ಮನೋರಂಜನೆ

ದಬಾಂಗ್-3ನಲ್ಲಿ ಸುದೀಪ್ ಪಾತ್ರ ಬಹಿರಂಗ!

Pinterest LinkedIn Tumblr


ಬೆಂಗಳೂರು: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3ರಲ್ಲಿ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್ ನಟಿಸುತ್ತಿರೋದು ಗೊತ್ತಿರುವ ವಿಷಯ. ಯಾವ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬುದನ್ನ ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸುದೀಪ್ ದಬಾಂಗ್ ಫಿಲಂನಲ್ಲಿ ಸಿಖಂದರ್ ಭಾರಧ್ವಜ್ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ರಿವೀಲ್ ಆಗಿದೆ.

ಮೊದಲ ಹಂತದ ಚಿತ್ರೀಕರಣ ಮತ್ತು ಟೈಟಲ್ ಹಾಡಿನ ಶೂಟಿಂಗ್ ಮುಕ್ತಾಯಗೊಳಿಸಿರುವ ಚಿತ್ರತಂಡ ಆ್ಯಕ್ಷನ್ ಸೀನ್‍ಗಳನ್ನು ಶೂಟ್ ಮಾಡುತ್ತಿದೆ. ಸುದೀಪ್ ಸಹ ಕೆಲವೇ ದಿನಗಳಲ್ಲಿ ದಬಾಂಗ್ ಟೀಂ ಸೇರಿಕೊಳ್ಳಲಿದ್ದಾರೆ. ಮೊದಲ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದವು. ಇದೀಗ ಮೂರನೇ ಭಾಗದಲ್ಲಿ ಮತ್ತೊಮ್ಮೆ ಘರ್ಜಿಸಲು ಚುಲ್ ಬುಲ್ ಪಾಂಡೆ ಶೀಘ್ರದಲ್ಲಿ ಬರೋದು ಖಚಿತವಾಗಿದೆ.

ನಾಯಕಿಯಾಗಿ ಮೂರನೇ ಚಿತ್ರದಲ್ಲಿಯೂ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳಲಿದ್ದಾರೆ. ಮೊದಲೆರೆಡು ಸಿನಿಮಾಗಳ ಐಟಂ ಹಾಡುಗಳು ಸಹ ಚಿತ್ರದ ಜೊತೆ ಹಿಟ್ ಆಗಿದ್ದವು. ಮೂರನೇ ಚಿತ್ರದಲ್ಲಿ ಯಾವ ನಟಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ದಬಾಂಗ್-2ರಲ್ಲಿ ಸಹ ನಟ ಪಾತ್ರದಲ್ಲಿ ಕನ್ನಡಿಗ ಪ್ರಕಾಶ್ ರೈ ನಟಿಸಿದ್ದರು.

Comments are closed.