ಸಮಂತಾ ಹಾಗೂ ನಾಗ ಚೈತನ್ಯ ಜೋಡಿಯ ‘ಮಜಿಲಿ’ ಚಿತ್ರವು ಇಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮದುವೆಯಾದ ಬಳಿಕ ಮೊದಲ ಬಾರಿಗೆ ಗಂಡ-ಹೆಂಡತಿ ಸಮಂತಾ ಮತ್ತು ನಾಗ ಚೈತನ್ನ ಜೋಡಿ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರವನ್ನು ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಸಮಂತಾ ಮತ್ತು ನಾಗಚೈತನ್ಯ ಜೋಡಿಯ ಅಭಿನಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅದರಲ್ಲೂ ನಟಿ ಸಮಂತಾ ಅವರು ಹೆಚ್ಚಿನ ಸ್ಕೋರ್ ಪಡೆದಿದ್ದು, ಇಡೀ ಮಜಲಿ ಸಿನಿಮಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮಜಿಲಿ ಚಿತ್ರವು ವಿಮರ್ಶಕರ ಮೆಚ್ಚುಗೆ ಸಹ ಗಳಿಸಿಕೊಂಡಿದೆ. “ಈ ಮಜಿಲಿ ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ಮಾತುಗಳು, ಘಟನೆಗಳು ಹಾಗೂ ಸೆಂಟಿಮೆಂಟ್ ದೃಶ್ಯಗಳು ತುಂಬಿಕೊಂಡಿದ್ದು, ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ ಎಂಬ ಮೆಚ್ಚುಗೆ ಎಲ್ಲಾ ಕಡೆ ವ್ಯಕ್ತವಾಗಿದೆ. ಕಲಾವಿದರ ಒಳ್ಳೆಯ ಅಭಿನಯ ಹಾಗೂ ಸೂಕ್ತ ಹಿತಮಿತವಾದ ಸಂಗೀತದ ಮೂಲಕ ಮಜಿಲಿ ಚಿತ್ರವು ಸಾಕಷ್ಟು ಮೆಚ್ಚುಗೆ ಪಡೆದು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ.
ಲವ್ ಫೇಲ್ಯೂರ್ ಆದ ಪ್ರೇಮಿಗಳು ನೋಡಲೇಬೇಕಾದ ಸಿನಿಮಾ ಮಜಿಲಿ ಎನ್ನಲಾಗುತ್ತಿದೆ. ಲವ್ ಫೆಲ್ಯೂರ್ ಆದವರು ಕೂಡ ಹೇಗೆ ಮತ್ತೆ ಲೈಫನ್ನು ಸರಿ ಮಾಡಿಕೊಳ್ಳಬಹುದು ಎಂಬುದಕ್ಕೆ ಉತ್ತರ ಈ ಸಿನಿಮಾದಲ್ಲಿದೆ. ಭಗ್ನ ಪ್ರೇಮಿಗಳು ಈ ಸಿನಿಮಾವನ್ನು ನೋಡಿದ್ದೇ ಆದಲ್ಲಿ ಲೈಫ್ ಹಾಳು ಮಾಡಿಕೊಳ್ಳುವ ಬದಲು ಸರಿ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ನಾಗಚೈತನ್ಯ ಅವರ ಚೈಲ್ಡ್‌ಹುಡ್ ಫ್ರಂಡ್ ಆಗಿ ಬಾಲಿವುಡ್ ನಟಿ ದಿವ್ಯಾಂಶಾ ಕೌಶಿಕ್ ನಟಿಸಿದ್ದು, ಈ ಚಿತ್ರವು ಪ್ರೇಕ್ಷಕರ ಮನದಲ್ಲಿ ನೆಲೆ ನಿಲ್ಲಲಿರುವುದು ಖಂಡಿತ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ, ಇಂದು ಬಿಡುಗಡೆಯಾಗಿ ಯಸಸ್ಸಿನ ಹಾದಿಯಲ್ಲಿರುವ ಮಜಿಲಿ ಚಿತ್ರವು ಮದುವೆಯಾದ ಜೋಡಿ ಸಮಂತಾ ಮತ್ತು ನಾಗಚೈತನ್ಯ ಅಭಿಮಾನಿಗಳಿಗೆ ಹಬ್ಬದೂಟ ಬಡಿಸುತ್ತಿದೆ. ಈ ಚಿತ್ರವು ಸೂಪರ್ ಹಿಟ್ ದಾಖಲಿಸಿದರೆ, ಮುಂದೆ ಈ ಜೋಡಿ ಇನ್ನಷ್ಟು ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಬಹುದು.
Comments are closed.