ಮನೋರಂಜನೆ

ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕನ್ನಡದ ನಟ ಹಾಗು ಆತನ ಸ್ನೇಹಿತರು

Pinterest LinkedIn Tumblr

ಬೆಂಗಳೂರು: ಕನ್ನಡದ ನಟನೋರ್ವ ಸ್ನೇಹಿತರೊಂದಿಗೆ ಸೇರಿ ಅಪಾರ್ಟ್ ಮೆಂಟ್ ಗೆ ನುಗ್ಗಿ ಚಾಕು ತೋರಿಸಿ ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನಾಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.

ಕಿರುತೆರೆ ನಟ ರಾಜೇಶ್ ಎಂಬಾತ ತನ್ನ ಸ್ನೇಹಿತರಾದ ಮಣಿ, ಸೂರ್ಯ ಜೊತೆ ಸೇರಿ ಯುವತಿಯರ ಅಪಾರ್ಟ್ ಮೆಂಟ್ ಗೆ ನುಗ್ಗಿ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಮೇ 12ರಂದು ಈ ಕೃತ್ಯ ನಡೆದಿದ್ದು ಈ ಸಂಬಂಧ ಆರೋಪಿಗಳು ಬಂಧಿಸಿದ್ದಾರೆ.

ಮಣಿಪುರಿ ಮೂಲದ ಸಂತ್ರಸ್ತ ಯುವತಿ ಕೆಂಗೇರಿಯ ಕಾಲೋಜೊಂದರಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬಳು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಕೋರಮಂಗಲದ ಅಪಾರ್ಟ್ ಮೆಂಟ್ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

Comments are closed.