ಮನೋರಂಜನೆ

ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಯುಗಾದಿಗೆ ಕೊಟ್ಟ ಸರ್ ಪ್ರೈಜ್ ಗಿಫ್ಟ್ ಏನು ಗೊತ್ತೇ…?

Pinterest LinkedIn Tumblr

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ ಪ್ರೈಜ್ ಗಿಫ್ಟ್ ಕಾದಿದೆ ಎಂದು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡುವ ಮೂಲಕ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದರು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಪ್ರಿಯಾ ಸುದೀಪ್ ತಮ್ಮ ಮಾತಿನಂತೆ ಸರ್ ಪ್ರೈಜ್ ಗಿಫ್ಟ್ ನೀಡಿದ್ದಾರೆ.

ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಚ್ಚ ಕ್ರಿಯೇಷನ್ಸ್ ಅಧಿಕೃತ ಯುಟ್ಯೂಬ್ ಚಾನಲ್ ಅನ್ನು ಅನಾವರಣಗೊಳಿಸಿದ್ದಾರೆ.

“ಕಿಚ್ಚ ಸುದೀಪ್ ಅವರ ಎಲ್ಲಾ ಸ್ನೇಹಿತರಿಗೆ ನಾನಿಂದು ಯುಗಾದಿಯ ಉಡುಗೊರೆ ನಿಡುತ್ತಿದ್ದೇನೆ, ಸುದೀಪ್ ಅವರನ್ನು ಇನ್ನಷ್ಟು ನಿಮ್ಮ ಹತ್ತಿರಕ್ಕೆ ತರುವುದಕ್ಕಾಗಿ ಕಿಚ್ಚ ಕ್ರಿಯೇಷನ್ಸ್ ಅಧಿಕೃತ ಯುಟ್ಯೂಬ್ ಚಾನಲ್ ಇಂದು ಪ್ರಾರಂಭವಾಗಿದೆ. ಇದಕ್ಕೆ ಸಬ್ ಸಕ್ರೈಬ್ ಆಗಿರಿ, ಕಿಚ್ಚ ಅಂದ್ರೆ ಕೃಷ್ಣ ತಾನೆ?” ವಿಡಿಯೋ ಜತೆಗೆ ಟ್ವೀಟ್ ಮಾಡಿ ಪ್ರುಯಾ ಸುದೀಪ್ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ಕಿಚ್ಚ ತನ್ನ ಪತ್ನಿಯನ್ನು ಅಭಿನಂದಿಸಿದ್ದಲ್ಲದೆ ಅಭಿಮಾನಿಗಳಿಗೆ “ಚಾನಲ್ ನನ್ನ ಬಗ್ಗೆ ಮಾತ್ರವೇ ಅಲ್ಲ, ಇಲ್ಲಿ ಹೊಸ ಪ್ರತಿಭೆಗಳಿಗೆ ಸಹ ಅವಕಾಶವಿರಲಿದೆ” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

Comments are closed.