ಮನೋರಂಜನೆ

ತನ್ನ ಗರ್ಭಿಣಿ ಗರ್ಲ್‌ಫ್ರೆಂಡ್‌‌ಳನ್ನು ಮದುವೆಯಾಗಲು ಮಕ್ಕಳು ಕೂಡ ಒಪ್ಪಿದ್ದಾರೆ: ಅರ್ಜುನ್ ರಾಮ್‌ಪಾಲ್

Pinterest LinkedIn Tumblr

ಚಿತ್ರೋದ್ಯಮದಲ್ಲಿ ಪ್ರೀತಿ, ಪ್ರೇಮ, ವಿಚ್ಛೇದನ ಎಂಬುದು ಸರ್ವೆ ಸಾಮಾನ್ಯ ಎಂಬಂತಾಗಿದೆ. ಮುಖ್ಯವಾಗಿ ಬಾಲಿವುಡ್‌ನಲ್ಲಿ ಇಂತಹ ಪ್ರಕರಣಗಳನ್ನು ಹೆಚ್ಚಾಗಿ ಕಾಣಬಹುದು. ಅಮೀರ್ ಖಾನ್, ಹೃತಿಕ್ ರೋಷನ್, ಸೈಫ್ ಆಲಿ ಖಾನ್ ಇಂತಹ ಬಹಳಷ್ಟು ಮಂದಿ ಹೀರೋಗಳ ವೈವಾಹಿಕ ಜೀವನದಲ್ಲಿ ಎಡವಿದ್ದಾರೆ, ಸಂಸಾರ ಜೀವನ ಛಿದ್ರವಾಗಿದೆ.

ಇದೀಗ ಈ ಲಿಸ್ಟ್‌ನಲ್ಲಿ ನಟ ಅರ್ಜುನ್ ರಾಮ್‍ ಪಾಲ್ ಸಹ ಸೇರ್ಪಡೆಯಾಗಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಸಂಸಾರ ಜೀವನ ನಡೆಸಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆದು ಈಗ ಗರ್ಲ್‍ಫ್ರೆಂಡ್‌ರನ್ನು ವರಿಸಲು ರೆಡಿಯಾಗಿದ್ದಾರೆ. ಕಳೆದ ವರ್ಷ ಪತ್ನಿಯಿಂದ ದೂರ ಸರಿಯುತ್ತಿರುವುದಾಗಿ ಘೋಷಿಸಿದ್ದರು ಅರ್ಜುನ್ ರಾಮ್‍ಪಾಲ್.

1998ರಲ್ಲಿ ಮೆಹ್ರ್‌ರನ್ನು ಮದುವೆಯಾದ ಅರ್ಜುನ್‌ಗೆ ಈಗ ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ ಅರ್ಜುನ್ ಮಾತ್ರ ತನ್ನ ಗರ್ಲ್‌ಫ್ರೆಂಡ್‌ ಜತೆಗೆ ಮದುವೆಯಾಗಲು ನಿರ್ಧರಿಸಿದ್ದಾರೆ. ಮುಖ್ಯವಾದ ಸಂಗತಿ ಏನೆಂದರೆ ತನ್ನ ಗರ್ಲ್‌ಫ್ರೆಂಡ್‌ರನ್ನು ಟೀನೇಜ್ ಮಕ್ಕಳು ಅಂಗೀಕರಿಸಿದ್ದಾರೆ ಎಂದು ಸ್ವತಃ ಅರ್ಜುನ್ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ ತನ್ನ ಪತ್ನಿಯ ಕಾರಣ ನಾನು ಐದು ವರ್ಷಗಳ ಕಾಲ ನರಕಯಾತನೆ ಅನುಭವಿಸಿದೆ ಎಂದಿದ್ದಾರೆ. ಎರಡು ವರ್ಷಗಳ ಕಾಲ ವಿದೇಶಿ ಗರ್ಲ್‌ಫ್ರೆಂಡ್ ಜತೆಗೆ ರಹಸ್ಯವಾಗಿ ಡೇಟಿಂಗ್ ಮಾಡಿದ ಅರ್ಜುನ್ ಆ ಬಳಿಕ ಓಪನ್ ಅಪ್ ಆದರು. ಸದ್ಯಕ್ಕೆ ಅರ್ಜನ್ ಗರ್ಲ್‌ಫ್ರೆಂಡ್ ಗಾಬ್ರಿಯೆಲಾ ಗರ್ಭಿಣಿ. ಆಗಸ್ಟ್‌ನಲ್ಲಿ ಮಗುವಿನ ತಂದೆಯಾಗಲಿದ್ದಾರೆ ಅರ್ಜುನ್.

Comments are closed.