ಮನೋರಂಜನೆ

ತಮಿಳಿಗರಿಗೆ ವಿಲನ್ ಆದ ಶಾರುಖ್ ಖಾನ್!

Pinterest LinkedIn Tumblr


ನಟ ಶಾರುಖ್​ ಖಾನ್ ಕೇವಲ ನಟನಾಗಿ ಮಾತ್ರವಲ್ಲ ವಿಲನ್​ ಆಗಿಯೂ ಗುರುತಿಸಿಕೊಂಡಿದ್ದಾರೆ. ಹಿಂದಿಯ ‘ಡಾನ್​’ ಚಿತ್ರದಲ್ಲಿ ಅವರು ನೆಗೆಟಿವ್​ ಶೆಡ್​ ಪಾತ್ರ ನಿರ್ವಹಿಸಿದ್ದರು. ಈಗ ಮತ್ತೆ ಅವರು ಇಂಥದ್ದೇ ಪಾತ್ರಕ್ಕೆ ಬಣ್ಣ ಹಚ್ಚ ಹೊರಟಿದ್ದಾರೆ. ಅದೂ ಕಾಲಿವುಡ್​ನಲ್ಲಿ!

ಶಾರುಖ್​ ಖಾನ್​ ತಮಿಳು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎನ್ನುವ ವರದಿ ಹರಿದಾಡುತ್ತಿದೆ. ವಿಶೇಷ ಎಂದರೆ, ಶಾರುಖ್​ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿರುವುದು ಕಾಲಿವುಡ್​ನ ಸ್ಟಾರ್​ ನಟ ‘ದಳಪತಿ’ ವಿಜಯ್​ಗೆ!

ವಿಜಯ್​ 63ನೇ ಸಿನಿಮಾಗೆ ವಿಲನ್​ ಹುಡುಕಾಟದಲ್ಲಿದ್ದಾರೆ ನಿರ್ದೇಶಕ ಅಟ್ಲೀ ಕುಮಾರ್​. ಈ ಚಿತ್ರದಲ್ಲಿ ಬರುವ ಪ್ರಮುಖ ವಿಲನ್​ ಕ್ಲೈಮ್ಯಾಕ್ಸ್​​ನಲ್ಲಿ ಕಾಣಿಸಿಕೊಳ್ಳಲಿದ್ದಾನಂತೆ. “ಬಾಲಿವುಡ್​ನ ನಟನನ್ನು ವಿಲನ್​ ಆಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ ಚಿತ್ರತಂಡದ್ದು. ಈ ವಿಲನ್​ ಪಾತ್ರ 15 ನಿಮಿಷ ತೆರೆಮೇಲೆ ಬರಲಿದೆ. ಈಗಾಗಲೇ ಶಾರುಖ್​ ಖಾನ್​ ಅವರನ್ನು ಸಂಪರ್ಕಿಸಿದ್ದು ಅವರು ಒಪ್ಪಿದ್ದಾರೆ,” ಎಂಬುದು ಮೂಲಗಳ ಮಾಹಿತಿ.

ಶಾರುಖ್​ ಇರುವ ದೃಶ್ಯಗಳನ್ನು ಐದು ದಿನಗಳ ಕಾಲ ಶೂಟ್​ ಮಾಡಲಾಗುತ್ತದೆಯಂತೆ. ಮುಂಬೈ ಅಥವಾ ಚೆನ್ನೈನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಐಪಿಎಲ್​ ಮ್ಯಾಚ್​ ವೇಳೆ ಶಾರುಖ್​ ಹಾಗೂ ನಿರ್ದೇಶಕ ಅಟ್ಲೀ ಕುಮಾರ್​ ಅಕ್ಕಪಕ್ಕ ಕೂತಿದ್ದರು. ಈ ಗಾಸಿಪ್​ ಹರಿದಾಡಲು ಇದು ಕೂಡ ಕಾರಣ ಎನ್ನಲಾಗುತ್ತಿದೆ. ಅಂದಹಾಗೆ, ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಬೇಕಿದೆ.

ಶಾರುಖ್​ ನಟನೆಯ ಸಾಲು ಸಾಲು ಚಿತ್ರಗಳು ಫ್ಲಾಪ್​ ಆಗುತ್ತಿವೆ. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡ ‘ಝೀರೋ’ ಚಿತ್ರ ಫ್ಲಾಪ್​ ಆಗಿತ್ತು. ತಮಿಳಿನಲ್ಲಿ ತೆರೆಕಂಡಿದ್ದ ‘ಮರ್ಸೆಲ್​’ ಚಿತ್ರ ಹಿಂದಿಗೆ ರಿಮೇಕ್​ ಆಗುತ್ತಿದ್ದು, ಇದರಲ್ಲಿ ಶಾರುಖ್​ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

Comments are closed.