ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿ ಸಾಕಷ್ಟು ಜನಪ್ರಿಯವಾಗಿದ್ದ “ಮೂಡಲಮನೆ” ಧಾರಾವಾಹಿಯ “ನಾಣಿ” ಪಾತ್ರಧಾರಿ ನಟ ಅನಿಲ್ ಕುಮಾರ್(48) ನಿಧನರಾಗಿದ್ದಾರೆ.
ಕಿಉತೆರೆ, ಬೆಳ್ಳಿತೆರೆಗಳಲ್ಲಿ ನಟಿಸಿ ಹೆಸರಾಗಿದ್ದ ಅನಿಲ್ ಕುಮಾರ್ ಬಹು ಅಂಗಾಂಗ ವೈಫಲ್ಯದ ಕಾರಣ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.
ಹೆಗ್ಗೋಡಿನ ನೀನಾಸಂ ನಲ್ಲಿ ತರಬೇತಿ ಪಡೆಇದ್ದ ಅನಿಲ್ “ಮೂಡಲಮನೆ” ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ಮೂಡಲ ಮನೆ, ಬ್ರಹ್ಮಗಂಟು, ಲಕ್ಷ್ಮೀ ಬಾರಮ್ಮ, ಚಿ ಸೌ ಸಾವಿತ್ರಿ, ಪ್ರೀತಿ ಪ್ರೇಮ, ಅಳಗುಳಿ ಮನೆ, ಮದರಂಗಿ, ಜನುಮದ ಜೋಡಿ, ಮೊದಲಾದ ಧಾರಾವಾಹಿಯಲ್ಲಿ ನಟಿಸಿದ್ದ ಅನಿಲ್ ಕುಮಾರ್ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ “ಪಲ್ಲಟ” ದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು.
ಹೇಮಂತ್ ಅವರ “ಕವಲುದಾರಿ” ಚಿತ್ರದಲ್ಲಿ ಸಹ ಪಾತ್ರ ಮಾಡಿದ್ದ ಅನಿಲ್ ಇತ್ತೀಚೆಗೆ ಅನಾರೊಗ್ಯಕ್ಕೀಡಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನೂ ವಿಶೇಷವೆಂದರೆ ನೀನಾಸಂ ನಲ್ಲಿ ರಂಗ ತರಬೇತಿ ಪಡೆಯುವ ವೇಳೆ ಅನಿಲ್ ಗೆ ದರ್ಶನ್ ಸಹಪಾಠಿಯಾಗಿದ್ದರು. ನಟ ಅನಿಲ್ ನಿಧನಕ್ಕೆ ದರ್ಶನ್ ತೂಗುದೀಪ್, ಕರ್ನಾಟಕ ಟಿವಿ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
Comments are closed.