ರಾಷ್ಟ್ರೀಯ

ಬಿಜೆಪಿಯೇತರ ಸರಕಾರ ರಚನೆ ಕುರಿತು ಚರ್ಚಿಸಲು ಭೇಟಿಯಾದ ಮಮತಾ ಬ್ಯಾನರ್ಜಿ-ಚಂದ್ರಬಾಬು ನಾಯ್ಡು

Pinterest LinkedIn Tumblr


ಕೋಲ್ಕೊತ: ಲೋಕಸಭಾ ಚುನಾವಣೆಯ ನಂತರ ಪ್ರಕಟಗೊಂಡ ಮತಗಟ್ಟೆ ಸಮೀಕ್ಷೆಗಳು ಬಹಿರಂಗಗೊಂಡಿವೆ.

ಇದರ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ಸೇತರ ಪಕ್ಷಗಳು ರಣತಂತ್ರದಲ್ಲಿ ತೊಡಗಿವೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೋಲ್ಕೊತಕ್ಕೆ ಭೇಟಿ ನೀಡಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಚರ್ಚೆ ನಡೆಸಿದರು.

ಬಿಜೆಪಿ ವಿರುದ್ಧ ಇಬ್ಬರೂ ಸಮಾನ ಅಂತರ ಕಾಪಾಡಿಕೊಂಡಿದ್ದಾರೆ. ಫಲಿತಾಂಶ ನಂತರ ಮಾಡಬೇಕಾದ ತಂತ್ರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದರಿಂದ ದೂರ ಇರಿಸಲು ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ತಂತ್ರ ರೂಪಿಸಿದ್ದಾರೆ.

ಇದೇ ವೇಳೆ ಮಮತಾ ಬ್ಯಾನರ್ಜಿ ಜತೆ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.

Comments are closed.