ರಾಷ್ಟ್ರೀಯ

ಬಿಜೆಪಿ ಸಂಸ್ಥಾಪನಾ ದಿನಾಚರಣೆ: ಶುಭ ಸಂದೇಶ ನೀಡಿದ ಮೋದಿ

Pinterest LinkedIn Tumblr

ನವದೆಹಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅದರ ನಡುವೆಯೇ ಇಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ. “ಪಕ್ಷವು ಹಗಲು-ರಾತ್ರಿ ದೇಶಕ್ಕಾಗಿ ಕೆಲಸ ಮಾಡಿದೆ, ಪಕ್ಷದ ಈ ಕಾರ್ಯದಕ್ಷತೆಗೆ ಬದಲಾಗಿ ಈ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಅದರ ಮಿತ್ರಪಕ್ಷಗಳಿಗೆ ಜನರ ಆಶೀರ್ವಾದ ದೊರೆಯಲಿದೆ” ಪ್ರಧಾನಿ ಭರವಸೆ ವ್ಯಕ್ತಪಡಿಸಿದ್ದಾರೆ.

“39 ವರ್ಷಗಳ ಹಿಂದೆ ಸಮಾಜಸೇವೆಯ ಬದ್ದತೆಯೊಡನೆ ಭಾರತೀಯ ಜನತಾ ಪಕ್ಷ ಜನ್ಮ ತಾಳಿತು. ಇಂದು ಅದೇ ಬಿಜೆಪಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿತು.ಕಾರ್ಯಕರ್ತರ ಶ್ರಮಕ್ಕಾಗಿ ಧನ್ಯವಾದಗಳು. ಬಿಜೆಪಿ ಬಾರತೀಯರ , ಆಬಾರತದ ಆದ್ಯತೆಯ ಪಕ್ಷವಾಗಿದೆ. ಸಂಸ್ಥಾಪನಾ ದಿನಾಚರಣೆಯ ಈ ಸಮಯದಲ್ಲಿ ನ್ಬಿಜೆಪಿ ಪರಿವಾರಕ್ಕೆ ಶುಭಾಶಯಗಳು” ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

“ನಮ್ಮ ಪಕ್ಷ ಮತ್ತು ನಮ್ಮ ಮೈತ್ರಿಕೂಟಗಳು ಭಾರತ ಜನರಿಂದ ಆಶೀರ್ವದಿಸಲ್ಪಡಲಿದೆ ಎನ್ನುವ್ದನ್ನು ಖಚಿತಪಡಿಸಲು ಬಿಜೆಪಿ ಕಾರ್ಯಕರ್ತರು ಹಾಗೂ ಇಡೀ ಕುಟುಂಬ ರಾತ್ರಿ-ಹಗಲು ಕೆಲಸ ಮಾಡುತ್ತದೆ ಎನ್ನುವ್ದರಲ್ಲಿ ನನಗೆ ವಿಶ್ವಾಸವಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಕೆಲಸಗಳಾಗಿದೆ.ಮತ್ತು ಮುಂದೆ ನಾವು ದೇಶಕ್ಕಾಗಿ ಇನ್ನಷ್ಟು ಮಾಡಲು ಉದ್ದೇಶ ಹೊಂದಿದ್ದೇವೆ. ಪ್ರಧಾನಿ ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಟ್ವೀಟ್ ಮಾಡಿ ಮೋದಿ ನೇತೃತ್ವದ ಹೊಸ ಭಾರತವನ್ನು ಕಟ್ಟಲು ಬಿಡುವಿಲ್ಲದೆ ಪ್ರಯತ್ನಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಈ ವೇಳೆ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾನಿ, ಹಾಗೂ ಶಾ ಅವರ ಭಾಷಣಗಳನ್ನೊಳಗೊಂಡ ಸಣ್ಣ ವೀಡಿಯೋವನ್ನು ಪ್ರಧಾನಿ ಬಿಡುಗಡೆಗೊಳಿಸಿದ್ದಾರೆ.

Comments are closed.