ಕೆಲ ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಮೆರಾ ಹಿಡಿದು ಬಂಡೀಪುರ, ನಾಗರಹೊಳೆ ಅಭಯಾರಣ್ಯಕ್ಕೆ ಹೋಗಿ ವನ್ಯಜೀವಿಗಳ ಫೋಟೋಗಳನ್ನ ಸೆರೆಹಿಡಿದಿದ್ದರು. ಅದನ್ನ ಎಕ್ಸಿಬೀಷನ್‌ಗೆ ಹಾಕಿ, ಅದರಿಂದ ಬಂದ ಹಣವನ್ನು, ಅರಣ್ಯ ಇಲಾಖೆಯ ನೆರವಿಗಾಗಿ ನೀಡಲಾಗತ್ತೆ ಎಂದಿದ್ದರು.
ಇದೀಗ ದಚ್ಚುಗೆ ಸಾಥ್ ನೀಡಲು ಮುಂದಾಗಿರುವ ಹಾಸ್ಯನಟ ಚಿಕ್ಕಣ್ಣ, ದರ್ಶನ್ ಸೆರೆಹಿಡಿದಿರುವ ಆನೆಯ ಫೋಟೋವೊಂದನ್ನ ಒಂದು ಲಕ್ಷ ರೂಪಾಯಿ ನೀಡಿ ಖರೀದಿಸಿದ್ದಾರೆ.
ಈ ಬಗ್ಗೆ ದರ್ಶನ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ ಒಂದು ಲಕ್ಷ ರೂಪಾಯಿ ನೀಡಿ ಖರೀದಿಸಿದ್ದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು ಎಂದಿದ್ದಾರೆ.