ಮನೋರಂಜನೆ

ಕನ್ನಡ ಚಿತ್ರರಂಗದ ಮಿನುಗು ತಾರೆ ಕಲ್ಪನಾ ಅಗಲಿ ಇಂದಿಗೆ 40 ವರ್ಷ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನ ಮಿನುಗು ತಾರೆ ಕಲ್ಪನಾ ಇಹಲೋಕ ತ್ಯಜಿಸಿ ಇಂದಿಗೆ (ಮೇ 12) ನಲವತ್ತು ವರ್ಷಗಳಾದವು. ಅತ್ಯಲ್ಪ ಅವಧಿಯಲ್ಲಿ ಕನ್ನಡ ಚಿತ್ರರಂಗವಿರುವ ತನಕವೂ ಶಾಶ್ವತವಾಗಿರುವಂಥ ಅದ್ಭುತ ಸಾಧನೆಯನ್ನು ಮಾಡಿ ಮತ್ತೆ ಬಾರದ ಲೋಕದತ್ತ ಹೊರಟು ಹೋದ ನಟಿ ಕಲ್ಪನಾ ನೆನಪು ಮಾತ್ರ ಕನ್ನಡ ಸಿನಿ ಪ್ರೇಕ್ಷಕರ ಹೃದಯದಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ.

ಕನ್ನಡದ ಮೇರು ಸಾಹಿತಿಗಳಾದ ಶಿವರಾಮ ಕಾರಂತ, ಸಿಪಿಕೆ, ಚದುರಂಗರಂತಹಾ ಘಟಾನುಘಟಿಗಳಿಂಡ ಮೆಚ್ಚುಗೆ ಪಡಿದ್ದ್ದ ನಟಿ ಕಲ್ಪನ್ ಆಮೇ 12, 1979 ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

1943 ಜುಲೈ 18ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ಕಲ್ಪನಾ ಬೆಳ್ಳಿತೆರೆಗೆ ಬಂದದ್ದು 1963ರಲ್ಲಿ. ‘ಸಾಕುಮಗಳು’ ಅವರ ಮೊದಲ ಚಿತ್ರವಾಗಿದ್ದರೆ ಮಲೆಯ ಮಕ್ಕಳು’ (1978).ಕಡೆಯ ಚಿತ್ರವಾಗಿತ್ತು. ಒಟ್ಟಾರೆ 78 ಚಿತ್ರದಲ್ಲಿ ನಟಿಸಿದ್ದ ಈ ತಾರೆ ಕನ್ನಡದ 69 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ 4 ತಮಿಳು ಚ್ವಿತ್ರಗಳು, ಎರಡು ಮಲಯಾಳಂ, ಒಂದು ತೆಲುಗು ಹಾಗೂ ಎರಡು ತುಳು ಚಿತ್ರಗಳಲ್ಲಿ ಸಹ ಅಭಿನಯಿಸಿದ್ದರು.

ಕನ್ನಡದ ಮೇರುನಟ ಡಾ. ರಾಜ್ ಜೋಡಿಯಾಗಿ 1ಕಲ್ಪನಾ ನಟಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ದರಲ್ಲಿಯೂ ‘ಬಂಗಾರದ ಹೂವು’, ‘ಮಣ್ಣಿನಮಗ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದವು.

ರಾಜ್ಯ ಸರ್ಕಾರದಿಂದ ಮೊಟ್ಟಮೊದಲಿಗೆ ‘ಅತ್ಯುತ್ತಮ ನಟಿ ಪ್ರಶಸ್ತಿ’ ಪಡೆದ ನಟಿ ಕಲ್ಪನಾ!ಮೂರು ಬಾರಿ ಶ್ರೇಷ್ಠ ನಟಿ ಗೌರವ. ಫಿಲಂಫೇರ್ ಪ್ರಶಸ್ತಿ ಪಡೆದ ಪ್ರಪ್ರಥಮ ಕನ್ನಡ ನಟಿ ಸಹ ಇವರೇ ಎಂಬುದು ಸಹ ಅಚ್ಚರಿಯ ಸತ್ಯ.

ಇಂತಹಾ ನಟಿ ತಾವು ಗೋಡಗೇರಿ ಬಸವರಾಜ್ ನಾಟಕ ಕಂಪನಿಯ ನಾಟಕಕ್ಕಾಗಿ ಸಂಕೇಶ್ವರಕ್ಕೆ ಆಗಮಿಸಿದ್ದರು. ಆ ವೇಳೆ ಗೋಟೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದರು. ಆದರೆ ಗೋಡಗೇರಿ ಅವರೊಡನೆ ಮನಸ್ತಾಪವಾಗಿ ಕಲ್ಪನಾ ಬೇಸತ್ತು ಆತ್ಮಹತ್ಯೆಗೆ ಶರನಾದರು ಎಂದು ಹೇಳಲಾಗುತ್ತದೆ. ಇಂದಿಗೂ ಆ ಪ್ರವಾಸಿ ಮಂದಿರ ಹಾಗೂ ಅದರ ಪಕ್ಕದ ಮಾವಿನ ಮರದ ಬಗ್ಗೆ ಗ್ರಾಮಸ್ಥರಲ್ಲಿ ನಾನಾ ಕಲ್ಪನೆಗಳಿದೆ.

ಇನ್ನು ಕಲ್ಪನಾ ಮರಣದ ಬಳಿಕ ಬೆಂಗಳೂರು ಕೋಣನಕುಂಟೆ ಕ್ರಾಸ್‌ನಿಂದ ಎರಡನೇ ಸ್ಟಾಪ್ ಗುಬ್ಲಾಳದಲ್ಲಿ ನಟಿ ಕಲ್ಪನಾ ಅವರ ಸಮಾಧಿ ಮಾಡಲಾಗಿದೆ.

Comments are closed.