ಮನೋರಂಜನೆ

ಮಂಗಳಮುಖಿಯರ ಜೊತೆ ಹೆಜ್ಜೆ ಹಾಕಿದ ಸ್ಯಾಂಡಲ್​ವುಡ್​ ಸ್ವೀಟಿ ರಾಧಿಕಾ ಕುಮಾರಸ್ವಾಮಿ!

Pinterest LinkedIn Tumblr


ಸ್ಯಾಂಡಲ್​ವುಡ್​ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಲಾಂಗ್​ ಗ್ಯಾಪ್​ ನಂತ್ರ ಭೈರಾದೇವಿ ಅವತಾರ ತಾಳಿರೋದು ಗೊತ್ತೇಯಿದೆ..ಮೊನ್ನೆಮೊನ್ನೆಯಷ್ಟೇ ಶಾಂತಿನಗರದ ಸ್ಮಶಾನದಲ್ಲಿ ಶೂಟಿಂಗ್ ಮಾಡೋ ವೇಳೆ ಅವಘಡ ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ ಮತ್ತದೇ ಸ್ಮಶಾನದಲ್ಲಿ ಬೀಡು ಬಿಟ್ಟಿದ್ದಾರೆ.

ಭೈರಾದೇವಿ..ಫಸ್ಟ್ ಲುಕ್​ ಪೋಸ್ಟರ್ ಮತ್ತು ಟೀಸರ್​ನಿಂದ್ಲೇ ಸ್ಯಾಂಡಲ್​ವುಡ್​ನಲ್ಲಿ ಕುತೂಹಲ ಮೂಡಿಸಿರೋ ಸಿನಿಮಾ. ರುದ್ರತಾಂಡವ ಸಿನಿಮಾ ನಂತ್ರ ಲಾಂಗ್ ಗ್ಯಾಪ್ ಆದ್ಮೇಲೆ ರಾಧಿಕಾ ಕುಮಾರಸ್ವಾಮಿ ಬಣ್ಣ ಹಚ್ಚಿದ್ದು, ಬೈರಾದೇವಿ ಸಾಕಷ್ಟು ಕುತೂಹಲ ಕೆರಳಿಸಿದೆ..ಈಗಾಗ್ಲೇ ಟಾಕಿ ಪೋರ್ಶನ್ ಕಂಪ್ಲೀಟ್ ಮಾಡಿರೋ ಭೈರಾದೇವಿ ಚಿತ್ರತಂಡ ಸದ್ಯ ಹಾಡುಗಳು ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

ಮಧ್ಯರಾತ್ರಿ ಸ್ಮಶಾನದಲ್ಲಿ ಹೇಗಿದೆ ಗೊತ್ತಾ ಕಾಳಿಯ ರೌದ್ರನರ್ತನ..?

ಮಂಗಳಮುಖಿಯರ ಮಧ್ಯೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ರಾಧಿಕಾ..!!

ಮೊನ್ನೆಮೊನ್ನೆಯಷ್ಟೇ ಶಾಂತಿನಗರದ ಹಿಂದೂ ರುದ್ರಭೂಮಿಯಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಾಧಿಕಾ ಕುಮಾರಸ್ವಾಮಿ , ಶೂಟಿಂಗ್​ ವೇಳೆ ಕಾಲು ಜಾರಿ ಬಿದ್ದು, ಬೆನ್ನಿಗೆ ಪೆಟ್ಟು ಬಿದ್ದು,ಕೆಲ ದಿನಗಳ ಕಾಲ ರೆಸ್ಟ್​ನಲ್ಲಿದ್ರು..ಆದ್ರೀಗ ಕಂಪ್ಲೀಟ್ ಆಗಿ ಫಿಟ್ ಅಂಡ್ ಫೈನ್ ಆಗಿರೋ ಸ್ವೀಟಿ ಮತ್ತೆ ಅದೇ ಸ್ಮಶಾನದಲ್ಲಿ ಚಿತ್ರೀಕರಣ ಮಾಡ್ತಿದ್ದಾರೆ.

ಶಾಂತಿನಗರದ ಸ್ಮಶಾನದಲ್ಲಿ ನಿನ್ನೆಯಿಂದ್ಲೇ ಚಿತ್ರದ ಹಾಡಿನ ಚಿತ್ರೀಕರಣ ಶುರುವಾಗಿದೆ. ಭೈರಾದೇವಿ ಚಿತ್ರದಲ್ಲಿ ರಾಧಿಕಕುಮಾರಸ್ವಾಮಿ ಅಘೋರಿ ಮತ್ತು ಕಾಳಿಯಾಗಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ತಿದ್ದು,ಇದೀಗ ಕಾಳಿ ಗೆಟಪ್​ನಲ್ಲಿ ಸ್ಮಶಾನದಲ್ಲಿ ರುದ್ರನರ್ತನ ಶುರುವಿಟ್ಕೊಂಡಿದ್ದಾರೆ.ಅಂದ್ಹಾಗೇ ಇದು ಚಿತ್ರದಲ್ಲಿ ಬರೋ ಪ್ರಮುಖ ಹಾಡಾಗಿದ್ದು, ಅಮವ್ಯಾಸೆ ದಿನ ಮಂಗಳಮುಖಿಯರೆಲ್ಲಾ ಸೇರಿ ಸ್ಮಶಾನ ಹಬ್ಬ ಅಂತ ಮಾಡ್ತಾರೆ..ಅದೇ ಕಾನ್ಸೆಪ್ಟ್​ ಚಿತ್ರದಲ್ಲೂ ಇರೋದ್ರಿಂದ ಈ ಹಾಡನ್ನ ಚಿತ್ರೀಕರಣ ಮಾಡಲಾಗ್ತಿದೆ.

ಇನ್ನು ಈ ಹಾಡಿಗೆ ಮೋಹನ್ ಕೊರಿಯೊಗ್ರಫಿ ಮಾಡ್ತಿದ್ದು,ಸ್ಮಶಾನದಲ್ಲಿ ಕಾಳಿ ಮಾತೆಯ ಬ್ಯಾಕ್​ಡ್ರಾಪ್​ನಲ್ಲಿ, ಸುತ್ತಲೂ ಕಲರ್​ಪುಲ್​ ಲೈಟಿಂಗ್​ನಲ್ಲಿ ಸಾಂಗ್​ ಶೂಟ್ ಮಾಡಲಾಗ್ತಿದೆ..ವಿಶೇಷ ಅಂದ್ರೆ ಈ ಹಾಡಿನಲ್ಲಿ ಸುಮಾರು 600 ಜನ ಹೆಜ್ಜೆ ಹಾಕ್ತಿದ್ದಾರೆ..ರಾಧಿಕಾಕುಮಾರಸ್ವಾಮಿ ಜೊತೆಗೆ 350 ಜನ ಜೂನಿಯರ್ ಆರ್ಟಿಸ್ಟ್, 40 ಫಿಮೇಲ್ ಡಾನ್ಸರ್ಸ್​, 60 ಮೇಲ್​ ಡಾನ್ಸರ್ಸ್​,30 ಜನ ಮಂಗಳಮುಖಿಯರು, ಡೋಲು ಬಾರಿಸೋರು,ಹೀಗೆ ಒಟ್ಟಾರೆ 600 ಜನರನ್ನ ಒಂದೇ ಫ್ರೇಮ್​ನಲ್ಲಿ ಸೆರೆಹಿಡಿಯಲಾಗ್ತಿದೆ.

ಇನ್ನು ಇಡೀ ಹಾಡಿನಲ್ಲಿ ರಾಧಿಕಾ ಕುಮಾರಸ್ವಾಮಿ ಕಾಳಿ ಅವತಾರದಲ್ಲೇ ಹೆಜ್ಜೆ ಹಾಕ್ತಿದ್ದು,ಮುಖಕ್ಕೆ ನೀಲಿ ಬಣ್ಣ, ಕಣ್ಣಿಗೆ ದಪ್ಪನೆಯ ಕಾಡಿಗೆ, ಮೈ ಮೇಲೆ ನಿಂಬೆ ಹಣ್ಣಿನ ಹಾರ . ಕೈಯ್ಯಲ್ಲಿ ತ್ರಿಶೂಲ ಹಿಡಿದು ಥೇಟ್ ಕಾಳಿಮಾತೆಯ ಪ್ರತಿರೂಪದಲ್ಲಿ ಕಾಣಿಸಿಕೊಂಡಿದ್ದಾರೆ..ಹೀಗೆ ರಾಧಿಕಾ ಕುಮಾರಸ್ವಾಮಿಯವ್ರನ್ನ ರೆಡಿಮಾಡೋಕ್ಕೆ ಸುಮಾರು 4 ರಿಂದ5 ಗಂಟೆಗಳು ಬೇಕಾಗುತ್ತೆ..ಅಷ್ಟೇ ಅಲ್ಲಾ ಸುಮಾರು 600 ಜನಕ್ಕೆ ಮೇಕಪ್ ಮಾಡಿಸಲು 40 ರಿಂದ 50 ಮೇಕಪ್​ ಆರ್ಟಿಸ್ಟ್ ಗಳು ಕೆಲಸ ಮಾಡ್ತಿದ್ದಾರೆ. ಈ ಹಾಡು ಅದ್ದುರಿಯಾಗಿ ಮೂಡಿಬರ್ಬೇಕು ಅಂತ್ಲೇ ಸಾಕಷ್ಟು ಹಣ ಖರ್ಚು ಮಾಡಲಾಗ್ತಿದೆ.

ಇನ್ನು ಕಾಳಿ ಮಾತೆ ಮೇಲೆ ಬರೆದಿರೋ ಈ ಹಾಡಿಗೆ ನಿರ್ದೇಶಕ ಶ್ರೀ ಜೈ ಸಾಹಿತ್ಯ ಬರೆದಿದ್ದು,ಸೂರಜ್ ಮ್ಯೂಸಿಕ್ ಮಾಡಿದ್ದಾರೆ..ಅಂದ್ಹಾಗೇ ಈ ಚಿತ್ರಕ್ಕೆ ಜಗದೀಶ್ ವಾಲಿ ಕ್ಯಾಮರ ಕೈಚಳಕ ಇದೆ.

ಒಟ್ನಲ್ಲಿ ದಿನದಿಂದ ದಿನಕ್ಕೆ ಸ್ಯಾಂಡಲ್​ವುಡ್​ನಲ್ಲಿ ಭೈರಾದೇವಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗ್ತಾನೆ ಇದೆ…ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದ್ದು,ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್​ ಶುರುವಾಗಲಿದೆ..ಎಲ್ಲಾ ಅಂದುಕೊಂಡಂತೆ ಆದ್ರೆ ಜೂನ್​ ತಿಂಗಳಲ್ಲಿ ತೆರೆಮೇಲೆ ಭೈರಾದೇವಿಯ ದರ್ಶನವಾಗಲಿದೆ.

Comments are closed.