ಕರ್ನಾಟಕ

ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಮತ್ತೆ ಬಿಜೆಪಿಗೆ; ಕೈ-ಜೆಡಿಎಸ್’ಗೆ ಎಷ್ಟು ಸ್ಥಾನ ? ಮತದಾನೋತ್ತರ ಸಮೀಕ್ಷೆ ನೋಡಿ…

Pinterest LinkedIn Tumblr

ಬೆಂಗಳೂರು: ಕಳೆದ ಒಂದೂವರೆ ತಿಂಗಳಿನಿಂದ ನಡೆದ ಮತ ಭಾರತ ಸಮರ ಭಾನುವಾರ ಕೊನೆಗೊಂಡಿದೆ. ಈಗ ಮತದಾನಕ್ಕಿಂತ ಎಲ್ಲರ ಕಣ್ಣು ಮತದಾನೋತ್ತರ ಸಮೀಕ್ಷೆಯ ಮೇಲೆ ನೆಟ್ಟಿದೆ.

ಅದರಂತೆ ಲೋಕಸಭಾ ಚುನಾವಣೆಯ ಸಮೀಕ್ಷೆಗಳು ಪ್ರಕಟಗೊಂಡಿದ್ದು ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 18, ಕಾಂಗ್ರೆಸ್‌ 7, ಜೆಡಿಎಸ್‌ 2 ಗಳಿಸಲಿದ್ದು ಪಕ್ಷೇತರರು 1 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.

ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಬಿಜೆಪಿ 21 ರಿಂದ 25, ಕಾಂಗ್ರೆಸ್‌ 3 ರಿಂದ 6, ಜೆಡಿಎಸ್‌ 1 ರಿಂದ 3 ಹಾಗೂ ಪಕ್ಷೇತರ 1 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.

ಸಿ-ವೋಟರ್‌ ಸಮೀಕ್ಷೆ: ಬಿಜೆಪಿ 18, ಕಾಂಗ್ರೆಸ್‌- 7, ಜೆಡಿಎಸ್‌ -2 ಮತ್ತು ಪಕ್ಷೇತರ 1 ಸ್ಥಾನ

ನ್ಯೂಸ್ ಎಕ್ಸ್ ಸಮೀಕ್ಷೆ: ಬಿಜೆಪಿ 15, ಕಾಂಗ್ರೆಸ್ 10, ಜೆಡಿಎಸ್ 2, ಪಕ್ಷೇತರ 1 ಸ್ಥಾನ

ಕರ್ನಾಟಕದಲ್ಲಿ ಈ ಬಾರಿಯೂ ಬಿಜೆಪಿ ತನ್ನ ಹಿಂದಿನ ಸಾಧನೆಯನ್ನೇ ಮುಂದುವರಿಸುವ ನಿರೀಕ್ಷೆ ಇದೆ.

ಲೋಕಸಭೆ ಚುನಾವಣೆಗೆ ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿತ್ತು.

ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಮತದಾನ ನಡೆದಿತ್ತು.

ಮೊದಲ ಹಂತದಲ್ಲಿ ಶೇಕಡ 68.80ರಷ್ಟು ಹಾಗೂ ಎರಡನೇ ಹಂತದಲ್ಲಿ ಶೇಕಡ 68.43ರಷ್ಟು ಮತದಾನ ನಡೆದಿತ್ತು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 16, ಕಾಂಗ್ರೆಸ್‌ 10 ಹಾಗೂ ಜೆಡಿಎಸ್‌ 2 ಸ್ಥಾನ ಪಡೆದಿತ್ತು.

ನಂತರ ನಡೆದ ಉಪ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿ ಗಳಿಕೆಯನ್ನು ಹೆಚ್ಚಿಸಿಕೊಂಡಿತ್ತು.

Comments are closed.