ಮನೋರಂಜನೆ

ಒಂದೇ ದಿನ ಸಿನಿಮಾ ಪ್ರಿಯರಿಗೆ ಡಬಲ್ ಧಮಾಕ….!

Pinterest LinkedIn Tumblr

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ. ಇಬ್ಬರ ಸ್ನೇಹ ಇಪ್ಪತ್ತು ಇಪ್ಪತ್ತೈದು ವರ್ಷದ್ದು. ಓಂ ಅನ್ನೋ ಸಿನಿಮಾದಲ್ಲಿ ಒಂದಾದ ಈ ಜೋಡಿ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿತ್ತು. ಇಬ್ಬರು ಸೇರಿ ಪ್ರೀತ್ಸೆ ಮತ್ತು ಲವ ಕುಶ ಅನ್ನೋ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಾಲು-ಜೇನಿನಂತ ಸ್ನೇಹ ಇವರಿಬ್ಬರದ್ದು.ಆದರೆ ಈಗ ಒಂದು ಸಂದರ್ಭ ಎದುರಾಗಿದೆ ಶಿವಣ್ಣ ನಟನೆಯ ಸಿನಿಮಾ ಹಾಗೂ ಉಪ್ಪಿ ನಟನೆಯ ಸಿನಿಮಾ ಒಂದೇ ದಿನ ತೆರೆಕಾಣುವ ಸಾಧ್ಯತೆ ಇದೆ.

ಆರ್.ಚಂದ್ರು ಪರಿಕಲ್ಪನೆಯ ಐ ಲವ್ ಯು ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ತಾರವಾಗಲು ಸಜ್ಜಾಗಿದೆ. ಐ ಲವ್ ಯು ಸಿನಿಮಾದಂತೆ ಫೇಮಸ್ ಫೈಟ್ ಮಾಸ್ಟರ್ ರವಿವರ್ಮ ಫಸ್ಟ್ ಟೈಮ್ ನಿರ್ದೇಶಿಸಿರುವ ರುಸ್ತುಂ ಕೂಡ ಜೂನ್ 14ರಂದೇ ತೆರೆಕಾಣಲಿದೆ ಎನ್ನಲಾಗುತ್ತಿದೆ.

ಐ ಲವ್ ಯು ಮತ್ತು ರುಸ್ತುಂ ಎರಡು ಸಿನಿಮಾಗಳ ಹಿಂದೆ ಸಾಕಷ್ಟು ಪರಿಶುದ್ಧ ಪರಿಶ್ರಮವಿದೆ. ಎರಡು ಚಿತ್ರಗಳ ಟ್ರೈಲರ್ಸ್​​ಗಳು ನೋಡುಗರನ್ನು ಇಂಪ್ರೆಸ್ ಮಾಡಿವೆ. ಎಲೆಕ್ಷನು, ಎಗ್ಸಾಮೂ, ಐಪಿಎಲ್​, ವಲ್ಡ್​​ಕಪ್ ಅಂತೆಲ್ಲ ರಿಲೀಸ್​ ಮುಂದುಡಿಕೊಂಡು ಬಂದಿವೆ ಅನೇಕ ಕನ್ನಡ ಸಿನಿಮಾಗಳು. ಈಗ ಜೂನ್ ಜುಲೈ ಆಗಸ್ಟ್ ತಿಂಗಳು ಅನೇಕ ಸಿನಿಮಾಗಳು ಥಿಯೇಟರ್​ ಮುಂದೆ ಕ್ಯೂವ್ ನಿಲ್ಲಲಿವೆ.. ಅದರ ಝಲಕ್ ಐಲವ್​ಯು ಮತ್ತು ರುಸ್ತುಂ ಎಂದು ಅಂದಾಜಿಸಬಹುದು.

ಒಂದು ವೇಳೆ ಶಿವಣ್ಣ ಮತ್ತು ಉಪ್ಪಿ ನಟನೆಯ ಎರಡು ಸಿನಿಮಾಗಳು ಒಟ್ಟೊಟ್ಟಿಗೆ ಬಂದರೆ ಎನಾದ್ರು ಸಮಸ್ಯೆ ಆಗ್ತಾವ.ಅಥವಾ ಇಬ್ಬರು ಪ್ರೋಡ್ಯೂಸರ್ಸ್ ಒಪ್ಪಂದ ಮಾಡ್ಕೊಂಡು ನಾವು ಫಸ್ಟು ನೀವೂ ಸೆಕೆಂಡು ಅಂತ ಒಪ್ಪಂದ ಮಾಡಿಕೊಳಬಹುದಾ..? ಇಂತಹ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ಮನೋರಂಜನೆ ಕಾದಿದೆ.

Comments are closed.