ಕ್ರೀಡೆ

ಪಾಕ್‌ ಕ್ರಿಕೆಟ್ ಆಟಗಾರರ ಜತೆ ಅವರ ಹೆಂಡತಿಯರ ಪ್ರಯಾಣವಿಲ್ಲ!

Pinterest LinkedIn Tumblr


ಕರಾಚಿ: ಐಸಿಸಿ ಏಕದಿನ ವಿಶ್ವಕಪ್‌ ವೇಳೆ ಪಾಕಿಸ್ತಾನ ಕ್ರಿಕೆಟ್‌ ತಂಡ ಪತ್ನಿ ಹಾಗೂ ಇತರ ಕುಟುಂಬ ಸದಸ್ಯರನ್ನು ಕರೆದೊಯ್ಯುವಂತಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆದೇಶಿಸಿದೆ.

ತಂಡದ ನಾಯಕ ಸರ್ಫರಾಜ್‌ ಅಹ್ಮದ್‌ ಕುಟುಂಬ ಸದಸ್ಯರ ಜತೆಯಲ್ಲಿ ಪ್ರಯಾಣ ಮಾಡಲು ಮಾಡಿದ್ದ ಮನವಿಯನ್ನು ಪಿಸಿಬಿ ತಿರಸ್ಕರಿಸಿದೆ. ಬಿಸಿಸಿಐ ಕೂಡಾ ವಿಶ್ವಕಪ್‌ ವೇಳೆ ಭಾರತೀಯ ಆಟಗಾರರಿಗೆ ಪತ್ನಿ ಹಾಗೂ ಇತರ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಅನುಮತಿ ನಿರಾಕರಿಸಲಿದೆ ಎನ್ನಲಾಗಿದೆ.

ಸರ್ಫರಾಜ್ ಅಹಮ್ಮದ್ ನೇತೃತ್ವದ ಪಾಕಿಸ್ತಾನ ತಂಡವು ಮೇ.31ರಂದು ನಾಟಿಂಗ್’ಹ್ಯಾಂನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್’ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

Comments are closed.