ಮನೋರಂಜನೆ

ಬಾಲಿವುಡ್‌ ನಟಿ ಐಶ್ವರ್ಯಾ ರೈ ಕುರಿತು ವಿವಾದಿತ ಟ್ವೀಟ್‌: ವಿವೇಕ್‌ ಒಬೆರಾಯ್‌ಗೆ ನೋಟಿಸ್‌

Pinterest LinkedIn Tumblr


ಮುಂಬಯಿ: ಬಾಲಿವುಡ್‌ ನಟಿ ಐಶ್ವರ್ಯಾ ರೈ ಕುರಿತು ವಿವಾದಾತ್ಮಕ ಟ್ವೀಟ್‌ ಅನ್ನು ರೀ ಟ್ವೀಟ್‌ ಮಾಡಿದ್ದ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ಜಾರಿ ಮಾಡಿದೆ.

ಪ್ರಸಕ್ತ ಲೋಕಸಬಾ ಚುನಾವಣೆ ಮತಗಟ್ಟೆ ಸಮೀಕ್ಷೆ ಬಹಿರಂಗಗೊಂಡ ನಂತರ ಪವನ್‌ ಸಿಂಗ್‌ ಎಂಬುವರು ಐಶ್ವರ್ಯಾ ರೈ ಬಚ್ಚನ್ ಹಿಂದಿನ ಸಂಬಂಧಗಳನ್ನು ಹಾಲಿ ರಾಜಕೀಯ ಪರಿಸ್ಥಿತಿಗಳಿಗೆ ಹೋಲಿಸಿ ಟ್ವೀಟ್‌ ಮಾಡಿದ್ದರು.

ಮೊದಲಿಗೆ ಸಲ್ಮಾನ್‌, ನಂತರ ವಿವೇಕ್‌ ಒಬೆರಾಯ್‌ ಮತ್ತು ಕೊನೆಯಲ್ಲಿ ಅಭಿಷೇಕ್‌ ಬಚ್ಚನ್‌ ಜತೆಗಿನ ಐಶ್ಚರ್ಯಾ ರೈ ಬಚ್ಚನ್‌ ಫೋಟೋವನ್ನು ಹಾಕಿ ಟ್ವೀಟ್‌ ಮಾಡಲಾಗಿತ್ತು.

ಈ ಟ್ವೀಟ್‌ ಅನ್ನು ವಿವೇಕ್‌ ಒಬೆರಾಯ್‌ ರೀ ಟ್ವೀಟ್‌ ಮಾಡಿ, ರಾಜಕೀಯ ಏನೂ ಇಲ್ಲ, ಜೀವನವಷ್ಟೇ ಎಂದು ಷರಾ ಬರೆದಿದ್ದರು.

ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಕುರಿತು ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿರುವ ಮಹಿಳಾ ಆಯೋಗ ವಿವೇಕ್ ಒಬೆರಾಯ್‌ಗೆ ನೋಟಿಸ್‌ ಜಾರಿ ಮಾಡಿದ್ದು, ವಿವರಣೆ ನೀಡುವಂತೆ ಸೂಚನೆ ನೀಡಿದೆ.

Comments are closed.