ರಾಷ್ಟ್ರೀಯ

ಪರೀಕ್ಷೆಗೆ ಓದದೆ ಪಬ್ ಜೀ ವಿಡಿಯೋ ಗೇಮ್ ಆಡುತ್ತಿದ್ದುದ್ದಕ್ಕೆ ಬೈಯ್ದ ಹೆತ್ತವರು; ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr

ಹೈದರಾಬಾದ್: ವಿದ್ಯಾರ್ಥಿಗಳಿಗೆ ಪ್ರಮುಖ ಘಟ್ಟವಾಗಿರುವ 10ನೇ ತರಗತಿ ಎಸ್ಎಸ್ಸಿ ಪರೀಕ್ಷೆಗೆ ಓದದೆ ಪಬ್ ಜೀ ವಿಡಿಯೋ ಗೇಮ್ ಆಡುತ್ತಿದ್ದುದ್ದಕ್ಕೆ ಹೆತ್ತವರು ಬೈಯ್ದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಮಲ್ಕಾಜ್ ಗಿರಿಯ ವಿಷ್ಣುಪುರಿ ಎಕ್ಸ್ ಟೆನ್ಶನ್ ನಿವಾಸಿ 16 ವರ್ಷ ವಯಸ್ಸಿನ ಕಲ್ಲಕುರಿ ಸಾಂಬಶಿವ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಮಲ್ಕಾಜ್ ಗಿರಿಯ ಗೌತಮಿ ಶಾಲೆಯ ವಿದ್ಯಾರ್ಥಿಯಾಗಿದ್ದ ಸಾಂಬಶಿವ ತನ್ನ ಮನೆಯಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಸಂಬಂಧ ಆತ್ಮಹತ್ಯೆಗೀಡಾದ ವಿದ್ಯಾರ್ಥಿ ತಂದೆ ಅರ್ಚಕರಾಗಿರುವ ಭರತ್ ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್ ಫೋನ್ ನಲ್ಲಿ ಪಬ್ ಜೀ ಗೇಮ್ ಆಡುತ್ತಿದ್ದ ಕಾರಣ ಸಾಂಬಶಿವನ ತಾಯಿ ಉಮಾದೇವಿ ಬೈದಿದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Comments are closed.