ಮನೋರಂಜನೆ

ಉರಿ ಚಿತ್ರದ ಹೀರೋ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲು

Pinterest LinkedIn Tumblr


ಮುಂಬೈ: ಉರಿ ಚಿತ್ರದ ಖ್ಯಾತಿಯ ನಟ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ವಿಕ್ಕಿ ಮೇಲೆ ಬಾಗಿಲು ಬಿದ್ದಿದ್ದರಿಂದ ಗದ್ದದ ಭಾಗ(Cheek Bone)ದಲ್ಲಿ 13 ಹೊಲಿಗೆ ಹಾಕಲಾಗಿದೆ ಎಂದು ವರದಿಯಾಗಿದೆ.

ಭಾನು ಪ್ರತಾಪ್ ನಿರ್ದೇಶನದ ಹಾರರ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಈ ಘಟನೆ ನಡೆದಿದೆ. ಕಳೆದ ಐದು ದಿನಗಳಿಂದ ಗುಜರಾತಿನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತಿತ್ತು. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕೂಡಲೇ ವಿಕ್ಕಿ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಿನಿಮಾ ಹೊರತಾಗಿ ಆದಿತ್ಯ ನಿರ್ದೇಶನದ ಆ್ಯಕ್ಷನ್ ಸಿನಿಮಾಗೆ ವಿಕ್ಕಿ ಸಹಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಸೂಪರ್ ಹೀರೋ ಪಾತ್ರದಲ್ಲಿ ನಟಿಸಲಿದ್ದಾರೆ. ಕರಣ್ ಜೋಹರ್ ನಿರ್ಮಾಣದ ‘ತಖ್ತ್’ ಸಿನಿಮಾದಲ್ಲಿ ರಣ್‍ವೀರ್ ಸಿಂಗ್ ಜೊತೆ ವಿಕ್ಕಿ ಕೌಶಲ್ ತೆರೆ ಹಂಚಿಕೊಳ್ಳಲಿದ್ದಾರೆ. ತಖ್ತ್ ಚಿತ್ರದಲ್ಲಿ ಆಲಿಯಾ ಭಟ್, ಜಾಹ್ನವಿ ಕಪೂರ್, ಭೂಮಿ ಪಡ್ನೇಕರ್ ಮತ್ತು ಅನಿಲ್ ಕಪೂರ್ ಸಹ ನಟಿಸುತ್ತಿದ್ದಾರೆ.

Comments are closed.