ಮನೋರಂಜನೆ

ನಿರ್ದೇಶಕ ವಿಗ್ನೇಶ್ ಜೊತೆ ನಟಿ ನಯನತಾರಾ ನಿಶ್ಚಿತಾರ್ಥ!

Pinterest LinkedIn Tumblr


ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ದೇಶಕ ವಿಗ್ನೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಯನತಾರಾ ತನ್ನ ಬಹುದಿನದ ಗೆಳೆಯ, ನಿರ್ದೇಶಕ ವಿಗ್ನೇಶ್ ಶಿವನ್ ಜೊತೆ ಕೆಲವೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅಲ್ಲದೆ 2020ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‍ನಲ್ಲಿ ಹರಿದಾಡುತ್ತಿದೆ.

ನಯನತಾರಾ ಹಾಗೂ ವಿಗ್ನೇಶ್ ಕುಟುಂಬದವರು ಇವರಿಬ್ಬರು ಬೇಗ ಮದುವೆ ಆಗಲಿ ಎಂದು ಅಭಿಮಾನಿಗಳು ಇಚ್ಛಿಸುತ್ತಿದ್ದಾರೆ. ನಯನತಾರಾ ಗೆಳೆಯ ವಿಗ್ನೇಶ್ ಜೊತೆ ಹಲವು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಹಾಲಿ ಡೇ ಟ್ರಿಪ್ ಸಹ ಎಂಜಾಯ್ ಮಾಡಿದ್ದಾರೆ.

ಇಬ್ಬರು ನಿಶ್ಚಿತಾರ್ಥ ಆಗುತ್ತಿರುವ ವಿಷಯ ಕಾಲಿವುಡ್‍ನಲ್ಲಿ ಸದ್ಯ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಯನತಾರಾ ಆಗಲಿ ವಿಗ್ನೇಶ್ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ಸದ್ಯ ನಯನತಾರಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ‘ದರ್ಬಾರ್’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜೊತೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Comments are closed.