ಬೆಂಗಳೂರು: ಇಂದು ತೆಲುಗು ನಟ ವಿಜಯ್ ದೇವರಕೊಂಡ ಅವರ ಹುಟ್ಟುಹುಬ್ಬ. ಈ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಡಿಯರ್ ಬಾಬಿ ಎಂದು ಕರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ.
ನಟಿ ರಶ್ಮಿಕಾ ಅವರು ಟ್ವೀಟ್ ಮಾಡುವ ಮೂಲಕ ವಿಜಯ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. “ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ” ಎಂದು ಬರೆದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ರಶ್ಮಿಕಾ ಹುಟ್ಟುಹಬ್ಬಕ್ಕೂ ವಿಜಯ್ ದೇವರಕೊಂಡ ಸ್ಪೆಷಲ್ ಆಗಿ ವಿಶ್ ಮಾಡಿದ್ದರು. ಈಗ ಅವರ ಬರ್ತ್ ಡೇಗೆ ರಶ್ಮಿಕಾ ಶುಭ ಕೋರಿದ್ದಾರೆ. ಅಸಲಿಗೆ ಇವರಿಬ್ಬರು ಅಭಿನಯಿಸುತ್ತಿರುವ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಬರುವ ಪಾತ್ರಗಳ ಹೆಸರಾಗಿದೆ. ಅಂದರೆ ಚಿತ್ರದಲ್ಲಿ ದೇವರಕೊಂಡ ಬಾಬಿ ಎಂದು ಹಾಗೂ ರಶ್ಮಿಕಾ ಲಿಲ್ಲಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
‘ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಈ ಜೋಡಿ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿತ್ತು. ವಿಜಯ್ ದೇವರಕೊಂಡ ‘ನುವ್ವಿಲಾ’ ಸಿನಿಮಾದ ಮೂಲಕ ಸಿನಿರಂಗ ಪ್ರವೇಶ ಮಾಡಿದ್ದರು. ನಂತರ ‘ಪೆಳ್ಳಿ ಚೂಪುಲು’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದರು.
Comments are closed.