ಮನೋರಂಜನೆ

ವಿರಾಟ್ ಕೊಹ್ಲಿಯಿಂದ ಪತ್ನಿ ಅನುಷ್ಕಾರ ಹುಟ್ಟುಹಬ್ಬ ರೊಮ್ಯಾಂಟಿಕ್ ಆಗಿ ಆಚರಣೆ!

Pinterest LinkedIn Tumblr


ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಹುಟ್ಟುಹಬ್ಬವನ್ನು ರೊಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.

ಬುಧವಾರ ಅನುಷ್ಕಾ ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಈ ವೇಳೆ ಪತಿ ವಿರಾಟ್, ಅನುಷ್ಕಾ ಜೊತೆ ಕಳೆದ ಸುಂದರ ಕ್ಷಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅನುಷ್ಕಾ ಹುಟ್ಟುಹಬ್ಬದ ಆಚರಣೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ವಿರಾಟ್ ಹಾಗೂ ಅನುಷ್ಕಾ ಕರೆಯ ನೀರಿನ ಮೇಲೆ ಕುಳಿತು ಮಾತನಾಡುತ್ತಿದ್ದಾರೆ. ಅಲ್ಲದೆ ಸನ್‍ಸೆಟ್ ಮಧ್ಯದಲ್ಲಿ ಕುಳಿತು ಇಬ್ಬರು ರೊಮ್ಯಾಂಟಿಕ್ ಕ್ಷಣಗಳನ್ನು ಕಳೆದಿದ್ದಾರೆ. ಫೋಟೋದಲ್ಲಿ ಅನುಷ್ಕಾ, ವಿರಾಟ್ ಭುಜದ ಮೇಲೆ ಮಲಗಿದ್ದಾರೆ.

ಡಿಸೆಂಬರ್ 11, 2017 ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಅನುಷ್ಕಾ ಶರ್ಮಾ ಕೊನೆಯದಾಗಿ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನಟಿಸಿದ ‘ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಅವರು ಬೇರೆ ಯಾವ ಚಿತ್ರ ಕೂಡ ಒಪ್ಪಿಕೊಂಡಿಲ್ಲ. ಈ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಕೂಡ ಅಭಿನಯಿಸಿದ್ದು, ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿರಲಿಲ್ಲ.

Comments are closed.