ಬೆಂಗಳೂರು: ಡಾ.ರಾಜ್‌ಕುಮಾರ್ ಕುಟುಂಬದಲ್ಲೀಗ ಮದುವೆ ಸಂಭ್ರಮ ಜೋರಾಗಿದೆ. ಮೇ 26ರಂದು ನಟ ರಾಘವೇಂದ್ರ ರಾಜಕುಮಾರ್ ಎರಡನೇ ಪುತ್ರ ಯುವರಾಜ್‌ಕುಮಾರ್, ಶ್ರೀದೇವಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಇಂದು ಸಂಗೀತ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಯಿತು.
ನಿನ್ನೆಯಿಂದಲೇ ದೊಡ್ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಇಂದು ನಡೆದ ಸಂಗೀತ್ ಪಾರ್ಟಿಯಲ್ಲಿ ನಟ ಶಿವರಾಜ್‌ಕುಮಾರ್ ಹಾಡು ಹಾಡಿ, ಎಲ್ಲರೊಂದಿಗೆ ಹೆಜ್ಜೆ ಹಾಕಿದರು. ಅಲ್ಲದೇ, ಕುಟುಂಬಸ್ಥರು, ಸ್ನೇಹಿತರೆಲ್ಲ ಸೇರಿ ಸಂಗೀತ, ನೃತ್ಯ ಮಾಡಿ ಸಂಭ್ರಮಿಸಿದರು.