
ನವದೆಹಲಿ: ಲೋಕಸಭಾ ಚುನಾವಣೆ 2019 ರ ಚುನಾವನೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಬಹುತೇಕ ಸಮೀಕ್ಷೆಯ ಪ್ರಕಾರ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ.
ನ್ಯೂಸ್ ಎಕ್ಸ್, ಸಿ-ವೋಟರ್, ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಎನ್ ಡಿಎ 272 ರ ಮ್ಯಾಜಿಕ್ ನಂಬರ್ ನ್ನು ಸುಲಭವಾಗಿ ದಾಟಲಿದ್ದು ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ.
ನಾನಾ ಮಾಧ್ಯಮ ಸಂಸ್ಥೆಗಳು, ಟಿವಿ ಚಾನೆಲ್‌ಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಫಲಿತಾಂಶ ಯಾವ ರೀತಿ ಇರಬಹುದು ಎಂಬ ಕುತೂಹಲಕಾರಿ ಚಿತ್ರಣ ಇಲ್ಲಿದೆ:
ಟೈಮ್ಸ್ ನೌ ಮತದಾನೋತ್ತರ ಸಮೀಕ್ಷೆ ಪ್ರಕಾರ ಎನ್‌ಡಿಎ 306 ಲೋಕಸಭಾ ಸ್ಥಾನಗಳನ್ನು ಗೆದ್ದು ಮತ್ತೆ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ 132, ಇತರರ 104 ಸ್ಥಾನಗಳನ್ನು ಗೆಲ್ಲಲಿದ್ದಾರೆ.
ಸಿವೋಟರ್ ಸಮೀಕ್ಷೆ ಪ್ರಕಾರ ಎನ್‌ಡಿ 287, ಯುಪಿಎ 128, ಇತರರು 127 ಕ್ಷೇತ್ರಗಳಲ್ಲಿ ಗೆಲ್ಲಲಿವೆ.
ಎಬಿಪಿ ಸಮೀಕ್ಷೆ ಪ್ರಕಾರ, ಎನ್‌ಡಿಎ 336, ಯುಪಿಎ-55, ಇತರೆ 148 ಕ್ಷೇತ್ರಗಳಲ್ಲಿ ಗೆಲ್ಲಲಿವೆ.
ಪೋಲ್ ಆಫ್ ಪೋಲ್ಸ್ ಸಮೀಕ್ಷೆ ಪ್ರಕಾರ 296, ಯುಪಿಎ 127, ಇತರರು 120 ಸ್ಥಾನಗಳನ್ನು ಗೆಲ್ಲಲಿದ್ದಾರೆ.
ವಿವಿಆರ್ ಸಮೀಕ್ಷೆ ಪ್ರಕಾರ ಎನ್‌ಡಿಎ 306, ಯುಪಿಎ-132, ಮತ್ತು ಇತರರು 104 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ.
ನ್ಯೂಸ್ ಎಕ್ಸ್- ನೇತಾ: ಎನ್‌ಡಿಎ -298, ಯುಪಿಎ-118, ಇತರರು-126
ರಿಪಬ್ಲಿಕ್ ಭಾರತ್- ಜನ್ ಕೀ ಭಾತ್: ಎನ್‌ಡಿಎ -305, ಯುಪಿಎ-124, ಇತರರು-113
ಟೈಮ್ಸ್ ನೌ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶ 80 ಕ್ಷೇತ್ರಗಳ ಪೈಕಿ ಎನ್‌ಡಿಎ 58, ಮಹಾಘಟಬಂಧನ್ 20, ಯುಪಿಎ 2 ಹಾಗೂ ಮಹಾರಾಷ್ಟ್ರದಲ್ಲಿ 48 ಕ್ಷೇತ್ರಗಳ ಪೈಕಿ ಎನ್‌ಡಿಎ 38, ಯುಪಿಎ 10 ಸ್ಥಾನಗಳನ್ನು ಗೆಲ್ಲಲಿವೆ.
Comments are closed.