ಮನೋರಂಜನೆ

ಕಿರುತೆರೆ ನಟಿ ಮನೆಗೆ ನುಗ್ಗಿ ಮದುವೆಯಾಗುವಂತೆ ದುಂಬಾಲು ಬಿದ್ದ ಪಾಗಲ್​ ಪ್ರೇಮಿ ! ಮುಂದೆ ಏನಾಯಿತು ನೋಡಿ…

Pinterest LinkedIn Tumblr

ಚಂದದ ನಟಿಯರನ್ನು ಅಭಿಮಾನಿಗಳು ಇಷ್ಟಪಡೋದು ಸಾಮಾನ್ಯ. ಆದರೆ ಆ ನಟಿ ನಮಗಿಷ್ಟ ಅಂತ ಮನೆಗೇ ಹುಡುಕಿಕೊಂಡು ಹೋಗಿ, ಮದುವೆ ಮಾಡಿಕೊಡಿ ಅಂತ ಪಟ್ಟು ಹಿಡಿದರೆ ಹೇಗಿರಬೇಡ ಮನೆಯವರ ಪರಿಸ್ಥಿತಿ. ಕಿರುತೆರೆ ಸ್ಟಾರ್ ನಟಿಯೊಬ್ಬರಿಗೆ ಈಗ ಇಂತಹದ್ದೇ ಪರಿಸ್ಥಿತಿ ಎದುರಾಗಿದೆ.

ಇದು ತಮಿಳಿನ ಕಿರುತೆರೆ ನಟಿ ರಿತಿಕಾಗೆ ಎದುರಾದ ಫಜೀತಿ. ಕಾಲೇಜ್ ಹುಡುಗನೊಬ್ಬ ಈ ನಟಿಯನ್ನು ಟಿಕ್ ಟಾಕ್ ಮತ್ತು ಫೇಸ್‍ಬುಕ್‍ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಫಾಲೋ ಮಾಡ್ತಿದ್ದ. ರಿತಿಕಾ ನಟನೆಯನ್ನು ಮೆಚ್ಚಿಕೊಂಡಿದ್ದ ಭರತ್ ಅನ್ನೋ ಕಾಲೇಜು ಹುಡುಗ, ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ.

ಧಾರಾವಾಹಿಯಲ್ಲಿ ನೋಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಫಾಲೋಮಾಡಿ ಹುಚ್ಚು ಹಿಡಿಸಿಕೊಂಡಿದ್ದ. ಇತ್ತೀಚೆಗೆ ನೇರವಾಗಿ ನಟಿಯ ಮನೆಯನ್ನೇ ಹುಡುಕಿಕೊಂಡು ಹೋಗಿದ್ದಾನೆ. ಗುರುವಾರ ಬೆಳಿಗ್ಗೆ ರಿತಿಕಾರ ಮನೆಯ ಬಾಗಿಲು ತಟ್ಟಿದ್ದಾನೆ. ಎಂಜಿಯನಿಯರಿಂಗ್ ಮುಗಿಸಿ ಕೆಲಸ ಹುಡುಕ್ತಿದ್ದ ಭರತ್, ನಂಗೆ ರಿತಿಕಾ ಅಂದ್ರೆ ಪ್ರಾಣ ಮದುವೆ ಮಾಡಿಕೊಡಿ ಅಂತ ದುಂಬಾಲು ಬಿದ್ದಿದ್ದಾನೆ.

ಈ ಘಟನೆಯಿಂದ ನಟಿಯ ತಂದೆ ಮತ್ತು ಮನೆಯವರು ಕಂಗಾಲಾಗಿದ್ದಾರೆ. ಎಷ್ಟು ಹೇಳಿದರೂ ಕೇಳದಿದ್ದಾಗ ಪೊಲೀಸರನ್ನು ಕರೆಸಿದ್ದಾರೆ. ಈಗ ಹುಚ್ಚಾಟ ಮಾಡಿದ ಯುವಕ ಪೊಲೀಸ್ ವಶದಲ್ಲಿದ್ದಾನೆ.

Comments are closed.