ಬೆಂಗಳೂರು: ತರುಣ್ ಸುಧೀರ್ ಮತ್ತು ದರ್ಶನ್ ಡೆಡ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ . ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಬಹುಕೋಟಿ ವೆಚ್ಚದ ಈ ಸಿನಿಮಾಕ್ಕೆ ಸದ್ಯ ನಾಯಕಿಯ ಹುಡುಕಾಟ ನಡೆಯುತ್ತಿದೆ.
ಮುಂದಿನ ವಾರದಿಂದಲೇ ರಾಬರ್ಟ್ ಸಿನಿಮಾ ಶೂಟಿಂಗ್ ನಡೆಯಲಿದ್ದು, ಈಗಾಗಲೇ ಚಿತ್ರಕ್ಕಾಗಿ ಬಹುಕೋಟಿ ವೆಚ್ಚದ ಸೆಟ್ ನಿರ್ಮಾಣ ಮಾಡಲಾಗಿದೆ. ಆದ್ರೆ ಸಿನಿಮಾ ನಾಯಕಿಯ ಬಗ್ಗೆ ಸಿಕ್ಕಾಪಟ್ಟೆ ರೂಮರ್ಸ್ ಹಬ್ಬುತ್ತಿದ್ದು, ತರುಣ್ ಸುಧೀರ್ ಇದಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.
ರಾಬರ್ಟ್ ಸಿನಿಮಾದಲ್ಲಿ ಐಶ್ ನಟಿಸೋದಿಲ್ಲ ಎಂದು ಚಿತ್ರತಂಡ ಹೇಳಿದ್ದು , ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿ ಸುಳ್ಳು ಅಂತ ತರುಣ್ ಸುಧೀರ್ ಸ್ಪಷ್ಟನೆ ನೀಡಿದ್ದಾರೆ. ಶೀಘ್ರದಲ್ಲೇ ರಾಬರ್ಟ್ ಚಿತ್ರದ ನಾಯಕಿಯನ್ನ ಘೋಷಿಸೋದಾಗಿ ಹೇಳಿದ್ದು, ಗಾಳಿಸುದ್ದಿಯನ್ನ ನಂಬಬೇಡಿ ಅಂತ ತರುಣ್ ಸುಧೀರ್ ಮನವಿ ಮಾಡಿದ್ದಾರೆ.
Comments are closed.