ಮನೋರಂಜನೆ

‘ನೀರ್​ದೋಸೆ’ಯಿಂದ ಆರಂಭವಾದ ಹರಿಪ್ರಿಯಾಗೆ ಗುರುದೆಸೆ..?

Pinterest LinkedIn Tumblr


ಸ್ಯಾಂಡಲ್​ವುಡ್​ನ ಲೀಡಿಂಗ್​ ಆ್ಯಕ್ಟ್ರೆಸ್ ಹರಿಪ್ರಿಯಾ ಇದೀಗ ಹೊಸ ಅವತಾರದಲ್ಲಿ, ಪಾರ್ವತಮ್ಮನ ಮಗಳಾಗಿ ಬಿಗ್​ ಸ್ಕ್ರೀನ್​ ಗೆ ಎಂಟ್ರಿಕೊಡ್ತಿದ್ದಾರೆ.. ಬ್ಯಾಕ್ ಟು ಬ್ಯಾಕ್​ ಸಿನಿಮಾಗಳಲ್ಲಿ , ವಿಭಿನ್ನ ಪಾತ್ರದಲ್ಲಿ ಮಿಂಚ್ತಿರೋ ಹರಿಪ್ರಿಯಾ ಸದ್ಯ ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ನಟಿ..

ಹರಿಪ್ರಿಯಾ.. ಕನ್ನಡದ ಬ್ಯೂಟಿಫುಲ್​ ಅಂಡ್ ಟ್ಯಾಲೆಂಟೆಡ್​ ಆ್ಯಕ್ಟ್ರೆಸ್.. ಇತ್ತೀಚೆಗಂತೂ ಕನ್ನಡದಲ್ಲಿ ತಿಂಗಳಿಗೆರಡು ಹರಿಪ್ರಿಯಾ ಸಿನಿಮಾಗಳು ತೆರೆಗೆ ಬರ್ತಿವೆ.. ಅದೇ ಹಾದಿಯಲ್ಲಿ ಈ ವಾರ ಕೂಡ ಡಾಟರ್​ ಆಫ್​ ಪಾರ್ವತಮ್ಮ ಸಿನಿಮಾ ತೆರೆಗೆ ಬರ್ತಿದ್ದು, ಈಗಾಗ್ಲೇ ಟ್ರೇಲರ್ ಮತ್ತು ಹಾಡುಗಳಿಂದ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿದೆ.

ಅಂದ್ಹಾಗೇ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾದ್ರೂ, ತಮಿಳು, ತೆಲುಗು, ಮಲೆಯಾಳಂನಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ರೂ, ಆಕೆಗೆ ಅದೃಷ್ಟ ದೇವತೆ ಒಲಿದಿದ್ದು ಮಾತ್ರ ಇತ್ತೀಚಿನ ನೀರ್​ದೊಸೆ ಸಿನಿಮಾ ಮೂಲಕ.. 2007ರಲ್ಲಿ ತನ್ನ ಸಿನಿಜರ್ನಿಯನ್ನ ಶುರುಮಾಡಿದ ಹರಿಪ್ರಿಯಾ ಕನ್ನಡದಲ್ಲಿ ಈವರೆಗೂ ಸುಮಾರು 24 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಅಷ್ಟೂ ಸಿನಿಮಾಗಳಲ್ಲಿ ಹರಿಪ್ರಿಯಾ ಅಭಿನಯ ನೋಡಿದ್ರೆ, ಆಕೆ ಅದ್ಬುತ ನಟಿ ಅನ್ನೋದು ಪ್ರೂವ್ ಆಗಿದೆ..

ಹರಿಪ್ರಿಯಾಗೆ ಅವಕಾಶಗಳು ಸಿಗ್ತಾ ಇತ್ತೇ ಹೊರತು ದೊಡ್ಡ ಸಕ್ಸಸ್ ಅಂತ ಸಿಕ್ಕೇಯಿರಲಿಲ್ಲ.. ಅದು ಸಾಧ್ಯವಾಗಿದ್ದೇ 2016 ರ ನೀರ್​ ದೋಸೆ ಸಿನಿಮಾ ಮೂಲಕ.. ನೀರ್​ದೋಸೆಯಲ್ಲಿ ಸಖತ್​ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡ ಹರಿಪ್ರಿಯಾ ಅಲ್ಲಿಂದ ಸೆಕೆಂಡ್​ ಇನ್ನಿಂಗ್ಸ್​ ಶುರುಮಾಡಿದ್ರು.. ಅಲ್ಲಿಂದ ಕನ್ನಡದ ಸ್ಟಾರ್​ ನಟರ ಜೊತೆ ಹೆಜ್ಜೆ ಹಾಕಿದ್ರು..ಅಂಜನಿಪುತ್ರ, ಭರ್ಜರಿ, ಕನಕ, ಲೈಫ್​ ಜೊತೆ ಒನ್​ ಸೆಲ್ಫಿ, ಬುಲೆಟ್ ಬಸ್ಯಾ ಹೀಗೆ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸ್ತಾ ದೊಡ್ಡ ಮಟ್ಟದಲ್ಲೇ ನೇಮು ಫೇಮು ಪಡ್ಕೊಂಡ್ರು.

ರೀಸೆಂಟಾಗಿ ರಿಲೀಸ್​ ಆದ ಬೆಲ್​ಬಾಟಂ ಚಿತ್ರದಲ್ಲೂ ಹರಿಪ್ರಿಯಾ ಅಭಿನಯಕ್ಕೆ ಪ್ರೇಕ್ಷಕರು ಮಾತ್ರವಲ್ದೆ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಕೂಡ ಕಾಂಪ್ಲಿಮೆಂಟ್ಸ್​ ಕೊಟ್ರು.. ಇದೀಗ 100 ದಿನ ಪೂರೈಸಿ ಬೆಲ್​ಬಾಟಂ ಸಿನಿಮಾ ಸಾಗ್ತಿದೆ.. ಕಳೆದ ವಾರವಷ್ಟೇ ರಿಲೀಸ್ ಆದ ಸೂಜಿದಾರ ಚಿತ್ರದ ಹರಿಪ್ರಿಯಾ ಅಭಿನಯಕ್ಕೂ ಪ್ರಶಂಸೆಗಳ ಮಹಾಪೂರವೇ ಹರಿದುಬಂತು..

ಈ ವಾರ ಡಾಟರ್ ಆಫ್ ಪಾರ್ವತಮ್ಮ ಮೂಲಕ ಇನ್ವಸ್ಟಿಗೇಷನ್ ಆಫೀಸರ್ ಆಗಿ ಹರಿಪ್ರಿಯಾ ತೆರೆಗೆ ಬರ್ತಿದ್ದಾರೆ.. ನೀರ್​ದೋಸೆ ಚಿತ್ರದಿಂದ ಹರಿಪ್ರಿಯಾ ಸಿನಿಜರ್ನಿ ಬೇರೆಯದ್ದೇ ತಿರುವು ಪಡ್ಕೊಂಡಿದ್ದು, ಕನ್ನಡ ಚಿತ್ರರಂಗದ ಟಾಪ್​ ನಟಿಯರ ಸ್ಥಾನದಲ್ಲಿ ಹರಿಪ್ರಿಯಾ ಕೂಡ ನಿಂತಿದ್ದಾರೆ.. ಡಾಟರ್​ ಆಫ್​ ಪಾರ್ವತಮ್ಮ ಚಿತ್ರ ಕೂಡ ಹರಿಪ್ರಿಯಾ ಕರಿಯರ್​ನಲ್ಲಿ ಮತ್ತೊಂದು ಹಿಟ್ ಕೊಡೋ ಭರವಸೆ ಮೂಡಿಸಿದೆ..

Comments are closed.