೆಜಿಎಫ್ ಚಾಪ್ಟರ್-2 ಬರ್ಲಿ, ಸ್ಟಾರ್ ನಟರ ಜೊತೆಗೆ ಮತ್ತೊಂದಿಷ್ಟು ಸಿನಿಮಾಗಳನ್ನು ಪ್ರಶಾಂತ್ ನೀಲ್ ಮಾಡಲಿ ಅನ್ನೋದು ಹೃದಯವಂತ ಕನ್ನಡಿಗರ ಆಶಯ.