ಸ್ಯಾಂಡಲ್‍ವುಡ್ ಕಿರಿಕ್ ನಟಿ ಸಂಯುಕ್ತ ಹೆಗಡೆ ಬೀಚ್‍ನಲ್ಲಿ ತನ್ನ ವಿದೇಶಿ ಗೆಳೆಯನ ಜೊತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಯುಕ್ತ ಹೆಗಡೆ ವಿದೇಶಿ ಗೆಳೆಯ ಜೊತೆ ಸಮುದ್ರದ ದಡದಲ್ಲಿ ತಲೆ ಕೆಳಗಾಗಿ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಸಂಯುಕ್ತ ಬಿಕಿನಿ ಧರಿಸಿದ್ದಾರೆ. ಅಲ್ಲದೆ ತಲೆ ಕೆಳಗೆ ಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ. ಇನ್ನು ಅವರ ಗೆಳೆಯ ತಲೆ ಕೆಳಗಾಗಿರುವ ಗೆಳತಿ ಸಂಯುಕ್ತರ ಕಾಲನ್ನು ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಕಲವರು ಸಂಯುಕ್ತ ಫೋಟೋ ನೋಡಿ ವಾಟ್ ಎ ಫಿಟ್ನೆಸ್, ಸೂಪರ್ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಸಂಯುಕ್ತ ಕನ್ನಡ ಚಿತ್ರರಂಗದ ಮಾನ ಮಾರ್ಯದೆ ತೆಗೆಯುತ್ತಿದ್ದಾರೆ ಎಂದು ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Comments are closed.