ಕ್ರೀಡೆ

ಕಾಯಿಲೆ ಪೀಡಿತ ಬಾಲಕನ ಆಸೆ ಪೂರೈಸಿದ ಟೀಂ ಇಂಗ್ಲೆಂಡ್

Pinterest LinkedIn Tumblr


ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಕೆಲವೊಮ್ಮೆ ಪಂದ್ಯದ ಹೊರತಾಗಿ, ಅಭಿಮಾನಿಗಳ, ತಂಡದ ಮಾನವೀಯ ಮುಖಗಳು ಅನಾವರಣಗೊಳ್ಳುತ್ತವೆ.

ಸೋಮವಾರ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಣ ಪಂದ್ಯದಲ್ಲಿ ನಾರ್ತ್‌ಹ್ಯಾಂಪ್ಟನ್‌ನ ಟ್ರೆಂಟ್ ಬ್ರಿಜ್‌ ಕ್ರೀಡಾಂಗಣ ಅಂತಹ ಒಂದು ಮಾನವೀಯ ಕ್ಷಣಕ್ಕೆ ಸಾಕ್ಷಿಯಾಯಿತು.

ಪಂದ್ಯ ಆರಂಭಕ್ಕೂ ಮೊದಲು ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆಗೆ ತುತ್ತಾಗಿರುವ 14 ವರ್ಷದ ಬಾಲಕ ಸ್ಯಾಮುಯೆಲ್ ಹಲ್ ಎಂಬಾತ ಇಂಗ್ಲೆಂಡ್ ತಂಡಕ್ಕೆ ಮುನ್ನಡೆ ಒದಗಿಸುವ ಮ್ಯಾಸ್ಕಾಟ್ ಆಗಿರಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದ.

ಅದರಂತೆ ವ್ಹೀಲ್‌ಚೇರ್‌ನಲ್ಲಿ ಕ್ರೀಡಾಂಗಣಕ್ಕೆ ಬಂದ ಆತನಿಗೆ ಇಂಗ್ಲೆಂಡ್ ತಂಡ ಜೆರ್ಸಿ ತೊಡಿಸಲಾಯಿತು. ನಂತರ ತಂಡದ ಎಲ್ಲ ಆಟಗಾರರನ್ನು ಭೇಟಿ ಮಾಡಿಸಿ, ಗ್ರೂಪ್ ಫೋಟೋ ತೆಗೆದುಕೊಳ್ಳಲಾಯಿತು. ಬಳಿಕ ಇಂಗ್ಲೆಂಡ್-ಪಾಕಿಸ್ತಾನ ನಡುವಣ ಪಂದ್ಯವನ್ನು ಸ್ಯಾಮುಯೆಲ್ ವೀಕ್ಷಿಸಿದ್ದಾನೆ.

Comments are closed.