ಮನೋರಂಜನೆ

ಬಾಲಿವುಡ್‌ನಲ್ಲಿ ನಿರ್ದೇಶನ ಮಾಡಲು ಕರೆದು ದಕ್ಷಿಣ ಭಾರತದ ನಿರ್ದೇಶಕ ರಾಘವ್ ಲಾರೆನ್ಸ್‌ಗೆ ಅವಮಾನ..!?

Pinterest LinkedIn Tumblr


ಸ್ವಾಭಿಮಾನವನ್ನ ಕೆಣಕಿದ್ರೆ ಎಂಥವ್ರೂ ರೆಬೆಲ್ ಆಗ್ತಾರೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ನಿನ್ನನ್ನ ಗೌರವಿಸದ ಜಾಗದಲ್ಲಿ ನಿನ್ನ ಚಪ್ಪಲಿಯನ್ನೂ ಬಿಡಬೇಡ ಅನ್ನೋ ಮಾತೊಂದಿದೆ. ಇದೀಗ ಆ ಮಾತು ನೂರಕ್ಕೆ ನೂರರಷ್ಟು ಸತ್ಯ ಅನಿಸ್ತಿದೆ.

ಸ್ವಾಭಿಮಾನ ಯಾರನ್ನ ಏನು ಬೇಕಾದ್ರು ಮಾಡಿಸುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಆದ್ರೆ ಅದೇ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದು ತಾರಕಕ್ಕೇರುತ್ತೆ ಅನ್ನೋದೂ ಸುಳ್ಳಲ್ಲ. ಸೌತ್​ನ ಪ್ರತಿಭಾವಂತ ಡೈರೆಕ್ಟರ್ ಅಕ್ಷಯ್ ಕುಮಾರ್ ಸಿನಿಮಾಗೇ ಗೋಲಿ ಹೊಡೆದಿದ್ದಾರೆ. ನನಗೆ ಈ ಸಿನಿಮಾನೂ ಬೇಡ ಏನೂ ಬೇಡ ಅಂತ ಎಕ್ಸಿಟ್ ಆಗಿದ್ದಾರೆ.

ಇತ್ತೀಚೆಗೆ ರಾಘವ ಲಾರೆನ್ಸ್ ಕಾಂಚನ ಸೀಕ್ವೆಲ್​ನ ನಾಲ್ಕನೇ ಸಿನಿಮಾ ಮುನಿ-4 ರೂಪದಲ್ಲಿ ಸೌತ್ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸಿತು. ಹಾರರ್ ಜಾನರ್​ ಸೀರೀಸ್​ನ ಈ ಸಿನಿಮಾಗಳನ್ನ ಒಂದರ ಹಿಂದೊಂದು ಖುದ್ದು ಲಾರೆನ್ಸ್ ಅವ್ರೇ ನಟಿಸಿ, ನಿರ್ದೇಶಿಸಿ, ನಿರ್ಮಿಸ್ತಾ ಬರ್ತಿದ್ರು. ಅದನ್ನ ಕಂಡ ಪ್ರತಿಷ್ಠಿತ ಬಾಲಿವುಡ್ ಪ್ರೊಡಕ್ಷನ್ ಕಂಪೆನಿ, ಮುನಿ- 2 ಕಾಂಚನ ಸಿನಿಮಾನ ಹಿಂದಿಯಲ್ಲಿ ರಿಮೇಕ್ ಮಾಡಲು ಮುಂದಾಯ್ತು. ಅದಕ್ಕೆ ರಾಘವ ಲಾರೆನ್ಸ್ ಡೈರೆಕ್ಟರ್, ಅಕ್ಷಯ್ ಕುಮಾರ್ ನಾಯಕ, ಲಕ್ಷ್ಮೀ ಬಾಂಬ್ ಟೈಟಲ್, 2020ಗೆ ಸಿನಿಮಾ ರಿಲೀಸ್ ಅಂತಲೂ ಅನೌನ್ಸ್ ಮಾಡಿತ್ತು.

ಡ್ಯಾನ್ಸ್ ಮಾಸ್ಟರ್, ಕೊರಿಯೋಗ್ರಫರ್ ಕಮ್ ಆ್ಯಕ್ಟರ್ ರಾಘವ್ ಲಾರೆನ್ಸ್ ಬಾಲಿವುಡ್​ನಲ್ಲೂ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದು ಸೌತ್ ಸಿನಿದುನಿಯಾದ ಮಟ್ಟಿಗೆ ಖುಷಿಯ ವಿಚಾರ ಅಂದುಕೊಳ್ತಾ ಇದ್ದಂತೆ, ಲಕ್ಷ್ಮೀ ಬಾಂಬ್ ಸಿನಿಮಾಗೆ ನಾನು ಆ್ಯಕ್ಷನ್ ಕಟ್ ಹೇಳ್ತಾ ಇಲ್ಲ ಅಂತ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಲಾರೆನ್ಸ್. ಹೌದು.. ಲಕ್ಷ್ಮೀ ಬಾಂಬ್ ಚಿತ್ರದ ಫಸ್ಟ್ ಲುಕ್​ನ ಲಾರೆನ್ಸ್​ಗೂ ತಿಳಿಸದೇನೇ ರಿವೀಲ್ ಮಾಡಿರೋದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ.

ಈ ಕುರಿತು ಲಾರೆನ್ಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ನಾನು ಹಿಂದಿ ಕಾಂಚನಗೆ ನಿರ್ದೇಶನ ಮಾಡ್ತಿಲ್ಲ. ಅಕ್ಷಯ್ ಕುಮಾರ್ ಮೇಲೆ ಒಳ್ಳೆಯ ಗೌರವ ಇದೆ. ಹಾಗಾಗಿ ಅವ್ರಿಗೆ ನನ್ನ ಚಿತ್ರದ ಕಥೆ, ಚಿತ್ರಕಥೆ ಕೊಟ್ಟಿ ಬರುವೆ. ಆದ್ರೆ ಅವ್ರು ನಿರ್ದೇಶಕರನ್ನ ಬದಲಿಸಿಕೊಂಡು ಸಿನಿಮಾ ಮಾಡಿಕೊಳ್ಳಲಿ ಅಂತ ತುಂಬಾ ಸಾವಧಾನವಾಗಿ ತಮ್ಮೊಳಗಿನ ನೋವನ್ನ ಹೊರಹಾಕಿದ್ದಾರೆ.

ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಇದೊಂದು ಉತ್ತಮ ನಿದರ್ಶನ. ಲಾರೆನ್ಸ್ ಸ್ವಾಭಿಮಾನಕ್ಕಿಂತ ಇಲ್ಲಿ ಬಾಲಿವುಡ್ ಸಿನಿಮಾದ ನಿರ್ದೇಶನ ಅಥವಾ ಅಕ್ಷಯ್ ಕುಮಾರ್ ಚಿಕ್ಕವರು ಅನ್ನೋದು ಸಾಬೀತಾಯ್ತು. ಲಾರೆನ್ಸ್​ರ ಈ ಸ್ವಾಭಿಮಾನದ ಮಾತಿಗೆ ಫ್ಯಾನ್ಸ್ ಫುಲ್ ಸಪೋರ್ಟ್​ ಮಾಡ್ತಿದ್ದಾರೆ.

ಇನ್ನು ಅಕ್ಷಯ್ ಕುಮಾರ್ ಹಾಗೂ ಎ ಕ್ಯಾಪ್ ಆಫ್ ಗುಡ್ ಫಿಲ್ಮ್ಸ್ಸ್ ಪ್ರೊಡಕ್ಷನ್ ಬ್ಯಾನರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

Comments are closed.