ಮನೋರಂಜನೆ

ಮೇ 5ರಂದು ಗರ್ಭಿಣಿಯಾಗಿರುವ ಬ್ರಿಟಿಷ್ ಬ್ಯೂಟಿ ನಟಿ ಆಮಿ ಜಾಕ್ಸನ್ ನಿಶ್ಚಿತಾರ್ಥ

Pinterest LinkedIn Tumblr


ಮುಂಬೈ: ಬ್ರಿಟಿಷ್ ಬ್ಯೂಟಿ ನಟಿ ಆಮಿ ಜಾಕ್ಸನ್ ಅವರು ಮೇ 5ರಂದು ಲಂಡನ್‍ನಲ್ಲಿರುವ ಅವರ ಮನೆಯಲ್ಲೇ ತಮ್ಮ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಆಮಿ 2019 ಜನವರಿ 1ರಂದು ತಮ್ಮ ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಈಗ ಮೇ 5ರಂದು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಜೋಡಿ 2020ಕ್ಕೆ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ನಟಿ ಆಮಿ ಜಾಕ್ಸನ್ ಅವರು ತಾವು ಮಗುವಿಗಾಗಿ ಕಾಯುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಮಾರ್ಚ್ 31 ರಂದು ಯುಕೆಯಲ್ಲಿ ತಾಯಂದಿರ ದಿನವನ್ನಾಗಿ ಆಚರಿಸುತ್ತಾರೆ. ಹೀಗಾಗಿ ಅಂದಿನ ದಿನವೇ ನಟಿ ಆಮಿ ತಾವು ತಾಯಿಯಾಗುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

“ನಾನು ನನ್ನ ಸಂತೋಷವನ್ನು ಗಟ್ಟಿಯಾದ ಧ್ವನಿಯಲ್ಲೇ ಕೂಗಿ ಹೇಳಲು ಕಾಯುತ್ತಿದ್ದೇನೆ. ಇಂದು ತಾಯಂದಿರ ದಿನವಾಗಿದೆ. ಹೀಗಾಗಿ ಇದಕ್ಕಿಂತ ಒಳ್ಳೆಯ ಸಮಯ ಸಿಗುವುದಿಲ್ಲ. ನಾನು ಈಗಾಗಲೇ ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಇದು ಪ್ರಾಮಾಣಿಕ ಪ್ರೀತಿಯಾಗಿದ್ದು, ನಾವು ನಿನ್ನನ್ನು ಭೇಟಿ ಮಾಡಲು ಕಾತರದಿಂದ ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಆಮಿ ತಾವು ಮಗುವಿನ ನಿರೀಕ್ಷೆಯಲ್ಲಿರುವುದನ್ನು ಬಹಿರಂಗಗೊಳಿಸಿದ್ದರು.

ನಟಿ ಆಮಿ ಜಾಕ್ಸನ್ ಅವರು ಸ್ಯಾಂಡಲ್‍ವುಡ್ ನಲ್ಲಿ ಪ್ರೇಮ್ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅಭಿನಯದ `ದಿ ವಿಲನ್’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

Comments are closed.